ಉತ್ತರ ಕರ್ನಾಟಕದ 8 ಜಿಲ್ಲೆಗಳಿಗೆ ಕೊರೋನಾ ಲಸಿಕೆ ಕೇಂದ್ರವಾಗಲಿದೆ ಬೆಳಗಾವಿ!

ಉತ್ತರ ಕರ್ನಾಟಕ 8 ಜಿಲ್ಲೆಗಳಲ್ಲಿನ ಜನರಿಗೆ ಕೊರೋನಾ ಲಸಿಕೆ ನೀಡಲು ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಬೆಳಗಾವಿಯಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಉತ್ತರ ಕರ್ನಾಟಕ 8 ಜಿಲ್ಲೆಗಳಲ್ಲಿನ ಜನರಿಗೆ ಕೊರೋನಾ ಲಸಿಕೆ ನೀಡಲು ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಬೆಳಗಾವಿಯಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ವಾಕ್-ಇನ್ ಕೂಲರ್, ವಾಕ್-ಇನ್ ಫ್ರೀಜರ್ ಮತ್ತು ಇತರ ಉಪಕರಣಗಳನ್ನು ಬೆಳಗಾವಿಯಲ್ಲಿ ಸ್ಥಾಪಿಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ನಡೆಸುತ್ತಿದೆ. 

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಶಿಕಾಂತ್ ಮುನ್ಯಾಲ್ ಮಾತನಾಡಿ, “ಲಸಿಕೆ ಲಸಿಕೆಗಳನ್ನು ನೀಡಲು ಮೀಸಲಿಟ್ಟಿರುವ ವಾಹನದಲ್ಲಿ ಸಾಗಿಸಲು ವಾಕ್-ಇನ್ ಫ್ರೀಜರ್ ಪೆಟ್ಟಿಗೆಗಳನ್ನು ವ್ಯವಸ್ಥೆಗೊಳಿಸಲಾಗುತ್ತಿದೆ. ಲಸಿಕೆ ಬಂದ ಕೂಡಲೇ ತಡ ಮಾಡದೆ ವಿತರಣೆ ಮಾಡಲು ಸಕಲ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಪುಣೆ, ಹೈದರಾಬಾದ್ ಮತ್ತು ಚೆನ್ನೈನಿಂದ ಬರುವ ಲಸಿಕೆಗಳು ಬೆಳಗಾವಿ ಕೇಂದ್ರದಲ್ಲಿ ಸಂಗ್ರಹವಾಗಿ ನಂತರ ಅಲ್ಲಿಂದ ವಿಜಯಪುರ, ಬಾಗಲಕೋಟೆ, ಧಾರವಾಡ, ಹಾವೇರಿ, ಕೊಪ್ಪಳ, ಉತ್ತರಕನ್ನಡ ಜಿಲ್ಲೆ, ಗದಗ ಸೇರಿದಂತೆ 8 ಜಿಲ್ಲೆಗಳಿಗೆ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. 

ಲಸಿಕೆ ಸಂಗ್ರಹಿಸಿಡುವ ಸಲುವಾಗಿ ಅಧಿಕಾರಿಗಳು ಈಗಾಗಲೇ ಜಿಲ್ಲೆಯಲ್ಲಿ 180 ಡೀಪ್ ಫ್ರೀಜರ್‌ಗಳು ಮತ್ತು ಐಸ್ ಲೈನ್ ರೆಫ್ರಿಜರೇಟರ್ (ಐಎಲ್‌ಆರ್) ಸ್ಥಾಪಿಸಿದ್ದಾರೆ. ಜಿಲ್ಲೆಯ ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಇವು ಲಭ್ಯವಾಗಲಿದೆ. 

ಲಸಿಕೆಯ ಮುಖ್ಯ ಸಂಗ್ರಹವು ಜಿಲ್ಲಾ ಆರೋಗ್ಯ ಅಧಿಕಾರಿ ಕಚೇರಿಯಲ್ಲಿರುತ್ತದೆ, ತದನಂತರ ಎಲ್ಲಾ ಆಸ್ಪತ್ರೆಗಳಿಗೆ ವಿತರಿಸಲಾಗುವುದು. ಲಸಿಕೆ ಸಂಗ್ರಹಕ್ಕೆಂದೇ ಕೋಣೆಯಲ್ಲಿ 2-8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವನ್ನು ಇರುವಂತೆ ನೋಡಿಕೊಳ್ಳಲಾಗುತ್ತಿದೆ. 

ಮೊದಲ ಹಂತದಲ್ಲಿ 195 ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ನರ್ಸ್'ಗಳು ಮತ್ತು 1,521 ಖಾಸಗಿ ಆಸ್ಪತ್ರೆಗಳಲ್ಲಿನ 28,195 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು.

ಎರಡನೇ ಹಂತದಲ್ಲಿ ಪೊಲೀಸರು, ಆಶಾ ಕಾರ್ಯಕರ್ತೆಯರು, ನೈರ್ಮಲ್ಯ ಕಾರ್ಮಿಕರು, ಶಿಕ್ಷಕರು ಸೇರಿದಂತೆ 2.5 ಲಕ್ಷ ಜನರಿಗೆ ಲಸಿಕೆ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com