ಚಿತ್ರದುರ್ಗ: ಓಬವ್ವನ ನಾಡಲ್ಲಿ ಮಹಿಳಾ ಮಣಿಗಳದ್ದೇ ಪಾರುಪತ್ಯ!

ಇದೇ ಮೊದಲ ಬಾರಿಗೆ  ಜಿಲ್ಲೆಯ ಮೂರು ಪ್ರಮುಖ ಕಚೇರಿಗಳ ಆಡಳಿತಕ್ಕೆ ಮಹಿಳೆಯರನ್ನು ನೇಮಿಸಲಾಗಿದೆ. ಡಿಸಿ, ಪೊಲೀಸ ಮತ್ತು ಗ್ರಾಮೀಣಾಭಿವೃದ್ಧಿ ಕಚೇರಿಗಳಿಗೆ ನಾರಿಯರೇ ಮುಖ್ಯಸ್ಥರಾಗಿದ್ದಾರೆ.
ಓಬವ್ವನ ನಾಡಲ್ಲಿ ಮಹಿಳಾ ಮಣಿಗಳದ್ದೇ ಪಾರುಪತ್ಯ
ಓಬವ್ವನ ನಾಡಲ್ಲಿ ಮಹಿಳಾ ಮಣಿಗಳದ್ದೇ ಪಾರುಪತ್ಯ

ಚಿತ್ರದುರ್ಗ: ಇದೇ ಮೊದಲ ಬಾರಿಗೆ  ಜಿಲ್ಲೆಯ ಮೂರು ಪ್ರಮುಖ ಕಚೇರಿಗಳ ಆಡಳಿತಕ್ಕೆ ಮಹಿಳೆಯರನ್ನು ನೇಮಿಸಲಾಗಿದೆ. ಡಿಸಿ, ಪೊಲೀಸ ಮತ್ತು ಗ್ರಾಮೀಣಾಭಿವೃದ್ಧಿ ಕಚೇರಿಗಳಿಗೆ ನಾರಿಯರೇ ಮುಖ್ಯಸ್ಥರಾಗಿದ್ದಾರೆ.

ಓಬವ್ವನ ನಾಡು ಚಿತ್ರದುರ್ಗದ ಆಡಳಿತ ಇದೀಗ ಮಹಿಳೆಯರ ಕೈಯಲ್ಲಿದೆ. ಚಿತ್ರದುರ್ಗ ಜಿಲ್ಲಾ ಪೊಲೀಸ್ ನೂತನ ವರಿಷ್ಠಾಧಿಕಾರಿಯಾಗಿ ಜಿ.ರಾಧಿಕಾ ಅವರ ನೇಮಕಕ್ಕೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 

ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ವಿನೋತ್ ಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಓ ಸತ್ಯಭಾಮಾ ಹಾಗೂ ಜಿಲ್ಲಾ ಪಂಚಾಯಿತ ಅಧ್ಯಕ್ಷೆ ವಿಶಾಲಾಕ್ಷಿ ನಟರಾಜ್ ಪ್ರಮುಖ ಹುದ್ದೆಗಳಲ್ಲಿ ಆಡಳಿತ ನಡೆಸುತ್ತಿದ್ದರು. ಇದೀಗ ರಾಧಿಕಾ ಅವರು ಎಸ್ ಪಿ ಆಗಿ ವರ್ಗಾವಣೆ ಆಗಿದ್ದಾರೆ. ಈ ಹಿಂದೆ ಡಾ.ಕೆ.ಅರುಣ್ ಕಾರ್ಯನಿರ್ವಹಿಸುತಿದ್ದರು. 

ಜಿ ರಾಧಿಕಾ ಅವರ ಪ್ರವೇಶದಿಂದಾಗಿ ಚಿತ್ರದುರ್ಗ ವನಿತೆಯರ ಸಾಮ್ರಾಜ್ಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಜಿಲ್ಲಾಡಳಿತದ ಪ್ರಮುಖ ಸ್ಥಾನಗಳಲ್ಲಿ ಮಹಿಳಾ ಅಧಿಕಾರಿಗಳೇ ಇದ್ದಾರೆ. 

ಈಗಾಗಲೇ ಜಿಲ್ಲಾ ಡಿಸಿ ಮತ್ತು ಸಿಇಒ ದಕ್ಷ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ನೂತನವಾಗಿ ರಾಧಿಕಾ ಅವರು ಎಸ್ಪಿಯಾಗಿ ಪ್ರವೇಶಿಸಿದ್ದಾರೆ.

ನೂತನ ಡಿಜಿ & ಐಜಿಪಿಯಾಗಿ ಪ್ರವೀಣ್ ಸೂದ್ ಅಧಿಕಾರ ಸ್ವೀಕಾರ ಜಿಲ್ಲೆಯಲ್ಲಿ ಹೆಸರು ಪಡೆದಿರುವ ವಿನೋತ್ ಪ್ರಿಯಾ ಕಳೆದ ಎರಡು ವರ್ಷಗಳಿಂದ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ವಿನೋತ್ ಪ್ರಿಯಾ ಅಧಿಕಾರ ನಡೆಸುತ್ತಿದ್ದಾರೆ. 

ಚಿತ್ರದುರ್ಗದಲ್ಲಿ ಡಿಸಿಯವರು ದಕ್ಷ ಆಡಳಿತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿನೋತ್ ಪ್ರಿಯಾ ಅವರಿಂದ ಜಿಲ್ಲೆಯಲ್ಲಿ ಕೆಲವು ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳು, ಜಿಲ್ಲೆಯಲ್ಲಿ ನಡೆಯುವ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ, ರೈತರ ಸಮಸ್ಯೆಗಳಿಗೆ ಸ್ಪಂದಿಸುವುದು ಮತ್ತಿತರ ಪ್ರಮುಖ ಕಾರ್ಯಗಳಾಗಿವೆ. 

ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಪ್ರಮುಖ ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಡಿಸಿ ವಿನೋತ್ ಪ್ರಿಯಾ ಪ್ರಮುಖ ಪಾತ್ರ ವಹಿಸಿದ್ದಾರೆ. ಸಿಇಒ ಸತ್ಯಭಾಮಾ ಪ್ರಾಮಾಣಿಕ ಕೆಲಸ ಚಿತ್ರದುರ್ಗ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣದಿಕಾರಿ ಸತ್ಯಭಾಮಾ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತಿದ್ದಾರೆ. 

ಕಳೆದ ವರ್ಷ ಚಿತ್ರದುರ್ಗ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿತ್ತು. ಕುಡಿಯುವ ನೀರಿನ ಸಮಸ್ಯೆ ಸಾಕಷ್ಟು ಉಲ್ಬಣಗೊಂಡಿತ್ತು. ಇಂಥ ಸಮಸ್ಯೆಗಳನ್ನು ದಿಟ್ಟವಾಗಿ ಎದುರಿಸುವಲ್ಲಿ ಸತ್ಯಭಾಮಾ ಯಶಸ್ವಿಯಾಗಿದ್ದರು. 

2012 ರ ಬ್ಯಾಚ್ ನ ಐಪಿಎಸ್ ಅದಿಕಾರಿಯಾಗಿರುವ ರಾಧಿಕಾ ಈ ಮೊದಲು  ಮಂಡ್ಯ ಎಸ್ ಪಿ ಯಾಗಿ ಕೆಲಸ ನಿರ್ವಹಿಸಿದ್ದರು.  ಅದಾದ ನಂತರ ಡಿಜಿಮತ್ತು ಐಜಿಪಿ ಕಚೇರಿಯಲ್ಲಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com