ಎನ್ ಆರ್ ಸಿ, ಎನ್ ಪಿ ಆರ್ ಮತ್ತು ಪೌರತ್ವ ಕಾಯಿದೆ ವಿರೋಧಿಸಲು ಪಕ್ಷಗಳಿಗೆ ನ್ಯಾಯಮೂರ್ತಿ ಗೋಪಾಲಗೌಡ ಕರೆ

ಪೌರತ್ವ ಮತ್ತು ಎನ್ ಆರ್ ಸಿ ಕಾಯಿದೆ ಸೇರಿದಂತೆ ಬಿಜೆಪಿಯ ಜನವಿರೋಧಿ ನೀತಿಗಳನ್ನು ವಿರೋಧಿಸಿ ರಾಜಕೀಯ ಪಕ್ಷಗಳು ಹೋರಾಟ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲ ಗೌಡ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೈಸೂರು: ಪೌರತ್ವ ಮತ್ತು ಎನ್ ಆರ್ ಸಿ ಕಾಯಿದೆ ಸೇರಿದಂತೆ ಬಿಜೆಪಿಯ ಜನವಿರೋಧಿ ನೀತಿಗಳನ್ನು ವಿರೋಧಿಸಿ ರಾಜಕೀಯ ಪಕ್ಷಗಳು  ಹೋರಾಟ ನಡೆಸಬೇಕು ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ  ವಿ.ಗೋಪಾಲ ಗೌಡ ಹೇಳಿದ್ದಾರೆ.

ಪೌರತ್ವ ವಿರೋಧಿ ಹೋರಾಟವು ಎರಡನೇ ಸ್ವಾತಂತ್ರ್ಯ ಚಳವಳಿಯಾಗಬೇಕು,  ದೇಶದ 60 ವಿವಿಗಳ ಶಿಕ್ಷಕರು ಮತ್ತು ಬುದ್ದಿವಂತರು ಸಿಎಎ ವಿರೋಧಿಗಳಾಗಿದ್ದಾರೆ. ಅಂತವರ ವಿರುದ್ಧ ದೇಶದ್ರೋಹ ಕೇಸು ದಾಖಲಿಸಿದ್ದಾರೆ.

ಮೈಸೂರಿನಲ್ಲಿ ಸಿಎಎ ಮತ್ತು ಎನ್ ಪಿಆರ್  ಸಂಬಂಧ ನಡೆದ ಸೆಮಿನಾರ್  ಉದ್ಘಾಟಿಸಿ ಮಾತನಾಡಿದ ಗೋಪಾಲಗೌಡ ಅವರು,  ರಾಜಕೀಯ ಪಕ್ಷಗಳು ಹೋರಾಟದ ನೇತೃತ್ವ ವಹಿಸಬೇಕು ಎಂದು ಕರೆ ನೀಡಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ಜನರ ಭಾಗವಹಿಸುವಿಕೆಯನ್ನು ಶೇಕಡ 12 ರಿಂದ 73 ಕ್ಕೆ ಹೆಚ್ಚಿಸಲು ಗಾಂಧೀಜಿಯವರಿಗೆ ಸಾಧ್ಯವಾಯಿತು ಎಂದು ಅವರು ಹೇಳಿದರು. 

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಹಿಂದೂಗಳಿಗೆ ಪೌರತ್ವ ನೀಡುವುದನ್ನು ಅವರು ವಿರೋಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಭಾರತದಲ್ಲಿ ಶ್ರೀಲಂಕಾದಿಂದ 88 ಲಕ್ಷ ತಮಿಳರು ಇದ್ದರು, ಪಿಎಂ ನರೇಂದ್ರ ಮೋದಿ ಮತ್ತು ಅಮಿತ್ ಶಾ  ಜನತೆಯನ್ನು ದಾತಿ ತಪ್ಪಿಸುತ್ತಿದ್ದಾರೆ ಎಂದು ಗೋಪಾಲಗೌಡ ಹೇಳಿದ್ದಾರೆ.

ಈ ತಿದ್ದುಪಡಿ ಮಸೂದೆಯನ್ನು ಜಾರಿಗೆ ತರಲು ಸರ್ಕಾರಕ್ಕೆ ಬಹುಮತ ಇರಲಿಲ್ಲ, ಆಗಿದ್ದರೂ ತಿದ್ದುಪಡಿ ಮಸೂದೆ ಜಾರಿಗೆ ತಂದಿದೆ ಎಂದು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com