ರಾಜ್ಯಕ್ಕೂ ತಟ್ಟಿದ ಕೊರೋನಾ ಭೀತಿ: ಎಲ್ಲೆಡೆ ತೀವ್ರ ಕಚ್ಚೆಚ್ಚರ

ಚೀನಾದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಭೀತಿ ಇದೀಗ ರಾಜ್ಯಕ್ಕೂ ತಟ್ಟುವ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ತೀವ್ರ ಕಟ್ಚೆಚ್ಚರ ವಹಿಸಲಾಗಿದೆ. 
ಸಂಗ್ರಹ ಚಿತ್ರdd
ಸಂಗ್ರಹ ಚಿತ್ರdd

ಬೆಂಗಳೂರು: ಚೀನಾದಲ್ಲಿ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಕೊರೋನಾ ವೈರಸ್ ಭೀತಿ ಇದೀಗ ರಾಜ್ಯಕ್ಕೂ ತಟ್ಟುವ ಆತಂಕ ಶುರುವಾಗಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ತೀವ್ರ ಕಟ್ಚೆಚ್ಚರ ವಹಿಸಲಾಗಿದೆ. 

ಕೊರೋನಾವೈರಸ್'ನ್ನು ವಿಶ್ವ ಆರೋಗ್ಯ ಸಂಸ್ಥೆ ಕೂಡ ಅಂತರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ಘೋಷಣೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಲ್ಲೆಡೆ ತೀವ್ರ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈವರೆಗೂ 81 ಮಂದಿ ಕೊರೋನಾ ವೈರಸ್ ತಗುಲಿರುವ ವ್ಯಕ್ತಿಗಳು ಚೀನಾದಿಂದ ಭಾರತಕ್ಕೆ ಆಗಮಿಸಿದ್ದು, 58 ಮಂದಿ ಚಿಕಿತ್ಸೆಗೊಳಗಾಗಿದ್ದಾರೆ. 

4 ಮಂದಿ ಚೀನಾ ಪ್ರಯಾಣಿಕರು ದೇಶ ತೊರೆದಿದ್ದು, 69 ಮಂದಿ ರೋಗಿಗಳ ತಪಾಸಣೆ ಇನ್ನೂ ಪ್ರಗತಿಯಲ್ಲಿದೆ. ಇದರಲ್ಲಿ 44 ಮಂದಿ ಪ್ರಯಾಣಿಕರಲ್ಲಿ ವೈರಸ್ ಇಲ್ಲ ಎಂದು ವರದಿಗಳು ತಿಳಿಸಿವೆ. 

ಈ ನಡುವೆ ರಾಜ್ಯ ಆರೋಗ್ಯ ಇಲಾಖೆ ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಹೆಲ್ಪ್ ಲೈನ್ ಸಂಖ್ಯೆಗಳನ್ನು ತೆರೆದಿದ್ದು, ತಪಾಸಣೆ ವೇಳೆ ಯಾರಲ್ಲಾದರೂ ಕೊರೋನಾ ಸೋಂಕು ಲಕ್ಷಣ ಕಂಡು ಬಂದಿದ್ದೇ ಆದರೆ, ಅಂಥಹವರನ್ನು ಕೂಡಲೇ ಇತರೆ ಪ್ರಯಾಣಿಕರು ಹಾಗೂ ಸಾರ್ವಜನಿಕರಿಂದ ಪ್ರತ್ಯೇಕಗೊಳಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದೆ. 

ಬೆಂಗಳೂರು ವಿಮಾನ ನಿಲ್ದಾಣಕ್ಕೆ ಈ ವರೆಗೂ 9,296 ಪ್ರಯಾಣಿಕರು ವಿದೇಶಗಳಿಂದ ಆಗಮಿಸಿದ್ದು, ಎಲ್ಲರನ್ನೂ ತಪಾಸಣೆಗೊಳಪಡಿಸಲಾಗಿದೆ. ಅಲ್ಲದೆ, ಕಾಸರಗೋಡಿನಲ್ಲಿ ಮೂರು ಕೊರೋನಾವೈರಸ್ ಪ್ರಕರಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ತೀವ್ರ ಕಟ್ಟೆಚ್ಚರ ವಹಿಸಿದೆ. 

ಈ ನಡುವೆ ಚೀನಾದಿಂದ ಇತ್ತೀಚೆಗಷ್ಟೇ ಹುಬ್ಬಳ್ಳಿಗೆ ಆಗಮಿಸಿದ್ದ ಸಂದೀಪ್ ಕೆಳ್ಸಂಗಡ್ ಅವರನ್ನು ಪರೀಕ್ಷೆಗೊಳಪಡಿಸಲಾಗಿದ್ದು, ವೈರಸ್ ಪತ್ತೆಯಾಗಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com