ಕಾರ್ಮಿಕ ಪ್ರತಿಭಟನೆಗಳ ನಡುವೆ ರಾಜ್ಯದ 'ಕೈಗಾರಿಕೆ ಸ್ನೇಹಿ' ಚಿತ್ರಣವನ್ನು ಕಾಪಾಡಲು ಶೆಟ್ಟರ್, ಹೆಬ್ಬಾರ್ ಹೋರಾಟ

ಕೈಗಾರಿಕಾ ಸ್ನೇಹಿ ರಾಜ್ಯವಾಗಿ ಕಾಣುತ್ತಿರುವ ಕರ್ನಾಟಕದಲ್ಲಿ ಹೊಸ ಹೂಡಿಕೆಗಳಿಗಾಗಿ ಬಿರುಸಿನಿಂದ ಮುಂದುವರಿಯುತ್ತಿರಿವ ಈ ವೇಳೆಯಲ್ಲಿ , ಕಾರ್ಮಿಕರ ಪ್ರತಿಭಟನೆಯ ಹಠಾತ್ ಉಲ್ಬಣವು ಸರ್ಕಾರಕ್ಕೆ ತಲೆನೋವಾಗಿದೆ,ಆದಾಗ್ಯೂ, ಸಂಬಂಧಪಟ್ಟ ಮಂತ್ರಿಗಳು ಪರಿಹಾರಗಳನ್ನು ಕಂಡುಹಿಡಿಯಲು ಮತ್ತು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಲಾಗಿದೆ.
ಕಾರ್ಮಿಕ ಪ್ರತಿಭಟನೆಗಳ ನಡುವೆ ರಾಜ್ಯದ 'ಕೈಗಾರಿಕೆ ಸ್ನೇಹಿ' ಚಿತ್ರಣವನ್ನು ಕಾಪಾಡಲು ಶೆಟ್ಟರ್, ಹೆಬ್ಬಾರ್ ಹೋರಾಟ

ಬೆಂಗಳೂರು: ಕೈಗಾರಿಕಾ ಸ್ನೇಹಿ ರಾಜ್ಯವಾಗಿ ಕಾಣುತ್ತಿರುವ ಕರ್ನಾಟಕದಲ್ಲಿ ಹೊಸ ಹೂಡಿಕೆಗಳಿಗಾಗಿ ಬಿರುಸಿನಿಂದ ಮುಂದುವರಿಯುತ್ತಿರಿವ ಈ ವೇಳೆಯಲ್ಲಿ , ಕಾರ್ಮಿಕರ ಪ್ರತಿಭಟನೆಯ ಹಠಾತ್ ಉಲ್ಬಣವು ಸರ್ಕಾರಕ್ಕೆ ತಲೆನೋವಾಗಿದೆ,ಆದಾಗ್ಯೂ, ಸಂಬಂಧಪಟ್ಟ ಮಂತ್ರಿಗಳು ಪರಿಹಾರಗಳನ್ನು ಕಂಡುಹಿಡಿಯಲು ಮತ್ತು ಹೂಡಿಕೆದಾರರ ವಿಶ್ವಾಸವನ್ನು ಹೆಚ್ಚಿಸಲು ಶ್ರಮಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಪ್ರತಿಭಟನೆಗಳಲ್ಲಿ ಮೊದಲನೆ ಸ್ಥಾನದಲ್ಲಿರುವ ಬಿಡದಿ ಟೊಯೋಟಾ ಘಟಕದಲ್ಲಿ60 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಮಾನತುಗೊಳಿಸಲಾಗಿದೆ, ಇದು ಉತ್ಪಾದನೆಯ ಮೇಲೆ ಪರಿಣಾಮ ಬೀರಿದೆ.ರ್ಕಾರ ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ, ಕಾರ್ಮಿಕ ಸಂಘಗಳ ಪ್ರತಿಕ್ರಿಯೆ ಮಿಶ್ರವಾಗಿದೆ. ತಮ್ಮ ಸ್ವಂತ ಜಿಲ್ಲೆಯಾದ ಉತ್ತರ ಕನ್ನಡದ ಯಲ್ಲಾಪುರದಲ್ಲಿ ಗ್ರಾಮ ಪಂಚಾಯತ್ ಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ “ಟೊಯೋಟಾ ಕಾರ್ಖಾನೆಯಲ್ಲಿ 1,250 ಉದ್ಯೋಗಿಗಳು ಮತ್ತೆ ಕೆಲಸಕ್ಕೆ ಸೇರಿದ್ದಾರೆ. ಎರಡನೇ ಶಿಫ್ಟ್ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ನನಗೆ ವಿಶ್ವಾಸವಿದೆ. ” ಎಂದು ಪತ್ರಿಕೆಗೆ ತಿಳಿಸಿದರು.

ಬೃಹತ್ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಕೂಡ, “ನಾನು ಟೊಯೋಟಾ ಕಾರ್ಖಾನೆಯ ಸಮಸ್ಯೆ ಪರಿಹಾರಕ್ಕೆ ಮುಂದಾಗಿದ್ದು ಈಗಾಗಲೇ ನಿರ್ವಾಹಕರೊಂದಿಗೆ ಮಾತನಾಡಿದ್ದೇನೆ. ” ಎಂದರು.  ಕೈಗಾರಿಕಾ ವಿಭಾಗದ ಮೂಲಗಳು 60 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಟೊಯೋಟಾ ಆಡಳಿತವು ಅವರ ಹಿಂದಿನ ನಡವಳಿಕೆ ಮತ್ತು ಅವಿವೇಕದ ಕಾರಣ ಅವರೊಂದಿಗೆ ಮಾತುಕತೆ ನಡೆಸಲು ಉತ್ಸುಕವಾಗಿಲ್ಲ ಎಂದು ಎಂದು ಹೇಳಿವೆ.

ಅಮಾನತುಗೊಂಡ ಕಾರ್ಮಿಕರನ್ನು 1,000 ಕ್ಕೂ ಹೆಚ್ಚು ಉದ್ಯೋಗಿಗಳು ಬೆಂಬಲಿಸುತ್ತಿದ್ದಾರೆ, ಆದರೆ ಅವರಲ್ಲಿ ಹಲವರು ಕೆಲಸಕ್ಕೆ ಮರಳಲು ಸಿದ್ಧರಿದ್ದಾರೆ ಎಂದು ಮೂಲಗಳು ತಿಳಿಸಿವೆ. ರಾಜ್ಯದಲ್ಲಿ ಕಳೆದ ಕೆಲ ದಿನಗಳೀಂದ ಕಾರ್ಮಿಕರ ಮುಷ್ಕರಗಳು ನಡೆಯುತ್ತಿದ್ದು ಇದು ಟೊಯೋಟಾ ಘಟಕದಿಂದ ಪ್ರಾರಂಭವಾಯಿತು, ಅದರ ನಂತರ ಐಫೋನ್‌ಗಳನ್ನು ತಯಾರಿಸುವ ವಿಸ್ಟ್ರಾನ್ ಕಾರ್ಪೊರೇಷನ್, ಮತ್ತು ನಂತರ ಮೈಸೂರುವಿನ ಏಷ್ಯನ್ ಪೇಂಟ್ಸ್ ಕಾರ್ಖಾನೆಗೆ ವಿಸ್ತರಿಸಿದೆ. ಅಲ್ಲಿ ತಮ್ಮ ಭೂಮಿಯನ್ನು ಘಟಕಕ್ಕೆ ಬಿಟ್ಟುಕೊಟ್ಟ ರೈತರು ಕಂಪನಿಯು ಅವರಿಗೆ ಉದ್ಯೋಗ ನೀಡುವ ಭರವಸೆಯನ್ನು ಹುಸಿಯಾಗಿಸಿದೆ ಎಂದು ಪ್ರತಿಭಟನೆಗೆ ಇಳಿದಿದ್ದಾರೆ.

ಏತನ್ಮಧ್ಯೆ, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಗುರುವಾರ ಪುನರಾವರ್ತಿತ ದುಷ್ಕೃತ್ಯ ಮತ್ತು ವಿವೇಚನಾರಹಿತ ಕೆಲಸಕ್ಕಾಗಿ ಐದು ಉದ್ಯೋಗಿಗಳ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಿದೆ ಎಂದು ಶನಿವಾರ ವರದಿಯಾಗಿದೆ. ಇದು ‘ಸಸ್ಪೆನ್ಷನ್ ಬಾಕಿ ಉಳಿದಿರುವ ವಿಚಾರಣೆಯಡಿಯಲ್ಲಿ ಇರಿಸಲಾಗಿರುವ 60 ಟಿಕೆಎಂ ಯೂನಿಯನೈಸ್ಡ್ ಉದ್ಯೋಗಿಗಳಿಗೆ ಹೆಚ್ಚುವರಿಯಾಗಿರುತ್ತದೆ. ಇದಲ್ಲದೆ ಎರಡು ವಾರಗಳ ಹಿಂದೆ ಸಚಿವ ಹೆವ್ವಾರ್ ತಾವು “ ನಾನು ಶೀಘ್ರದಲ್ಲೇ ಸ್ಟ್ರಾನ್ ಕಾರ್ಖಾನೆಘಟಕಕ್ಕೆ ಭೇಟಿ ನೀಡುತ್ತೇನೆ ಮತ್ತು ನಂತರ ಪ್ರಶ್ನೆಗಳಿಗೆ ಉತ್ತರಿಸುತ್ತೇನೆ ”ಎಂದು ಹೇಳಿದ್ದರು.

ಕಂಪನಿಯು ಕಾರ್ಮಿಕ ಮಾನದಂಡಗಳನ್ನು ಉಲ್ಲಂಘಿಸಿದೆ ಎಂದು ಹೇಳಲಾಗುತ್ತಿರುವುದರಿಂದ ಸರ್ಕಾರವು ವಿಸ್ಟ್ರಾನ್‌ನಲ್ಲಿನ ಸಮಸ್ಯೆಗಳನ್ನು ಗಂಭೀರವಾಗಿ ನೋಡುತ್ತಿದೆ ಎಂದು ಮೂಲಗಳು ತಿಳಿಸಿವೆ. ವಿಸ್ಟ್ರಾನ್ ಸೌಲಭ್ಯವು ಚೀನಾದ ಸ್ವೆಟ್‌ಶಾಪ್ ಆಗಿ ಬದಲಾಗಬಾರದು ಎಂಬ ಆತಂಕ ಸರ್ಕಾರಕ್ಕಿದೆಎಂದು ಮೂಲಗಳು ತಿಳಿಸಿವೆ. ಕಾರ್ಮಿಕ ಸಮಸ್ಯೆಗಳಿಗೆ ಶೀಘ್ರ ಸುಲಭ ಪರಿಹಾರವನ್ನು ಬಯಸುವ ಸರ್ಕಾರ ಮತ್ತು ಕಾರ್ಮಿಕರ ನಡುವೆ ಸಚಿವರಾದ ಶೆಟ್ಟರ್ ಹಾಗೂ ಹೆಬ್ಬಾರ್ ಸಿಲುಕಿದ್ದಾರೆ. 

ಮೈಸೂರಿನ ಪೇಂಟಿಂಗ್ ಘಟಕದಲ್ಲಿನ ರೈತರ ಪ್ರತಿಭಟನೆ 34 ನೇ ದಿನಕ್ಕೆ

ಮೈಸೂರು: ಶೀತದ ವಾತಾವರಣದಲ್ಲಿಯೂ ಇಮ್ಮಾವು ರೈತರು 34 ನೇ ದಿನವೂ ಏಷ್ಯನ್ ಪೇಂಟ್ಸ್ ಕಾರ್ಖಾನೆಯ ಮುಂದೆ ಅನಿರ್ದಿಷ್ಟ ಮುಷ್ಕರದಲ್ಲಿ ಕುಳಿತಿದ್ದಾರೆ. "ಒಂದು ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರೊಂದಿಗಿನ ಸಭೆಯ ಬಗ್ಗೆ ಸ್ಥಳೀಯ ಅಧಿಕಾರಿಗಳು ನಮಗೆ ಭರವಸೆ ನೀಡಿದ್ದರು. ಆದರೆ ಈಗ ಎರಡು ವಾರಗಳಾಗಿದ್ದರೂ ಸಚಿವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೆಐಎಡಿಬಿಅಧಿಕಾರಿಗಳಿಗೂ ಇದು ಅನ್ವಯಿಸುತ್ತದೆ, ”ಎಂದು ಪ್ರತಿಭಟನಾಕಾರರಲ್ಲಿ ಒಬ್ಬರಾದ ಸಚಿನ್ ಹೇಳಿದರು.

ಸಚಿವರ ಯಾವುದೇ ಪ್ರತಿಕ್ರಿಯೆ ಬರದ ಕಾರಣ ರೈತರು ಕಾರ್ಖಾನೆ ಆಡಳಿತಕ್ಕೆ ಬಿಸಿ ಮುಟ್ಟಿಸಲು ಕಾರ್ಖಾನೆಗೆ ಮುತ್ತಿಗೆ ಹಾಕಲು ಯೋಜಿಸಿದ್ದಾರೆ. "ಕಾರ್ಖಾನೆಯ ಅಧಿಕಾರಿಗಳು ತಪ್ಪಿಗೆ ಪಶ್ಚಾತ್ತಾಪ ಪಡುವ ಯಾವುದೇ ಲಕ್ಷಣಗಳನ್ನು ತೋರಿಸದ ಕಾರಣ, ಕೆಐಎಡಿಬಿಷರತ್ತು ಜಾರಿಗೆ ತರಲು ನಾವು ಸೂಚಿಸಿದ್ದೇವೆ, ಅದು ನೋಟಿಸ್ ನೀಡಲು ಅನುವು ಮಾಡಿಕೊಡುತ್ತದೆ, ಕಂಪನಿಗೆಕ್ರಮ ತೆಗೆದುಕೊಳ್ಲದೆ ಹೋದಲ್ಲಿ  ಭೂ ಭೋಗ್ಯವನ್ನು ರದ್ದುಗೊಳಿಸುವ ಎಚ್ಚರಿಕೆ ನೀಡುತ್ತದೆ" ರೈತ ಸಂಘದ ಹೊಸಕೋಟೆ ಬಸವರಾಜ್ ಹೇಳಿದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com