ಅಯ್ಯೋ ರಾಮ, ಈ ಕಾರಣಕ್ಕೂ ಮದುವೆ ಮುರಿದು ಬೀಳುತ್ತಾ? ಹಾಸನದಲ್ಲಿ ವಿಚಿತ್ರ ಘಟನೆ!

ಮದುವೆಯ ಧಾರೆ ಸೀರೆ ವಿಚಾರಕ್ಕೆ ಗಂಡು-ಹೆಣ್ಣಿನ ಮನೆಯವರ ನಡುವೆ ಶುರುವಾದ ಜಗಳದಿಂದಾಗಿ ನಿಶ್ಚಯವಾಗಿದ್ದ ಮದುವೆ ಮರಿದು ಬಿದ್ದು ಹೋಗಿರೋ ಘಟನೆ ಹಾಸನ ಜಿಲ್ಲೆ ಬಿದರಿಕೆರೆ ಗ್ರಾಮದಲ್ಲಿ ನಡೆದಿದೆ.

Published: 07th February 2020 08:50 AM  |   Last Updated: 07th February 2020 01:26 PM   |  A+A-


representational image

ಸಾಂದರ್ಭಿಕ ಚಿತ್ರ

Posted By : Lingaraj Badiger
Source : The New Indian Express

ಹಾಸನ: ಮದುವೆಯ ಧಾರೆ ಸೀರೆ ವಿಚಾರಕ್ಕೆ ಗಂಡು-ಹೆಣ್ಣಿನ ಮನೆಯವರ ನಡುವೆ ಶುರುವಾದ ಜಗಳದಿಂದಾಗಿ ನಿಶ್ಚಯವಾಗಿದ್ದ ಮದುವೆ ಮರಿದು ಬಿದ್ದು ಹೋಗಿರುವ ಘಟನೆ ಹಾಸನ ಜಿಲ್ಲೆ ಬಿದರಿಕೆರೆ ಗ್ರಾಮದಲ್ಲಿ ನಡೆದಿದೆ.

ಫೆ.5 ರಂದು ಗ್ರಾಮದ ಬಿ.ಎನ್.ರಘುಕುಮಾರ್ ಮತ್ತು ಅದೇ ಗ್ರಾಮದ ಹುಡುಗಿ ನಡುವೆ ವಿವಾಹವಾಗಿ, ಇಂದು ಬೀಗರ ಔತಣ ಕೂಟ ನಡೆಯಬೇಕಿತ್ತು. 

ಆದರೀಗ ಸಣ್ಣ ಕಾರಣಕ್ಕೆ ಮಂಗಳಕಾರ್ಯ ನಿಂತು ಹೋಗಿದ್ದು, ಹುಡುಗ ನಾಪತ್ತೆಯಾಗಿದ್ದಾನೆ. ಶುಭಕಾರ್ಯಕ್ಕೆ ಬಂದಿದ್ದ ನೆಂಟರು ನಿರಾಶೆಯಿಂದ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮರಳಿದ್ದಾರೆ. ಒಬ್ಬರ ವಿರುದ್ಧ ಮತ್ತೊಬ್ಬರು ದೂರುತ್ತಿದ್ದಾರೆ.

ಆದರೆ ಧಾರಾ ಮಹೂರ್ತಕ್ಕೆ ಹುಡುಗನ ಮನೆಯವರು ತಂದಿರುವ ಸೀರೆಯಲ್ಲಿ ಬಾರ್ಡರ್ ಇಲ್ಲ. ಇದನ್ನು ಬದಲಾಯಿಸಿ ಅನ್ನೋ ಕಾರಣಕ್ಕೆ ವಧು-ವರರ ಮನೆಯವರ ನಡುವೆ ಶುರುವಾದ ಜಗಳ ಮದುವೆಯನ್ನೇ ಮುರಿದು ಹಾಕಿದೆ. 

ಹುಡುಗ ರಾತ್ರೋರಾತ್ರಿ ಕಣ್ಮರೆಯಾಗಿದ್ದು, ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇದರಿಂದ ದಿಕ್ಕು ಕಾಣದಾಗಿರುವ ಹುಡುಗಿ ಮನೆಯವರು ಮಹಿಳಾ ಠಾಣೆ ಮೆಟ್ಟಿಲೇರಿದ್ದಾರೆ.

Stay up to date on all the latest ರಾಜ್ಯ news
Poll
Covid-19_vaccine1

ಕೋವಿಡ್-19 ಲಸಿಕೆ ಅಂತಿಮವಾಗಿ ನಮಗೆ ಸಹಜ ಸ್ಥಿತಿಗೆ ಬರಲು ಸಹಾಯ ಮಾಡುತ್ತದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp