ಕರ್ನಾಟಕದಲ್ಲಿ ಸದ್ಯದಲ್ಲಿಯೇ ಮರಳು ನೀತಿ ಜಾರಿ: ಗಣಿ ಇಲಾಖೆ ಸಚಿವ ಸಿ.ಸಿ.ಪಾಟೀಲ್ 

ಹೊಸ ಮರಳು ನೀತಿಯನ್ನು ಜಾರಿಗೆ ತರುವ ಯೋಜನೆಯಲ್ಲಿ ಸರ್ಕಾರವಿದ್ದು, ರಾಜ್ಯದಲ್ಲಿ ಸದ್ಯದಲ್ಲಿಯೇ ಜಾರಿಗೆ ತರಲಾಗುವುದು ಎಂದು ಗಣಿ ಮತ್ತು ಭೂಗರ್ಭ ಇಲಾಖೆ ಸಚಿವ ಸಿ ಸಿ ಪಾಟೀಲ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಹೊಸ ಮರಳು ನೀತಿಯನ್ನು ಜಾರಿಗೆ ತರುವ ಯೋಜನೆಯಲ್ಲಿ ಸರ್ಕಾರವಿದ್ದು, ರಾಜ್ಯದಲ್ಲಿ ಸದ್ಯದಲ್ಲಿಯೇ ಜಾರಿಗೆ ತರಲಾಗುವುದು ಎಂದು ಗಣಿ ಮತ್ತು ಭೂಗರ್ಭ ಇಲಾಖೆ ಸಚಿವ ಸಿ ಸಿ ಪಾಟೀಲ್ ತಿಳಿಸಿದ್ದಾರೆ.

ನಿನ್ನೆ ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ನೀತಿ ಜನಸ್ನೇಹಿಯಾಗಿರಲಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಮೂರು ಹಂತಗಳಲ್ಲಿ ಮರಳನ್ನು ಮಾರಾಟ ಮಾಡುವುದಕ್ಕೆ ಇದು ಅವಕಾಶ ಮಾಡಿಕೊಡಲಿದ್ದು ಸಾರ್ವಜನಿಕರು ತಮ್ಮ ಬಳಕೆಗೆ ಅದನ್ನು ಖರೀದಿ ಮಾಡಬಹುದು ಎಂದರು.

ಒಂದು ಟನ್ ಮರಳು 300ರಿಂದ 350 ರೂಪಾಯಿಗೆ ಜನರಿಗೆ ಸಿಗಬೇಕು ಎಂಬುದು ನಮ್ಮ ಉದ್ದೇಶ.ಮುಂದಿನ ಮೂರು ಹಂತಗಳಲ್ಲಿ ಮರಳನ್ನು ಹೊರತೆಗೆಯುವುದು ಮತ್ತು ಮಾರಾಟ ಮಾಡುವುದನ್ನು ಮೈಸೂರು ಮಿನರಲ್ಸ್ ಲಿಮಿಟೆಡ್ ನಲ್ಲಿ ಮಾಡಲಾಗುವುದು. ಮತ್ತೆ ಅರ್ಧ ಹಟ್ಟಿ ಚಿನ್ನದ ಗಣಿ ಕಂಪೆನಿಯಿಂದ ತೆಗೆಯಲಾಗುವುದು. ಹೊಸ ಮರಳು ನೀತಿಗೆ ಕರಡು ಸಿದ್ದವಾಗಿದ್ದು ಅದನ್ನು ಜಾರಿಗೆ ತರಬೇಕಿದೆ ಎಂದರು.

ಕೋವಿಡ್-19 ಸಾಂಕ್ರಾಮಿಕ ಇದನ್ನೆಲ್ಲ ವಿಳಂಬ ಮಾಡಿದೆ. ಗಣಿ ಚಟುವಟಿಕೆ ಎಲ್ಲೆಲ್ಲ ನಡೆಯುತ್ತಿದೆ ಎಂದು ಕಂಡುಹಿಡಿಯಲು ಸದ್ಯದಲ್ಲಿಯೇ ರಾಜ್ಯಾದ್ಯಂತ ಡ್ರೋನ್ ಸಮೀಕ್ಷೆ ನಡೆಸಲಾಗುವುದು. ಈ ಪ್ರಕ್ರಿಯೆಗೆ ಟೆಂಡರ್ ಕರೆಯುವ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಎರಡರಿಂದ ಮೂರು ಕಂಪೆನಿಗಳನ್ನು ಗುರುತಿಸಲಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com