ಬೈಕ್ ಸವಾರನ ಮೇಲೆ ಹಲ್ಲೆ: ಬಿಎಂಟಿಸಿ ಚಾಲಕ ಸೇವೆಯಿಂದ ಅಮಾನತು 

ರಸ್ತೆಯಲ್ಲಿ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಚಾಲಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. 
ಬೈಕ್ ಸವಾರನ ಮೇಲೆ ಹಲ್ಲೆ: ಬಿಎಂಟಿಸಿ ಚಾಲಕ ಸೇವೆಯಿಂದ ಅಮಾನತು 

ಬೆಂಗಳೂರು: ರಸ್ತೆಯಲ್ಲಿ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಚಾಲಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. 


ಬಿಎಂಟಿಸಿಯ ಡಿಪೊ ಸಂಖ್ಯೆ 28ರ ಚಾಲಕ ಸಂತೋಷ್ ಬಡಿಗೇರ್ ರಸ್ತೆ ಮೇಲೆ ಬೈಕ್ ಸವಾರನ ಮೇಲೆ ಹಲ್ಲೆ ಮಾಡಿದ್ದ ವಿಡಿಯೊ ಸೋಷಿಯನ್ ಮೀಡಿಯಾಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. 


ವಿಡಿಯೊ ವೈರಲ್ ಆಗಿ ಸುದ್ದಿಯಾಗುತ್ತಿದ್ದಂತೆ ವಿಷಯ ಗಂಭೀರವಾಗಿ ಪರಿಗಣಿಸಿದ ಇಲಾಖೆ ಚಾಲಕನನ್ನು ವಜಾ ಮಾಡಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಬಿಎಂಟಿಸಿ ಸಾರ್ವಜನಿಕ ಸಂಪರ್ಕಾಧಿಕಾರಿ ಅಜಿತ್ ತೊರಗಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com