ಬಳ್ಳಾರಿ ಹಾಲು ಒಕ್ಕೂಟದಿಂದ ಸರ್ಕಾರಿ ಆದೇಶ ಉಲ್ಲಂಘನೆ?: ಎಂಡಿ ಸರ್ವಾಧಿಕಾರಿ ಧೋರಣೆಗೆ ಬೇಸತ್ತ ನಿರ್ದೇಶಕರು

ರೈತರಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡುವ ಉದ್ದೇಶಕ್ಕೆ ಪ್ರತಿ ಲೀಟರ್ ಹಾಲಿನ ದರವನ್ನು ಎರಡು ರೂಪಾಯಿ ಹೆಚ್ಚಳ ಮಾಡಿ ಸರ್ಕಾರ ಫೆ.1ರಿಂದಲೇ ಜಾರಿಯಾಗುವಂತೆ ಇಡೀ ರಾಜ್ಯದಾದ್ಯಂತ ಆದೇಶ ಮಾಡಿದೆ. ಆದರೆ ಬಳ್ಳಾರಿ ಹಾಲು ಒಕ್ಕೂಟ ಸರ್ಕಾರದ ಆದೇಶ ಉಲ್ಲಂಘಿಸಿರುವ ಘಟನೆ ಬೆಳಕಿಗೆ ಬಂದಿದೆ. 
ಬಳ್ಳಾರಿ ಹಾಲು ಒಕ್ಕೂಟದಿಂದ ಸರ್ಕಾರಿ ಆದೇಶ ಉಲ್ಲಂಘನೆ?: ಎಂಡಿ ಸರ್ವಾಧಿಕಾರಿ ಧೋರಣೆಗೆ ಬೇಸತ್ತ ನಿರ್ದೇಶಕರು
ಬಳ್ಳಾರಿ ಹಾಲು ಒಕ್ಕೂಟದಿಂದ ಸರ್ಕಾರಿ ಆದೇಶ ಉಲ್ಲಂಘನೆ?: ಎಂಡಿ ಸರ್ವಾಧಿಕಾರಿ ಧೋರಣೆಗೆ ಬೇಸತ್ತ ನಿರ್ದೇಶಕರು

ಗಂಗಾವತಿ: ರೈತರಿಗೆ ಹೆಚ್ಚುವರಿ ಪ್ರೋತ್ಸಾಹ ಧನ ನೀಡುವ ಉದ್ದೇಶಕ್ಕೆ ಪ್ರತಿ ಲೀಟರ್ ಹಾಲಿನ ದರವನ್ನು ಎರಡು ರೂಪಾಯಿ ಹೆಚ್ಚಳ ಮಾಡಿ ಸರ್ಕಾರ ಫೆ.1ರಿಂದಲೇ ಜಾರಿಯಾಗುವಂತೆ ಇಡೀ ರಾಜ್ಯದಾದ್ಯಂತ ಆದೇಶ ಮಾಡಿದೆ. ಆದರೆ ಬಳ್ಳಾರಿ ಹಾಲು ಒಕ್ಕೂಟ ಸರ್ಕಾರದ ಆದೇಶ ಉಲ್ಲಂಘಿಸಿರುವ ಘಟನೆ ಬೆಳಕಿಗೆ ಬಂದಿದೆ. 

ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ಕಾರ್ಯವ್ಯಾಪ್ತಿ ಹೊಂದಿರುವ ರಾಬಕೋ ಹಾಲು ಒಕ್ಕೂಟ ಮಾತ್ರ ಹಾಲಿನ ದರ ಹೆಚ್ಚಳ ಮಾಡಿದೆ. ಆದರೆ ಅದನ್ನು ರೈತರಿಗೆ ಫೆ.1ರಿಂದಲೇ ಅನ್ವಯಿಸುವಂತೆ ಆದೇಶವಿದ್ದರೂ ರಾಬಕೋ ಹಾಲು ಮಂಡಳಿ ಮಾತ್ರ ಇನ್ನೂ ಆದೇಶ ಜಾರಿಗೆ ಮೀನಾ ಮೇಷ ಏಣಿಸುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. 

ಈ ಬಗ್ಗೆ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮಲ್ಲಿಕಾರ್ಜುನ ಅವರು ಪ್ರತಿಕ್ರಿಯಿಸಿ, 'ಸಾಮಾನ್ಯ ಸಭೆ ಫೆ.17ರಂದು ನಡೆಯಲಿದ್ದು, ಆ ಬಳಿಕ ರೈತರಿಗೆ ದರ ಏರಿಕೆಯ ಲಾಭ ನೀಡಲಾಗುವುದು' ಎಂದು ಹೇಳುತ್ತಿದ್ದಾರೆ. ಇದು ಹಲವು ನಿರ್ದೇಶಕರಲ್ಲಿ ಅಸಮಧಾನಕ್ಕೆ ಕಾರಣವಾಗಿದೆ. 

ಸರ್ಕಾರದ ಆದೇಶದಂತೆ ಫೆ.1ರಿಂದಲೇ ಆದೇಶ ಜಾರಿಯಾಗಬೇಕು, ಒಂದು ರೂಪಾಯಿ ರೈತನಿಗೆ ಪ್ರೋತ್ಸಾಹಧನ, 40 ಪೈಸೆ ಹಾಲು ಮಾರುವ ಏಜಂಟರಿಗೆ ಹೆಚ್ಚುವರಿ ಕಮೀಷನ್, 20 ಪೈಸೆ ಸಹಕಾರ ಸಂಘದ ಸಿಬ್ಬಂದಿಗೆ ಹೆಚ್ಚುವರಿ ಬೋನಸ್ ಹಾಗೂ 40 ಪೈಸೆ ಜಾನುವಾರುಳ ವಿಮೆಗೆ ಮೀಸಲಿಡಬೇಕು ಎಂಬ ನಿಯಮವಿದೆ. ಆದರೆ ಇದು ಬಳ್ಳಾರಿಯ ಹಾಲು ಒಕ್ಕೂಟದಲ್ಲಿ ಜಾರಿಯಾಗಿಲ್ಲ ಎನ್ನಲಾಗಿದೆ. 

ಈ ಬಗ್ಗೆ ಹೇಳಿಕೆ ನೀಡಿರುವ ಮಾಜಿ ನಿರ್ದೇಶಕ ಎನ್. ಸತ್ಯನಾರಾಯಣ, ಹಾಲು ಒಕ್ಕೂಟ ಸಭೆ ಯಾವಾಗದರೂ ಕರೆಯಲಿ, ಆದರೆ ಸರ್ಕಾರದ ಆದೇಶದಂತೆ ಫೆ.1ರಿಂದಲೇ ರೈತರಿಗೆ ಪ್ರತಿ ಲೀಟರ್‍ಗೆ ಒಂದು ರೂಪಾಯಿ ಪ್ರೋತ್ಸಾಹ ಹಣ ನೀಡಬೇಕು. ಇಲ್ಲವಾದಲ್ಲಿ ಈ ಬಗ್ಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 

ವರದಿ: ಶ್ರೀನಿವಾಸ ಎಂ.ಜೆ.    
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com