ಅಪ್ರಾಪ್ತ ಸಹೋದರಿಯರ ಅಪಹರಣ: ಓರ್ವಳ ಮೇಲೆ ಅತ್ಯಾಚಾರ, ಪಾಗಲ್ ಪ್ರೇಮಿ ಬಂಧನ!

ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಸಹೋದರಿಯರಿಬ್ಬರನ್ನು ಅಪಹರಿಸಿ ಓರ್ವಳ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಕೊಳ್ಳೇಗಾಲ ತಾಲೂಕಿನ ಜಾಗೇರಿ ಸಮೀಪದ ಸೆಲ್ವೈಪುರಿದೊಡ್ಡಿಯಲ್ಲಿ ನಡೆದಿದೆ

Published: 04th February 2020 12:44 AM  |   Last Updated: 04th February 2020 12:44 AM   |  A+A-


Casual_photo1

ಸಾಂದರ್ಭಿಕ ಚಿತ್ರ

Posted By : Nagaraja AB
Source : RC Network

ಚಾಮರಾಜನಗರ: ಪಾಗಲ್ ಪ್ರೇಮಿಯೊಬ್ಬ ಅಪ್ರಾಪ್ತ ಸಹೋದರಿಯರಿಬ್ಬರನ್ನು ಅಪಹರಿಸಿ ಓರ್ವಳ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಕೊಳ್ಳೇಗಾಲ ತಾಲೂಕಿನ ಜಾಗೇರಿ ಸಮೀಪದ ಸೆಲ್ವೈಪುರಿದೊಡ್ಡಿಯಲ್ಲಿ ನಡೆದಿದೆ

ಜಾಗೇರಿ ಸಮೀಪದ ಪಿ.ಜಿ.ದೊಡ್ಡಿ ಗ್ರಾಮದ ಆರ್ಮುಗಂ ಬಂಧಿತ ಆರೋಪಿ. ಈತ ಸೆಲ್ವೈಪುರಿ ಗ್ರಾಮದ 16 ವರ್ಷದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎಂದು ತಿಳಿದು ಬಂದಿದೆ

ಕಳೆದ 29 ರಂದು ಸಂಜೆ ವೇಳೆ ಆಕೆ 9 ವರ್ಷದ ತಂಗಿಯೊಂದಿಗೆ ನೀರು ತರಲು ಹೊರ ಬಂದಾಗ ಇಬ್ಬರಿಗೂ ಮತ್ತು ಬರುವ ಮಾತ್ರೆ ಬೆರೆಸಿದ ಜ್ಯೂನ್​ನ್ನು ಕುಡಿಸಿ ಇಬ್ಬರನ್ನು ಅಪಹರಿಸಿ ಸೇಲಂಗೆ ಕರೆದೊಯ್ದಿದ್ದ. ಬಳಿಕ, ಕಳೆದ ಫೆ.1ರಂದು ಆಕೆಯ 9 ವರ್ಷದ ತಂಗಿಯನ್ನು ಬಸ್ಸಿಗೆ ಹತ್ತಿಸಿ ಕಳುಹಿಸಿದ್ದನಂತೆ.ಇತ್ತ ಮಕ್ಕಳ ಪೋಷಕರು ನಾಪತ್ತೆ ಪ್ರಕರಣ ದಾಖಲು ಮಾಡಿದ್ದರು.

 ಈ ಹಿನ್ನೆಲೆ ಕೊಳ್ಳೇಗಾಲ ಪೊಲೀಸರು ಆತನ ಇರುವಿಕೆ ಪತ್ತೆ ಹಚ್ಚಿ ಬಾಲಕಿಯನ್ನು ರಕ್ಷಿಸಿದ್ದಾರೆ. ಇನ್ನು, ವೈದ್ಯಕೀಯ ಪರೀಕ್ಷೆ ನಡೆಸಿದ ವೇಳೆ ಅತ್ಯಾಚಾರ ಎಸಗಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದ್ದು ಸದ್ಯ, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp