ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಧ್ವಜ ಹಾರಿಸಲು ಹೋರಾಟಗಾರರ ಯತ್ನ!

ಮಹಾನಗರಪಾಲಿಕೆ ಕಟ್ಟಡದ ದ್ವಾರದ ಬಳಿ ಕನ್ನಡ ಹೋರಾಟಗಾರರು ಸೋಮವಾರ ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿದರು.
ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜ
ಬೆಳಗಾವಿ ಪಾಲಿಕೆ ಎದುರು ಕನ್ನಡ ಧ್ವಜ

ಬೆಳಗಾವಿ: ಮಹಾನಗರಪಾಲಿಕೆ ಕಟ್ಟಡದ ದ್ವಾರದ ಬಳಿ ಕನ್ನಡ ಹೋರಾಟಗಾರರು ಸೋಮವಾರ ಧ್ವಜಸ್ತಂಭ ಸ್ಥಾಪಿಸಿ ಕನ್ನಡ ಬಾವುಟ ಹಾರಿಸಿದರು.

‘ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ’, ‘ಕರ್ನಾಟಕ ಮಾತೆಗೆ ಜೈ’, ‘ತಾಯಿ ಭುವನೇಶ್ವರಿಗೆ ಜೈ’ ಎಂದು ಘೋಷಣೆ ಕೂಗುತ್ತಾ, ಬಾವುಟ ಕಟ್ಟಿದ್ದ ಸ್ತಂಭವನ್ನು ಅವರು ಹೊತ್ತು ತಂದು ಸ್ಥಾಪಿಸಿದರು.

‘ಪಾಲಿಕೆ ಎದುರು ಕನ್ನಡ ದ್ವಜ ಸ್ತಂಭ ಸ್ಥಾಪಿಸಲು ಅನುಮತಿ ಇಲ್ಲ’ ಎಂದು ಪೊಲೀಸರು ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕನ್ನಡ ಪರ ಹೋರಾಟಗಾರ ಶ್ರೀನಿವಾಸ ತಾಳೂಕರ, ‘ಅದು ನಿಮ್ಮ ಕೆಲಸವಲ್ಲ. ಕನ್ನಡ ನೆಲದಲ್ಲಿ ಕನ್ನಡ ಬಾವುಟ ಹಾರಿಸಲು ಅವಕಾಶವಿಲ್ಲವೆಂದರೆ ಏನರ್ಥ? ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಕನ್ನಡಕ್ಕೆ ದ್ರೋಹ ಬಗೆಯಬೇಡಿ’ ಎಂದು ಕಿಡಿಕಾರಿದರು.

ಸ್ತಂಭವನ್ನು ವಶಕ್ಕೆ ಪಡೆಯಲು ಮುಂದಾದಾಗ, ಕೆಲವರು ರಾಷ್ಟ್ರಗೀತೆ ಹಾಡಿದರು. ಆ ನಡುವೆಯೂ ಪೊಲೀಸರು ಸ್ತಂಭವನ್ನು ವಶಕ್ಕೆ ಪಡೆದುಕೊಳ್ಳಲು ಯತ್ನಿಸಿದರು. ತಾಳೂಕರ ಮೊದಲಾದವರು ಕನ್ನಡದ ಬಾವುಟ ಶಾಲನ್ನು ಕುತ್ತಿಗೆಗೆ ಮತ್ತು ಸ್ತಂಭಕ್ಕೆ ಸೇರಿಸಿ ಬಿಗಿದುಕೊಂಡು ಕುಳಿತರು. ಕನ್ನಡ ಪರ ಕಾರ್ಯಕರ್ತರಾದ ಕಸ್ತೂರಿ ಭಾವಿ, ಶ್ರೀನಿವಾಸ್ ತಾಳೂತರ ಮತ್ತು ಇತರರು ಪಾಲಿಕೆ ಆವರಣದಲ್ಲಿ ಬಾವುಟ ಹಾರಿಸಿದ ನಂತರ ರಾಜ್ಯ ಸರ್ಕಾರ, ಚುನಾಯಿತ ಪ್ರತಿನಿಧಿಗಳು ಮತ್ತು ಪೊಲೀಸ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಅಧಿಕಾರಿಗಳು ಬಾವುಟ ತೆಗೆದು ಹಾಕಿದರೇ ತಮ್ಮ ಪ್ರಾಣ ಕಳೆದುಕೊಳ್ಳುವುದಾಗಿ ಕಾರ್ಯಕರ್ತರು ಬೆದರಿಕೆ ಹಾಕಿದರು, ಸಮಾಜ ಸೇವಕ ಮತ್ತು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಕೂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಬಿಸಿಸಿ ಯಲ್ಲಿ ಕನ್ನಡ ಧ್ವಜವನ್ನು ಹಾರಿಸಿದರೆ ಏನು ತಪ್ಪು?” ಬೆಳಗಾವಿ ನಗರ ಪಾಲಿಕೆ ಪ್ರಾರಂಭವಾದಾಗಿನಿಂದಲೂ, ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಭಾಷೆಯ ಸುತ್ತಲೂ ಇರುತ್ತವೆ. ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಬೆಂಬಲದೊಂದಿಗೆ, ಮರಾಠರು ಹಲವಾರು ದಶಕಗಳಿಂದ  ನಿಗಮದಲ್ಲಿ ಪ್ರಾಬಲ್ಯ ಹೊಂದಿದ್ದು, ನಿಗಮದಲ್ಲಿ ಕೇಸರಿ ಧ್ವಜವನ್ನು ಹಾರಿಸಿದ್ದಾರೆ ಎಂದು ಕಾಂಗ್ರೆಸ್ ವಕ್ತಾರೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

ಈಗ, ಕಾಂಗ್ರೆಸ್ ಮತ್ತು ಬಿಜೆಪಿ ಪಾಲಿಕೆ ಚುನಾವಣೆಯಲ್ಲಿ ಪಕ್ಷದ ಚಿಹ್ನೆಗಳ ಮೇಲೆ ಸ್ಪರ್ಧಿಸುವುದಾಗಿ ಘೋಷಿಸಿವೆ. ಈ ಇತ್ತೀಚಿನ ಘಟನೆಯು ಚುನಾವಣೆಗೆ ಮುಂಚಿತವಾಗಿ ಭಾಷಾ ರಾಜಕೀಯವನ್ನು ಪ್ರೇರೇಪಿಸುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com