ಗ್ರಾಮ ಪಂಚಾಯಿತಿ ಚುನಾವಣೆ; 2ನೇ ಹಂತದಲ್ಲಿ ಶೇ.81ರಷ್ಟು ಮತದಾನ, ಡಿ.30ಕ್ಕೆ ಫಲಿತಾಂಶ
ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಕೋವಿಡ್-19 ಆತಂಕದ ನಡುವೆಯೂ ಸುಮಾರು ಸೇ.80.71ರಷ್ಟು ಮತದಾನವಾಗಿದ್ದು, ಮತದಾನ ಬಹಿಷ್ಕಾರ, ಅಭ್ಯರ್ಥಿಗಳ ಚಿಹ್ನೆ ಬದಲು, ಸಣ್ಣಪುಟ್ಟ ಗಲಾಟೆ, ಗೊಂದಲಗಳನ್ನು ಹೊರತುಪಡಿಸಿದರೆ ಶಾಂತಿಯುತ ಮತದಾನ ನಡೆದಿದೆ.
Published: 28th December 2020 07:29 AM | Last Updated: 28th December 2020 12:41 PM | A+A A-

ಮತದಾನ ಮಾಡಿ ಹೊರಬರುತ್ತಿರುವ ಜನರು
ಬೆಂಗಳೂರು: ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ಕೋವಿಡ್-19 ಆತಂಕದ ನಡುವೆಯೂ ಸುಮಾರು ಸೇ.80.71ರಷ್ಟು ಮತದಾನವಾಗಿದ್ದು, ಮತದಾನ ಬಹಿಷ್ಕಾರ, ಅಭ್ಯರ್ಥಿಗಳ ಚಿಹ್ನೆ ಬದಲು, ಸಣ್ಣಪುಟ್ಟ ಗಲಾಟೆ, ಗೊಂದಲಗಳನ್ನು ಹೊರತುಪಡಿಸಿದರೆ ಶಾಂತಿಯುತ ಮತದಾನ ನಡೆದಿದೆ.
2ನೇ ಹಂತದಲ್ಲಿ ರಾಜ್ಯದ 109 ತಾಲೂಕುಗಳ 2,709 ಗ್ರಾಮ ಪಂಚಾಯಿತಿಗಳ 39,378 ಸ್ಥಾನಗಳಿಗೆ ಸ್ಪರ್ಧಿಸಿದ್ದ 1,05,431 ಅಭ್ಯರ್ಥಿಗಳ ಹಣೆಬರಹವನ್ನು ಮತದಾರರು ಬರೆದಿದ್ದಾರೆ.
ಇನ್ನೂ ಎರಡೂ ಹಂತ ಸೇರಿಸಿ 226 ತಾಲೂಕುಗಳ 5,728 ಗ್ರಾಮ ಪಂಚಾಯತಿಗಳ 82,616 ಸ್ಥಾನಗಳಿಗೆ ನಡೆದ ಚನಾವಣೆಯ ಮತ ಎಣಿಕೆಯು ಡಿ.30 ರಂದು ನಡೆಯಲಿದೆ.
ಒಟ್ಟು 2,22814 ಅಭ್ಯರ್ಥಿಗಳ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರವಾಗಿಡಲಾಗಿದೆ. ಆಯಾ ತಾಲೂಕುಗಳಲ್ಲಿ ನಿಗದಿಪಡಿಸಿರುವ ಮತ ಎಣಿಕೆ ಕೇಂದ್ರದಲ್ಲಿ ಮತ ಪೆಟ್ಟಿಗೆಗಳನ್ನಿಡಲಾಗಿದೆ. ಮತ ಪಟ್ಟಿಗೆ ಇಟ್ಟಿರುವ ಸ್ಥಳಗಳಿಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಡಿ.30ರಂದು ಆಯಾ ತಾಲೂಕು ಕೇಂದ್ರದಲ್ಲಿ ಬೆಳಗ್ಗೆ 8 ಗಂಟೆಗೆ ಎರಡೂ ಹಂತದ ಮತ ಎಣಿಕೆ ಕಾರ್ಯ ನಡೆಯಲಿದೆ.