ಹುಲಿ ಅಭಯಾರಣ್ಯ ಪಕ್ಕ ಖಾಸಗಿ ಹೆಲಿಕಾಪ್ಟರ್ ಲ್ಯಾಂಡಿಂಗ್: ವನ್ಯಜೀವಿ ರಕ್ಷಣೆ ಕಾರ್ಯಕರ್ತರ ವಿರೋಧ

ಹುಲಿ ಅಭಯಾರಣ್ಯ ಹತ್ತಿರ ಖಾಸಗಿ ಹೆಲಿಕಾಪ್ಟರ್ ನ್ನು ನಿಲ್ಲಿಸಲು ಅನುವು ಮಾಡಿಕೊಟ್ಟ ಸರ್ಕಾರದ ನಡೆಗೆ ವನ್ಯಜೀವಿ ಕಾರ್ಯಕರ್ತರ ಒಂದು ಗುಂಪು ಆಕ್ರೋಶ ವ್ಯಕ್ತಪಡಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ: ಹುಲಿ ಅಭಯಾರಣ್ಯ ಹತ್ತಿರ ಖಾಸಗಿ ಹೆಲಿಕಾಪ್ಟರ್ ನ್ನು ನಿಲ್ಲಿಸಲು ಅನುವು ಮಾಡಿಕೊಟ್ಟ ಸರ್ಕಾರದ ನಡೆಗೆ ವನ್ಯಜೀವಿ ಕಾರ್ಯಕರ್ತರ ಒಂದು ಗುಂಪು ಆಕ್ರೋಶ ವ್ಯಕ್ತಪಡಿಸಿದೆ.

ಕಳೆದ ವಾರ, ಟಿವಿಎಸ್ ಗ್ರೂಪ್ ಆಫ್ ಕಂಪೆನಿಯ ಅಧ್ಯಕ್ಷ ವೇಣು ಶ್ರೀನಿವಾಸನ್ ತಮ್ಮ ಖಾಸಗಿ ಹೆಲಿಕಾಪ್ಟರ್ ನ್ನು ಹುಬ್ಬಳ್ಳಿಯ ಬೆಜ್ಜುಲುಪಾಳ್ಯ ಗ್ರಾಮದ ಕಂದಾಯ ಭೂಮಿಯಲ್ಲಿ ತಾತ್ಕಾಲಿಕ ಹೆಲಿಪ್ಯಾಡ್ ನಲ್ಲಿ ನಿಲುಗಡೆ ಮಾಡಿದ್ದರು.

ಈ ಗ್ರಾಮ ಬಿಆರ್ ಟಿ ಹುಲಿ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯದಲ್ಲಿ ವ್ಯಾಪ್ತಿಯಲ್ಲಿದ್ದು ಸುಪ್ರೀಂ ಕೋರ್ಟ್ ನ ಮಾರ್ಗಸೂಚಿ ಪ್ರಕಾರ ಖಾಸಗಿ ಹೆಲಿಕಾಪ್ಟರ್, ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ.

ಅರಣ್ಯ ಇಲಾಖೆ ಸೇರಿದಂತೆ ಇತರ ಸರ್ಕಾರಿ ಸಂಸ್ಥೆಗಳೊಂದಿಗೆ ಸಮಾಲೋಚಿಸಿ ಹೆಲಿಕಾಪ್ಟರ್ ಇಳಿಯಲು ಅನುಮತಿ ನೀಡಲಾಗಿತ್ತು ಎಂದರೆ, ಶ್ರೀನಿವಾಸನ್ ಹೆಲಿಕಾಪ್ಟರ್ ಇಳಿಯಲು ಅನುಮತಿ ನೀಡುವಂತೆ ಮೇಲಿನಿಂದ ಪ್ರಭಾವಿ ವ್ಯಕ್ತಿಗಳ ಒತ್ತಡವಿತ್ತು ಎಂಬ ಆರೋಪ ಪರಿಸರ ರಕ್ಷಣಾಪರ ಹೋರಾಟಗಾರರದ್ದು.

ಶ್ರೀನಿವಾಸನ್ ಅವರ ಹೆಲಿಕಾಪ್ಟರ್ ಇಳಿಸಲು ಮೈಸೂರಿನ ಉಸ್ತುವಾರಿ ಸಮಿತಿಯ ಸ್ಥಳೀಯ ಆಯುಕ್ತರು ಅನುಮತಿ ನೀಡಿದ್ದರು ಎಂದು ಹೇಳಲಾಗುತ್ತಿದೆ.

ಹುಲಿ ಅಭಯಾರಣ್ಯದ ಸುತ್ತಮುತ್ತ ಹೆಲಿಕಾಪ್ಟರ್ ಹಾರಾಟವನ್ನು ನಿಷೇಧಿಸಲಾಗಿದೆ. ಈ ಹಿಂದೆ ಹಲವು ಬಾರಿ ಇಲಾಖೆ ಮತ್ತು ಸರ್ಕಾರ ಅನುಮತಿ ನಿರಾಕರಿಸಿತ್ತು. ಬಂಡೀಪುರ ಹುಲಿ ಅಭಯಾರಣ್ಯ ಪಕ್ಕ ಕೆಲ ವರ್ಷಗಳ ಹಿಂದೆ ತಾತ್ಕಾಲಿಕ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಆದರೆ ಹಾರಾಟ ಚಟುವಟಿಕೆಗಳಿಗೆ ಅನುಮತಿ ನಿರಾಕರಿಸಲಾಯಿತು. ಹೆಲಿಪ್ಯಾಡ್ ನಿರ್ಮಿಸಿದರೆ ವಿಐಪಿಗಳ ಹಾರಾಟವನ್ನು ತಡೆಯಲು ಸಾಧ್ಯವಾಗುವುದಿಲ್ಲ. ಬಿಆರ್‌ಟಿ ಹುಲಿ ಮೀಸಲು ಅರಣ್ಯದ ಪರಿಸರ ಸೂಕ್ಷ್ಮ ವಲಯದಲ್ಲಿ ರಚಿಸಲಾದ ತಾತ್ಕಾಲಿಕ ಹೆಲಿಪ್ಯಾಡ್ ಅನ್ನು ಕಿತ್ತುಹಾಕಿರುವ ಬಗ್ಗೆ ನಮಗೆ ಖಚಿತ ಭರವಸೆ ಸರ್ಕಾರ ನೀಡಬೇಕು ಎಂದು ಪರಿಸರ ಹೋರಾಟಗಾರರು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com