ರಾಯಚೂರು: ಚಾಕುವಿನಿಂದ ಇರಿದು ಮಹಿಳೆಯ ಬರ್ಬರ ಹತ್ಯೆ

ಮಹಿಳೆಯೊಬ್ಬರನ್ನು ಆಕೆಯ ಸಂಬಂಧಿಯೇ ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

Published: 28th December 2020 10:33 AM  |   Last Updated: 28th December 2020 12:46 PM   |  A+A-


Posted By : Raghavendra Adiga
Source : Online Desk

ರಾಯಚೂರು: ಮಹಿಳೆಯೊಬ್ಬರನ್ನು ಆಕೆಯ ಸಂಬಂಧಿಯೇ ಚಾಕುವಿನಿಂದ ಇರಿದು ಬರ್ಬರ ಹತ್ಯೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.

ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಮುದಗಲ್ ಪೇಟೆಯ ವೆಂಕಟರಾಯನಪೇಟೆ ಬಡಾವಣೆಯಲ್ಲಿ ಘಟನೆ ನಡೆದಿದ್ದು ಮೃತಳನ್ನು ನೇತ್ರಾವತಿ (33) ಎಂದು ಗುರುತಿಸಲಾಗಿದೆ.

ನೇತ್ರಾವತಿಯ ಸಂಬಂಧಿಯಾದ ಶಿವರಾಜ ಎಂಬಾತನೇ ಮಹಿಳೆಯ ಹತ್ಯೆ ಮಾಡಿದ್ದು ತಿಳಿದುಬಂದಿದೆ. ಕೃತ್ಯ ನಡೆಸಿದ ಆರೋಪಿ ಸಧ್ಯ ಪರಾರಿಯಾಗಿದ್ದಾನೆ.

ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. 

ನೇತ್ರಾವತಿ

ಸ್ಥಳಕ್ಕೆ ಮುದಗಲ್ ಪೋಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಶಿವರಾಜನಿಗಾಗಿ ಶೋಧ ನಡೆದಿದೆ. 

Stay up to date on all the latest ರಾಜ್ಯ news
Poll
Kumbh-Covid-19

ಚುನಾವಣಾ ಸಮಾವೇಶ, ಕುಂಭಮೇಳ, ಧಾರ್ಮಿಕ ಸಭೆಗಳು ದೇಶದಲ್ಲಿ ಕೋವಿಡ್-19 ಪರಿಸ್ಥಿತಿಯನ್ನು ಹದಗೆಡಿಸುತ್ತಿವೆಯೇ?


Result
ಹೌದು, ಅದು ನಿಜ.
ಇಲ್ಲ, ಖಂಡಿತ ಅಲ್ಲ.
flipboard facebook twitter whatsapp