ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಿಎಟಿ-ಐಐಐಬಿ ಅಳವಡಿಕೆ; ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ!

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ವಿಮಾನ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ಸಿಕ್ಕಿದೆ. 
ಸಿಎಟಿ-ಐಐಐಬಿ ತಂತ್ರಜ್ಞಾನ ಅಳವಡಿಕೆ
ಸಿಎಟಿ-ಐಐಐಬಿ ತಂತ್ರಜ್ಞಾನ ಅಳವಡಿಕೆ

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರಳುವ ವಿಮಾನ ಪ್ರಯಾಣಿಕರಿಗೆ ಹೊಸ ವರ್ಷದ ಉಡುಗೊರೆ ಸಿಕ್ಕಿದೆ. 

ವಾತಾವರಣ ವ್ಯತ್ಯಯದಿಂದಾಗಿ ಕಡಿಮೆ ಗೋಚರತೆ ಪರಿಸ್ಥಿತಿಯ ಕಾರಣ ವಾರ್ಷಿಕ ಅದೆಷ್ಟೋ ಸಾವಿರ ವಿಮಾನ ಪ್ರಯಾಣಿಕರ ಯೋಜನೆಗಳು ರದ್ದಾಗುತ್ತಿತ್ತು. ಆದರೆ ಇನ್ನು ಮುಂದೆ ಕಡಿಮೆ ಗೋಚರತೆ ಪರಿಸ್ಥಿತಿಯ ನಡುವೆಯೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನಗಳು ಟೇಕ್ ಆಫ್ ಆಗಲಿವೆ.

ಕಡಿಮೆ ಗೋಚರತೆ ಪರಿಸ್ಥಿತಿಯ ನಡುವೆಯೂ ಕಾರ್ಯಾಚರಣೆ ನಡೆಸುವಂತಹ ಸಿಎಟಿ-ಐಐಐಬಿ ತಂತ್ರಜ್ಞಾನವನ್ನು ಪಡೆದಿದೆ. ಈ ರೀತಿಯ ಸೌಲಭ್ಯ ಹೊಂದಿರುವ ದಕ್ಷಿಣ ಭಾರತದ ಮೊದಲ ಹಾಗೂ ದೇಶದ 6 ನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎಬಿ ಪಾತ್ರವಾಗಿದೆ.

ರನ್ ವೇಯಲ್ಲಿ 50m ವರೆಗಿನ ಗೋಚರತೆ ರೇಂಜ್ ವರೆಗೂ ಲ್ಯಾಂಡಿಂಗ್ ಹಾಗೂ 125m ವರೆಗಿನ ಗೋಚರತೆ ರೇಂಜ್ ವರೆಗೂ ಟೇಕ್ ಆಫ್ ಸಾಧ್ಯವಾಗಲಿದೆ. ಈ ವರೆಗೂ 550ಎಂ ಹಾಗೂ 300 ಎಂ ವರೆಗೂ ಅನುಕ್ರಮವಾಗಿ ಲ್ಯಾಂಡಿಂಗ್ ಹಾಗೂ ಟೇಕ್ ಆಫ್ ಗೆ ಅನುಮತಿ ಇತ್ತು. ಮಂಜು ಮುಸುಕಿದ ವಾತಾವರಣದಿಂದಾಗಿ ಸಾಮಾನ್ಯವಾಗಿ ವಿಮಾನಗಳು ವಿಳಂಬವಾಗುತ್ತಿದ್ದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com