ಅಂಚೆ ಕಚೇರಿಯ ಕೆಂಪು ಪೆಟ್ಟಿಗೆಯಿಂದ ಮನೆ ಬಾಗಿಲಿಗೆ: ಪತ್ರಗಳ ಇ-ಕ್ಲಿಯರೆನ್ಸ್ ವಿಲೇವಾರಿ 

ರಾಜ್ಯದ ಅಂಚೆ ಕಚೇರಿಗಳ ಕೆಂಪು ಬಾಕ್ಸ್ ಗಳಲ್ಲಿ ಹಾಕಿದ ಪತ್ರಗಳನ್ನು ಇ ವಿಲೇವಾರಿ ಮಾಡಲು ಅಂಚೆ ಕಚೇರಿ ಸಿಬ್ಬಂದಿ ಪ್ರಕ್ರಿಯೆ ಆರಂಭಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ಅಂಚೆ ಕಚೇರಿಗಳ ಕೆಂಪು ಬಾಕ್ಸ್ ಗಳಲ್ಲಿ ಹಾಕಿದ ಪತ್ರಗಳನ್ನು ಇ ವಿಲೇವಾರಿ ಮಾಡಲು ಅಂಚೆ ಕಚೇರಿ ಸಿಬ್ಬಂದಿ ಪ್ರಕ್ರಿಯೆ ಆರಂಭಿಸಿದ್ದಾರೆ.

ಇದರಿಂದ ನಾಗರಿಕರಿಗೆ ಪತ್ರ ತಲುಪಲು ಸುಲಭವಾಗುವುದಲ್ಲದೆ, ಅಂಚೆ ಕಚೇರಿ ಸಿಬ್ಬಂದಿಗೆ ಸಹ ಕೆಲಸದಲ್ಲಿ ಅನುಕೂಲವಾಗಲಿದೆ. ಇದರ ಪ್ರಾಯೋಗಿಕ ಯೋಜನೆಯನ್ನು ಯಶಸ್ವಿಯಾಗಿ ನಡೆಸಿರುವ ಕರ್ನಾಟಕ ವೃತ್ತ ಅಂಚೆ ಇಲಾಖೆ, ಎರಡು ತಿಂಗಳ ಹಿಂದೆ ಇ-ಕ್ಲಿಯರೆನ್ಸ್ ಪ್ರಯೋಗವನ್ನು ಆರಂಭಿಸಿತ್ತು.

ಕರ್ನಾಟಕದಲ್ಲಿ ಸುಮಾರು 7,200 ಅಂಚೆ ಬಾಕ್ಸ್ ಗಳಲ್ಲಿರುವ 2,184 ಪತ್ರಗಳನ್ನು ಇ-ವಿಲೇವಾರಿ ಮಾಡಿದ್ದೇವೆ. ಅವುಗಳಲ್ಲಿ 740 ಅಂಚೆ ಬಾಕ್ಸ್ ಗಳು ಬೆಂಗಳೂರಿನದ್ದಾಗಿವೆ ಎಂದು ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ ವಿ ತಾರಾ ತಿಳಿಸಿದ್ದಾರೆ.

ಪ್ರಮುಖ ನಗರಗಳಲ್ಲಿ ಇ-ಕ್ಲಿಯರೆನ್ಸ್ ನ್ನು ಆರಂಭದಲ್ಲಿ ಪ್ರಯೋಗ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಿಗೆ ಸಹ ವಿಸ್ತರಿಸಲಾಗುವುದು. ಡೆಲಿವರಿ ಬಾಕ್ಸ್ ನ ಒಳಭಾಗದಲ್ಲಿ ಬಾರ್ ಕೋಡ್ ನ್ನು ಹಚ್ಚಲಾಗುತ್ತದೆ. ನಿರ್ದಿಷ್ಟ ವಿಲೇವಾರಿ ಪೆಟ್ಟಿಗೆಯಿಂದ ಪತ್ರಗಳನ್ನು ಸಂಗ್ರಹಿಸಿದ ನಂತರ ಕೋಡ್ ನ್ನು ಗ್ರಾಹಕರು ತಮ್ಮ ಫೋನ್ ಗಳಲ್ಲಿ ಸಾಫ್ಟ್ ವೇರ್ ಡೌನ್ ಲೋಡ್ ಮಾಡಿಕೊಳ್ಳಬಹುದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com