ಸಿಎಎ ವಿರೋಧಿ ನಾಟಕ: ಶಹೀನ್ ಶಾಲೆಯ ಮುಖ್ಯೋಪಾಧ್ಯಾಯರು, ಬಾಲಕನ ತಾಯಿಯನ್ನು ಜೈಲಿನಲ್ಲಿ ಭೇಟಿಯಾದ ಅಸಾದುದ್ದೀನ್ ಓವೈಸಿ

ಶಹೀನ್ ಗ್ರೂಪ್‌ ಆಫ್ ಸ್ಕೂಲ್‌ನ ಮುಖ್ಯೋಪಾಧ್ಯಾಯರಾದ ಫರೀದಾ ಬೇಗಂ ಮತ್ತು ಆರನೇ ತರಗತಿಯ ವಿದ್ಯಾರ್ಥಿಯೊಬ್ಬನ ತಾಯಿ ನಜ್ಮುನ್ನಿಸಾ ಅವರನ್ನು ಅಖಿಲ ಭಾರತ ಮಜ್ಲಿಸ್-ಇ-ಇತ್ತೀಹಾದುಲ್ ಮುಸ್ಲೀಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಬ್ಯಾರಿಸ್ಟರ್‌ ಅಸಾದುದ್ದೀನ್ ಓವೈಸಿ ಇಂದು ಬೀದರ್‌ ಜೈಲಿನಲ್ಲಿ ಭೇಟಿಯಾದರು
ಅಸಾದುದ್ದೀನ್ ಓವೈಸಿ
ಅಸಾದುದ್ದೀನ್ ಓವೈಸಿ

ಬೀದರ್  : ಸಿಎಎ-ಎನ್ಆರ್‌ಸಿ ವಿರೋಧಿಸುವ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದ್ದಕ್ಕಾಗಿ ಬಂಧನಕ್ಕೊಳಗಾಗಿರುವ ಕರ್ನಾಟಕದ ಬೀದರ್‌ ಮೂಲದ ಶಹೀನ್ ಗ್ರೂಪ್‌ ಆಫ್ ಸ್ಕೂಲ್‌ನ ಮುಖ್ಯೋಪಾಧ್ಯಾಯರಾದ ಫರೀದಾ ಬೇಗಂ ಮತ್ತು ಆರನೇ ತರಗತಿಯ ವಿದ್ಯಾರ್ಥಿಯೊಬ್ಬನ ತಾಯಿ ನಜ್ಮುನ್ನಿಸಾ ಅವರನ್ನು ಅಖಿಲ ಭಾರತ ಮಜ್ಲಿಸ್-ಇ-ಇತ್ತೀಹಾದುಲ್ ಮುಸ್ಲೀಮೀನ್ (ಎಐಎಂಐಎಂ) ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಬ್ಯಾರಿಸ್ಟರ್‌ ಅಸಾದುದ್ದೀನ್ ಓವೈಸಿ ಇಂದು ಬೀದರ್‌ ಜೈಲಿನಲ್ಲಿ ಭೇಟಿಯಾದರು

ಜನವರಿ 21ರಂದು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಬೀದರ್‌ನ ಶಹೀನ್‌ ಶಾಲೆಯಲ್ಲಿ ನಾಟಕವೊಂದನ್ನು ಪ್ರದರ್ಶಿಸಲಾಗಿತ್ತು. ಬಳಿಕ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬೀದರ್ ಪೊಲೀಸರು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಮಗುವಿನ ತಾಯಿಯನ್ನು ಬಂಧಿಸಿದ್ದರು. 

ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಶಹೀನ್ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ ಮತ್ತು ಮಗುವಿನ ಪೋಷಕರ ವಿರುದ್ಧ ಬೀದರ್ ಪೊಲೀಸರು ಐಪಿಸಿಯ ವಿವಿಧ ಕಲಂಗಳಡಿಯಲ್ಲಿ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com