ಶಿವಮೊಗ್ಗದಲ್ಲಿ ಸಿಎಎ ವಿರೋಧಿ ಹೋರಾಟ: ದೆಹಲಿಯ ಶಹೀನ್​ಬಾಗ್ ಮಾದರಿ ಪ್ರತಿಭಟನೆ ಪ್ರಾರಂಭ

ಜಂಟಿ ಕ್ರಿಯಾ ಸಮಿತಿ - ಶಿವಮೊಗ್ಗ, ಹಾಗೂ ಇನ್ನೂ ಹಲವು ಪ್ರಗತಿಪರ ಸಂಘಟನೆಗಳು ಸೇರಿ ಬುಧವಾರ ನಗರದ ಈದ್ಗಾ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)  ಜಾರಿಗೆ ವಿರೋಧಿಸಿ ಧರಣಿ, ಪ್ರತಿಭಟನೆಯಲ್ಲಿ ನಿರತವಾಗಿವೆ. ದೆಹಲಿಯಶಹೀನ್​ಬಾಗ್ ಪ್ರತಿಭಟನೆ ಮಾದರಿಯಲ್ಲಿ
ಶಿವಮೊಗ್ಗದಲ್ಲಿ ಸಿಎಎ ವಿರೋಧಿ ಹೋರಾಟ: ದೆಹಲಿಯ ಶಹೀನ್​ಬಾಗ್ ಮಾದರಿ ಪ್ರತಿಭಟನೆ ಪ್ರಾರಂಭ
ಶಿವಮೊಗ್ಗದಲ್ಲಿ ಸಿಎಎ ವಿರೋಧಿ ಹೋರಾಟ: ದೆಹಲಿಯ ಶಹೀನ್​ಬಾಗ್ ಮಾದರಿ ಪ್ರತಿಭಟನೆ ಪ್ರಾರಂಭ

ಶಿವಮೊಗ್ಗ: ಜಂಟಿ ಕ್ರಿಯಾ ಸಮಿತಿ - ಶಿವಮೊಗ್ಗ, ಹಾಗೂ ಇನ್ನೂ ಹಲವು ಪ್ರಗತಿಪರ ಸಂಘಟನೆಗಳು ಸೇರಿ ಬುಧವಾರ ನಗರದ ಈದ್ಗಾ ಮೈದಾನದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ನಾಗರಿಕರ ರಾಷ್ಟ್ರೀಯ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್)  ಜಾರಿಗೆ ವಿರೋಧಿಸಿ ಧರಣಿ, ಪ್ರತಿಭಟನೆಯಲ್ಲಿ ನಿರತವಾಗಿವೆ. ದೆಹಲಿಯಶಹೀನ್​ಬಾಗ್ ಪ್ರತಿಭಟನೆ ಮಾದರಿಯಲ್ಲಿಯೇ ಇಲ್ಲಿಯೂ ಪ್ರತಿಭಟಿಸಲು ಅವು ತೀರ್ಮಾನಿಸಿದೆ.

ದೆಹಲಿಯ ಶಹೀನ್​ಬಾಗ್ ನಂತೆಯೇ ಇಲ್ಲಿಯೂ ದಿನದ ಇಪ್ಪತ್ತನಾಲ್ಕು ಗಂಟೆ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪ್ರತಿಭಟನಾಕಾರರು ತಿಳಿಸಿದ್ದಾರೆ. ದೆಹಲಿಯಲ್ಲಿ ಕಳೆದ 40 ದಿನಗಳಿಂಡ ಸಿಎಎವಿರುದ್ಧ ಹೋರಾಟ ನಡೆದಿದೆ.

ಎನ್‌ಆರ್‌ಸಿ, ಸಿಎಎ ಮತ್ತು ಎನ್‌ಪಿಆರ್ ಅನ್ನು ತಿರಸ್ಕರಿಸಿ" ಎಂಬ ಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಧರಿಣಿಯಲ್ಲಿ ನಿರತರಾಗಿದ್ದಾರೆ.

"ಶಹೀನ್​ಬಾಗ್ ನಲ್ಲಿರುವಂತೆ ರಣಿ ಪ್ರತಿಭಟನೆ ಈಗ ಭಾರತದ ಮೂಲೆ ,ಊಲೆಗಳಲ್ಲಿ ನಡೆಯುತ್ತಿದೆ. ಸರ್ಕಾರ ಕಾನೂನನ್ನು ಹಿಂತೆಗೆದುಕೊಳ್ಳುವ ಅಥವಾ ನಮ್ಮೊಡನೆ ಸಮಾಲೋಚಿಸದ ಹೊರತೂ  ನಾವು ನಮ್ಮ ಪ್ರತಿಭಟನೆಯನ್ನು ಕೈಬಿಡುವುದಿಲ್ಲ. ದಿನದ 24x7 ಕಾಲ ಪ್ರತಿಭಟನೆ ಮುಂದುವರಿಯಲಿದೆ.ನಾವು ಯಾರಿಗೂ ಮನವಿ ಪತ್ರಗಳನ್ನು ನೀಡಲು ಹೋಗುವವರಲ್ಲ"ಪ್ರತಿಭಟನಾಕಾರರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com