ಕೆಂಪೇಗೌಡ ಲೇಔಟ್ ಸೈಟ್ ಹಂಚಿಕೆದಾರರಿಗೆ ಹಣವನ್ನು ಹಿಂತಿರುಗಿಸಿ: ನ್ಯಾಯಾಲಯದಿಂದ ಬಿಡಿಎಗೆ ಆದೇಶ 

ಕೆಂಪೇಗೌಡ ಲೇಔಟ್ ನ ಸೈಟ್ ಹಂಚಿಕೆದಾರರಿ ನ್ಯಾಯಾಲಯ ಒಂದು ದೊಡ್ಡ ರಿಲೀಫ್ ಸಿಕ್ಕಿದೆ. ಹಂಚಿಕೆಯಾದ ಸೈಟ್‌ಗಳಿಗೆ ಪೂರ್ಣ ಪಾವತಿ ಮಾಡುವಲ್ಲಿ ವಿಳಂಬವಾಗಿದ್ದಕ್ಕಾ ಬಿಡಿಎ ನಿಂದ ಅತಿ ಹೆಚ್ಚು ಬಡ್ಡಿ ವಿಧಿಸಲಾಗಿದ್ದ ಕಾರಣ ಸಂಕಷ್ಟಕ್ಕೆ ಎದುರಾಗಿದ್ದ ಫಲಾನುಭವಿಗಳಿಗೆ ಬಡ್ಡಿ ಹಣದ ಪ್ರಮುಖ ಭಾಗಗಳನ್ನು ಮರುಪಾವತಿ ಮಾಡಬೇಕೆಂದು  ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ)
ಕೆಂಪೇಗೌಡ ಲೇಔಟ್ ಸೈಟ್ ಹಂಚಿಕೆದಾರರೈಗೆ ಹಣವನ್ನು ಹಿಂತಿರುಗಿ:ಸಿ: ನ್ಯಾಯಾಲಯದಿಂದ ಬಿಡಿಎಗೆ ಆದೇಶ
ಕೆಂಪೇಗೌಡ ಲೇಔಟ್ ಸೈಟ್ ಹಂಚಿಕೆದಾರರೈಗೆ ಹಣವನ್ನು ಹಿಂತಿರುಗಿ:ಸಿ: ನ್ಯಾಯಾಲಯದಿಂದ ಬಿಡಿಎಗೆ ಆದೇಶ

ಬೆಂಗಳೂರು: ಕೆಂಪೇಗೌಡ ಲೇಔಟ್ ನ ಸೈಟ್ ಹಂಚಿಕೆದಾರರಿ ನ್ಯಾಯಾಲಯ ಒಂದು ದೊಡ್ಡ ರಿಲೀಫ್ ಸಿಕ್ಕಿದೆ. ಹಂಚಿಕೆಯಾದ ಸೈಟ್‌ಗಳಿಗೆ ಪೂರ್ಣ ಪಾವತಿ ಮಾಡುವಲ್ಲಿ ವಿಳಂಬವಾಗಿದ್ದಕ್ಕಾ ಬಿಡಿಎ ನಿಂದ ಅತಿ ಹೆಚ್ಚು ಬಡ್ಡಿ ವಿಧಿಸಲಾಗಿದ್ದ ಕಾರಣ ಸಂಕಷ್ಟಕ್ಕೆ ಎದುರಾಗಿದ್ದ ಫಲಾನುಭವಿಗಳಿಗೆ ಬಡ್ಡಿ ಹಣದ ಪ್ರಮುಖ ಭಾಗಗಳನ್ನು ಮರುಪಾವತಿ ಮಾಡಬೇಕೆಂದು  ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೇರಾ) ನ್ಯಾಯಾಲಯವು  ಬಿಡಿಎ ಗೆ ಆದೇಶಿಸಿದೆ.

ನಾಡಪ್ರಭು ಕೆಂಪೇಗೌಡ ಲೇಔಟ್ ಓಪನ್ ಫೋರಂ ಸದಸ್ಯರು ಹೇಳಿದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಧಿಸುವ ಬಡ್ಡಿದರ ಮತ್ತು 2 ಶೇಕಡಾವಾರು ಅಂಕಗಳಿಗೆ ಸಮನಾದ ಬಡ್ಡಿದರವನ್ನು ವಿಧಿಸಲು ಬಿಡಿಎಗೆ ತಿಳಿಸಲಾಗಿದೆ.  "ಯಾವುದೇ ಹೆಚ್ಚಿನ ಬಡ್ಡಿದರವನ್ನು ವಿಧಿಸಲ್ಪಟ್ಟವರು ರೇರಾಕ್ಕೆ ದೂರು ನೀಡಿದರೆ, ಬಿಡಿಎ ಈ ಅಂಕಿಅಂಶಕ್ಕಿಂತ ಹೆಚ್ಚಿನ ಮೊತ್ತವನ್ನು ಮರುಪಾವತಿಸಬೇಕಾಗುತ್ತದೆ"  ಎಲ್ಲಾ ಮೂಲಸೌಕರ್ಯಗಳನ್ನು ಲೇಔಟ್ ನಲ್ಲಿ ಖಚಿತಪಡಿಸಲು ಡಿಸೆಂಬರ್ 31, 2021 ರ ಗಡುವನ್ನು ಬಿಡಿಎ ಕೊಟ್ಟಿದ್ದು ಇದಕ್ಕೆ ನ್ಯಾಯಾಲಯ ಸಮ್ಮತಿಸಿದೆ.

ಮಾರ್ಚ್ 31, 2018.  ರಂತೆ ಒಟ್ಟು 10,000 ಹಂಚಿಕೆದಾರರಿಗೆ ಎರಡು ಹಂತಗಳಲ್ಲಿ ಸೈಟ್‌ಗಳನ್ನು ಮಂಜೂರು ಮಾಡಲಾಗಿದೆ. "ವಿಳಂಬಿತ ಪಾವತಿಗಳಿಗಾಗಿ, ಹಂಚಿಕೆದಾರರಿಗೆ ವಾರ್ಷಿಕ 18 ಶೇಕಡಾ ಬಡ್ಡಿದರವನ್ನು ಪಾವತಿಸಲು  ಹೇಳಲಾಗಿತ್ತು.  ಮೇ 1, 2017 ರ ನಂತರದ ಮೊದಲ 30 ದಿನಗಳು ಮತ್ತು ಅದನ್ನು ಮೀರಿದ ಯಾವುದೇ ಅವಧಿಗೆ ವಾರ್ಷಿಕವಾಗಿ 21 ಶೇಕಡಾ. ಈಗ, ಹೆಚ್ಚಿನ ಬಡ್ಡಿಯನ್ನು ಹಂಚಿಕೆದಾರರಿಗೆ ಹಿಂದಿರುಗಿಸಲು ರೇರಾ ನಿರ್ದೇಶನ ನೀಡಿದೆ "

ಏತನ್ಮಧ್ಯೆ, ಬಿಡಿಎಯ ತೀವ್ರ ಪ್ರತಿರೋಧದ ಹೊರತಾಗಿಯೂ ಕೆಜಿ ಲೇಔಟ್ ಯೋಜನೆಯನ್ನು ರೇರಾ ಅಡಿಯಲ್ಲಿ ತರಲಾಗಿದೆ. ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಮೂರು ವರ್ಷಗಳು ಬೇಕಾಗಿದ್ದು ವಿಸ್ತರಣೆಯನ್ನು ನ್ಯಾಯಾಲಯ ಒಪ್ಪಿದೆ ಎಂದು ಸದಸ್ಯರೊಬ್ಬರು ಹೇಳಿದ್ದಾರೆ.

ಫೋರಂನೊಂದಿಗೆ ನಿಯಮಿತವಾಗಿ ಮಾಸಿಕ ಸಭೆಗಳನ್ನು ನಡೆಸಲು ರೇರಾ ಬಿಡಿಎಗೆ ಹೇಳಿದ್ದು , ಇದರಿಂದಾಗಿ ಅವರ ಲೇಔಟ್ ನಲ್ಲಿ  ನಿಯಮಿತ ಸುಧಾರಣೆಗಳ ಬಗ್ಗೆ ತಿಳುವಳಿಕೆ ಮೂಡಲಿದೆ.  ಬಿಡಿಎ ಆಯುಕ್ತರು ಶನಿವಾರ ರೇರಾ ಸದಸ್ಯರನ್ನು ಭೇಟಿಯಾಗಲು ಒಪ್ಪಿದ್ದಾರೆ ಎಂದು ವೇದಿಕೆಯ ಎ.ಎಸ್.ಸೂರ್ಯ ಕಿರಣ್ ತಿಳಿಸಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com