ತಾಯಿಯನ್ನೇ ಕೊಂದಿದ್ದ ಟೆಕ್ಕಿ ಅಮೃತಾ ಬಂಧನ: ಪ್ರಕರಣಕ್ಕೆ ಟ್ವಿಸ್ಟ್

ತಾಯಿಯನ್ನು ಕೊಂದು, ಸಹೋದರರನ್ನ ಕೊಲೆ ಮಾಡಲು ಯತ್ನಿಸಿದ್ದ ಸಾಫ್ಟ್ ವೇರ್ ಎಂಜಿನೀಯರ್ ಅಮೃತಾಳನ್ನು ಪೊಲೀಸರರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ತಾಯಿಯನ್ನು ಕೊಂದು, ಸಹೋದರರನ್ನ ಕೊಲೆ ಮಾಡಲು ಯತ್ನಿಸಿದ್ದ ಸಾಫ್ಟ್ ವೇರ್ ಎಂಜಿನೀಯರ್ ಅಮೃತಾಳನ್ನು ಪೊಲೀಸರರು ಬಂಧಿಸಿದ್ದಾರೆ.

ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದ ಅಮ್ಮನ ಕತ್ತು ಸೀಳಿ ಕೊಲೆ ಮಾಡಿ ಮಗಳು ಪರಾರಿಯಾಗಿದ್ದಳು. 

ಫೆ. 2ರಂದು ಕೆ.ಆರ್​. ಪುರಂನ ಮನೆಯಲ್ಲಿ ಅಮ್ಮನನ್ನು ಕೊಂದಿದ್ದ ಅಮೃತಾ ಬಳಿಕ ತನ್ನ ಮನೆಯ ಬಳಿ ಪಲ್ಸರ್​ ಬೈಕ್​ನಲ್ಲಿ ಬಂದಿದ್ದ ಪ್ರಿಯಕರನೊಂದಿಗೆ ತೆರಳಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. 

ಈ ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಬೆಂಗಳೂರು ವಿಮಾನ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಆ ಬೈಕನ್ನು ವಶಕ್ಕೆ ಪಡೆದಿದ್ದರು. ಇಂದು ಆರೋಪಿಗಳಾದ ಅಮೃತಾ ಮತ್ತು ಆಕೆಯ ಪ್ರಿಯಕರ ಶ್ರೀಧರ್ ರಾವ್​ನನ್ನು ಅಂಡಮಾನ್​ನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಇಬ್ಬರು ಆರೋಪಿಗಳನ್ನು ಕೆ.ಆರ್​. ಪುರಂ ಇನ್ಸ್​ಪೆಕ್ಟರ್ ಅಂಬರೀಶ್ ನೇತೃತ್ವದಲ್ಲಿ ಬಂಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com