ಮಂಗಳೂರು ಏರ್ ಪೋರ್ಟ್ ಬಾಂಬ್ ಕೇಸು: ಆದಿತ್ಯ ರಾವ್ 14 ದಿನ ನ್ಯಾಯಾಂಗ ಬಂಧನ 

ಮಂಗಳೂರು ವಿಮಾನ ನಿಲ್ದಾಣ ಪಕ್ಕ ಬಾಂಬ್ ಇಟ್ಟ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಆದಿತ್ಯ ರಾವ್ ಗೆ ಸ್ಥಳೀಯ ನ್ಯಾಯಾಲಯ ಎರಡು ವಾರಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.
ಮಂಗಳೂರು ಏರ್ ಪೋರ್ಟ್ ಬಾಂಬ್ ಕೇಸು: ಆದಿತ್ಯ ರಾವ್ 14 ದಿನ ನ್ಯಾಯಾಂಗ ಬಂಧನ 

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣ ಪಕ್ಕ ಬಾಂಬ್ ಇಟ್ಟ ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಆದಿತ್ಯ ರಾವ್ ಗೆ ಸ್ಥಳೀಯ ನ್ಯಾಯಾಲಯ ಎರಡು ವಾರಗಳ ನ್ಯಾಯಾಂಗ ಬಂಧನಕ್ಕೊಪ್ಪಿಸಿದೆ.

ಆದಿತ್ಯ ರಾವ್ ನ 10 ದಿನಗಳ ಪೊಲೀಸ್ ಕಸ್ಟಡಿ ನಿನ್ನೆಗೆ ಮುಕ್ತಾಯವಾದ ಹಿನ್ನಲೆಯಲ್ಲಿ ಆರನೇ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮುಂದೆ ಹಾಜರುಪಡಿಸಲಾಯಿತು. 

ಕಳೆದ 10 ದಿನಗಳ ಪೊಲೀಸ್ ಬಂಧನದಲ್ಲಿ ಆರೋಪಿ ಆದಿತ್ಯ ರಾವ್ ನನ್ನು ನಗರದ ವಿವಿಧ ಕಡೆಗಳಿಗೆ ಮತ್ತು ಉಡುಪಿಗೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಗಿತ್ತು.ಹೊಟೇಲೊಂದರಲ್ಲಿ ಆದಿತ್ಯ ರಾವ್ ಕೆಲಸ ಮಾಡಿಕೊಂಡು ಇದ್ದಾಗ ಆತ ಉಳಿದುಕೊಂಡಿದ್ದ ಕೊಠಡಿಗೆ ಸಹ ಕರೆದುಕೊಂಡು ಹೋಗಿ ಪೊಲೀಸರು ವಿಚಾರಣೆ ಮಾಡಿದ್ದಾರೆ.

ಕಳೆದ ಜನವರಿ 20ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪಕ್ಕ ಸುಧಾರಿತ ಸ್ಫೋಟಕ ಸಾಧನ ಇರಿಸಿದ್ದ ನಂತರ ವಿಮಾನ ನಿಲ್ದಾಣ ಟರ್ಮಿನಲ್ ಗೆ ಇಂಡಿಗೊ ವಿಮಾನದಲ್ಲಿ ಬಾಂಬ್ ಇಟ್ಟಿದ್ದೇನೆಂದು ಆದಿತ್ಯ ರಾವ್ ಹುಸಿಕರೆ ಮಾಡಿ  ತೀವ್ರ ಆತಂಕ ಉಂಟಾಗಿತ್ತು.

ಕಳೆದ ಜನವರಿ 22ರಿಂದ ಆದಿತ್ಯ ರಾವ್ ಪೊಲೀಸ್ ಕಸ್ಟಡಿಯಲ್ಲಿದ್ದ. ಈತ ಬೆಂಗಳೂರಿನಲ್ಲಿ ಜನವರಿ 21ರಂದು ಪೊಲೀಸರ ಮುಂದೆ ಶರಣಾಗಿದ್ದ. ನಂತರ ಆತನನ್ನು ಮಂಗಳೂರು ಪೊಲೀಸರು ಕರೆ ತಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com