ದುಬಾರಿಯಾದ ಸಿಲಿಕಾನ್ ಸಿಟಿ ಹೋಟೆಲ್'ಗಳು: ಕಾಫಿ, ಟೀ ರೂ 2 ಏರಿಕೆ, ತಿಂಡಿ ಬೆಲೆಯೂ ರೂ.5 ಏರಿಕೆ

ಅಗತ್ಯ ವಸ್ತುಗಳಾದ ಹಾಲು, ಅಡುಗೆ ಅನಿಲ, ತರಕಾರಿ ಹಾಗೂ ಕಾರ್ಮಿಕರ ಕೂಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಕಾಫಿ-ಟೀ ಬೆಲೆಯನ್ನು ರೂ.2 ಹಾಗೂ ತಂಡಿ ತಿನಿಸುಗಳ ದರವನ್ನು ರೂ.2ರಿಂದ ರೂ.5 ಹೆಚ್ಚಳ ಮಾಡಲು ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಅಗತ್ಯ ವಸ್ತುಗಳಾದ ಹಾಲು, ಅಡುಗೆ ಅನಿಲ, ತರಕಾರಿ ಹಾಗೂ ಕಾರ್ಮಿಕರ ಕೂಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಕಾಫಿ-ಟೀ ಬೆಲೆಯನ್ನು ರೂ.2 ಹಾಗೂ ತಂಡಿ ತಿನಿಸುಗಳ ದರವನ್ನು ರೂ.2ರಿಂದ ರೂ.5 ಹೆಚ್ಚಳ ಮಾಡಲು ರಾಜ್ಯ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. 

ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದೆ. ಇತ್ತೀಚೆಗೆ ಹಾಲು ಹಾಗೂ ಮೊಸರು ಬೆಲೆ ರೂ.2 ರಷ್ಟು ಏರಿಕೆಯಾಗಿದೆ. ಅಡುಗೆ ಅನಿಲದ ಬೆಲೆ ಇತ್ತೀಚಿನ ದಿನಗಳಲ್ಲಿ ರೂ.230 ಹೆಚ್ಚಳವಾಗಿದೆ. ಸೊಪ್ಪು, ತರಕಾರಿ, ತೆಂಗಿನ ಕಾಯಿ ಬೆಲೆ ಕೂಡ ದಿನೇ ದಿನೇ ದುಬಾರಿಯಾಗುತ್ತಿದೆ. ಹೋಟೆಲ್ ಗಳ ಬಾಡಿಗೆ ಸೇರಿದಂತೆ ಪ್ರತೀಯೊಂದು ವಸ್ತುಗಳ ಬೆಲೆಯೂ ಗಗನಕ್ಕೇರುತ್ತಿದೆ. ಹೀಗಾಗಿ ಕಾಫಿ, ಟೀ, ಉಪಾಹಾರ, ಊಟದ ಬೆಲೆಯನ್ನು ಹೆಚ್ಚಳ ಮಾಡುವುದು ಅನಿವಾರ್ಯವಾಗಿದೆ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರು ಹೇಳಿದ್ದಾರೆ. 

ಹೋಟೆಲ್ ಕಾರ್ಮಿಕರು ಕೂಡ ಈ ಹಿಂದಿನಂತೆ ಸಿಗುತ್ತಿಲ್ಲ. ದಿನಕ್ಕೆ ಕನಿಷ್ಟ ರೂ.500 ಕೇಳುತ್ತಿದ್ದಾರೆ. ಇಂತಹ ಸಮಯದಲ್ಲಿ ಹೋಟೆಲ್ ಗಳನ್ನು ನಡೆಸುವುದು ಸುಲಭದ ವಿಷಯವಾಗಿಲ್ಲ. ವಿದ್ಯುತ್ ಬೆಲೆ, ಕುಡಿಯುವ ನೀರಿನ ಬೆಲೆಗಳು ಕೂಡ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ದರ್ಶಿನಿ ಹಾಗೂ ಕಾಫಿ ಬಾರ್ ಗಳಲ್ಲಿ ಆಯಾ ಬಡಾವಣೆ ಮತ್ತು ನಿರ್ವಹಣೆಯ ಆಧಾರದಲ್ಲಿ ಬೆಲೆ ಹೆಚ್ಚಳ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಈ ಸಂಬಂಧ ಈಗಾಗಲೇ ಹೋಟೆಲ್ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆ ನಡೆಸಲಾಗಿದೆ. ರಾಜ್ಯಾದ್ಯಂತ ಬೆಲೆ ಹೆಚ್ಚಳ ಮಾಡಲು ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಹಕರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com