ಹಾಸನ: ಅತ್ತೆ ಮಗಳನ್ನು ಕಿಡ್ನಾಪ್ ಮಾಡಿ ಕಾರಿನಲ್ಲಿ ತಾಳಿ ಕಟ್ಟಿದ ಕಿರಾತಕ!

ಬಸ್ ಗಾಗಿ ಬಸ್​ ನಿಲ್ದಾಣದಲ್ಲಿ ಕಾಯುತ್ತಿದ್ದ ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಿ ಚಲಿಸುತ್ತಿರುವ ಕಾರಿನಲ್ಲೇ ತಾಳಿ ಕಟ್ಟಿದ ಘಟನೆ ಹಾಸನದಲ್ಲಿ ನಡೆದಿದೆ.

Published: 05th February 2020 09:33 AM  |   Last Updated: 05th February 2020 09:35 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : Online Desk

ಹಾಸನ: ಬಸ್ ಗಾಗಿ ಬಸ್​ ನಿಲ್ದಾಣದಲ್ಲಿ ಕಾಯುತ್ತಿದ್ದ ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಕಿಡ್ನಾಪ್ ಮಾಡಿ ಚಲಿಸುತ್ತಿರುವ ಕಾರಿನಲ್ಲೇ ತಾಳಿ ಕಟ್ಟಿದ ಘಟನೆ ಹಾಸನದಲ್ಲಿ ನಡೆದಿದೆ.

ಸ್ನೇಹಿತರ ಸಹಾಯದಿಂದ ಯುವತಿಯನ್ನು ಅಪಹರಿಸಿ ತಾಳಿ ಕಟ್ಟಿದ ವ್ಯಕ್ತಿ ಅರಸೀಕೆರೆ ತಾಲೂಕಿನ ಕುಡುಕುಂದಿ ಗ್ರಾಮದ ಮನು ಎಂದು ತಿಳಿದುಬಂದಿದ್ದು, ಈತ ಯುವತಿಗೆ ಸ್ವಂತ ಅತ್ತೆಯ ಮಗ ಎನ್ನಲಾಗುತ್ತಿದೆ.

ಮನು ಕಳೆದ ಹಲವು ದಿನಗಳಿಂದ ತನ್ನ ಅತ್ತೆ ಮಗಳಿಗೆ ತನ್ನನ್ನು ಪ್ರೀತಿಸುವಂತೆ ಮನವಿ ಮಾಡಿದ್ದಾನೆ. ಅಲ್ಲದೆ, ಮದುವೆಯಾಗುವಂತೆ ಪದೇ ಪದೇ ಪೀಡಿಸಿದ್ದಾನೆ. 

ಆದರೆ, ಇದಕ್ಕೆ ಆಕೆ ಒಪ್ಪದ ಕಾರಣ ಹೀಗೆ ಕಿಡ್ನಾಪ್ ಮಾಡಿ ತಾಳಿ ಕಟ್ಟಿದ್ದಾನೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಆತ ಯುವತಿಗೆ ತಾಳಿ ಕಟ್ಟಿದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ ಯುವತಿಯ ಕುಟುಂಬಸ್ಥರು ಮನು ವಿರುದ್ದ ಅಪಹರಣ ಪ್ರಕರಣ ದಾಖಲಿಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp