ಅಕ್ರಮ ಮರಳುಗಾರಿಕೆ ಲಾರಿ ಡಿಕ್ಕಿ: ಮೂವರು ಯುವಕರ ದುರ್ಮರಣ

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದು ಪ್ರಯಾಣಿಕರ ಆಟೋಗೆ ಡಿಕ್ಕಿಯೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ  ಮದ್ದೂರು- ತುಮಕೂರು ಹೆದ್ದಾರಿಯ ದುಂಡನಹಳ್ಳಿ ಬಳಿ ಕಳೆದ ತಡರಾತ್ರಿ ನಡೆದಿದೆ.
ಅಪಘಾತಗೊಂಡ ಆಟೋ
ಅಪಘಾತಗೊಂಡ ಆಟೋ

ಮಂಡ್ಯ: ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿಯೊಂದು ಪ್ರಯಾಣಿಕರ ಆಟೋಗೆ ಡಿಕ್ಕಿಯೊಡೆದ ಪರಿಣಾಮ ಮೂವರು ಯುವಕರು ಸ್ಥಳದಲ್ಲೆ ಸಾವನ್ನಪ್ಪಿದ ಘಟನೆ  ಮದ್ದೂರು- ತುಮಕೂರು ಹೆದ್ದಾರಿಯ ದುಂಡನಹಳ್ಳಿ ಬಳಿ ಕಳೆದ ತಡರಾತ್ರಿ ನಡೆದಿದೆ.

ದುಂಡನಹಳ್ಳಿ ಗ್ರಾಮದ ಅಭಿ(20) ಮಲ್ಲನಕುಪ್ಪೆ ಗ್ರಾಮದ ಸೂರ್ಯ (23) ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿಯ ಪ್ರಶಾಂತ್ (21) ಎಂಬ ಯುವಕರೇ ಸ್ಥಳದಲ್ಲೆ ಮೃತಪಟ್ಟಿದ್ದಾರೆ.

ಘಟನೆ ವಿವರ:

ಕಳೆದ ರಾತ್ರಿ ಸುಮಾರು ೧೨:೫೦ರಲ್ಲಿ  ಮದ್ದೂರು ಬಳಿಯ ಶಿಂಷಾ ನದಿಯಿಂದ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಲಾರಿ ಇದೇ ಮಾರ್ಗವಾಗಿ‌ ಹೋಗುತ್ತಿದ್ದ ಪ್ರಯಾಣಿಕರ ಆಟೋಗೆ ಗುದ್ದಿದೆ. ಲಾರಿ ಗುದ್ದಿದ ರಭಸಕ್ಕೆ ಆಟೋದಲ್ಲಿದ್ದ ದುಂಡನಹಳ್ಳಿ ಗ್ರಾಮದ ಅಭಿ(20) ಮಲ್ಲನಕುಪ್ಪೆ ಗ್ರಾಮದ ಸೂರ್ಯ (23) ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿಯ ಪ್ರಶಾಂತ್ (21) ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

ಲಾರಿ ಅಫಘಾತವಾಗುತ್ತಿದ್ದಂತೆ ಎಚ್ಚೆತ್ತ ಮರಳು ಧಂಧೆಕೋರರು ಲಾರೀಯಲ್ಲಿದ್ದ ಮರಳನ್ನು ರಾತ್ರೋರಾತ್ರಿ ರಸ್ತೆ ಪಕ್ಕದ ಗದ್ದೆಗೆ ಎಳೆದು ಹಾಕಿ.ಅಕ್ರಮ ಮರಳು ಸಾಗಾಣಿಕೆಗೂ ತಮಗೂ ಸಂಬಂಧವಿಲ್ಲವೆಂಬಂತೆ ನಟಿಸಿದ್ದಾರೆ. 

ಮರಳು ಎಳೆದು ಹಾಕಿದ ನಂತರವಷ್ಟೆ ಮರಳು ಧಂಧೆಕೋರರೆ ಅಫಘಾತದ ಕುರಿತು ಪೋಲಿಸರಿಗೆ ಮಾಹಿತಿ ನೀಡಿದ್ದಾರೆನ್ನಲಾಗಿದೆ.

ಅಷ್ಟೋತ್ತಿಗೆ ಮೂವರು ಯುವಕರು ಪ್ರಾಣ ತ್ಯಜಿಸಿದ್ದರು ಎನ್ನಲಾಗಿದ್ದು.ಸಾವನ್ನಪ್ಪಿದ ಮೂವರು ಯುವಕರು ಆಟೋ ಚಾಲಕರಾಗಿದ್ದು ಶವಗಳನ್ನು ಮದ್ದೂರು ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಸ್ಥಳಕ್ಕೆ ಎಸ್ಪಿ ಭೇಟಿ:

ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಪರಶುರಾಂ ಅವರಿಗೆ  ಸ್ಥಳೀಯ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡಿದ್ದು ಅಕ್ರಮ ಮರಳು ಗಣಿಗಾರಿಕೆ ಪೋಲಿಸರ ಸಹಕಾರದಿಂದಲೆ ನಡೆಯುತ್ತಿದ್ದು ನಿಯಂತ್ರಿಸುವಂತೆ ಆಗ್ರಹಿಸಿದರು.

ಜನರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಎಸ್ಪಿ ಪರಶುರಾಮ. ಮರಳು ಗಣಿಗಾರಿಕೆ ನಿಯಂತ್ರಿಸುವುದಾಗಿ ಹೇಳಿ ಉದ್ರಿಕ್ತ ಗ್ರಾಮಸ್ಥರನ್ನು ಸಮಾಧಾನಿಸಿದರು. ಈ‌ ಸಂಬಂಧ ‌ಕೆಸ್ತೂರು ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com