ಕೆಎಸ್ ಆರ್ ಟಿಸಿಯ 10 ಬಸ್ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ಯಂತ್ರಗಳ ಅಳವಡಿಕೆ

ಋತುಸ್ತ್ರಾವದ ಸಮಯದ ಸ್ವಚ್ಛತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) ರಾಜ್ಯದ 10 ಬಸ್ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ವಿತರಿಸುವ ಮತ್ತು ಎಸೆಯುವ ಯಂತ್ರಗಳನ್ನು ಅಳವಡಿಸಿದೆ
ಮಂಗಳೂರು ಬಸ್ ನಿಲ್ದಾಣ
ಮಂಗಳೂರು ಬಸ್ ನಿಲ್ದಾಣ

ಬೆಂಗಳೂರು: ಋತುಸ್ತ್ರಾವದ ಸಮಯದ ಸ್ವಚ್ಛತೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ) ರಾಜ್ಯದ 10 ಬಸ್ ನಿಲ್ದಾಣಗಳಲ್ಲಿ ಸ್ಯಾನಿಟರಿ ನ್ಯಾಪ್ ಕಿನ್ ವಿತರಿಸುವ ಮತ್ತು ಎಸೆಯುವ ಯಂತ್ರಗಳನ್ನು ಅಳವಡಿಸಿದೆ

ಮಹಿಳೆಯರ ವಾಷ್ ರೂಂ ನಲ್ಲಿ ಈ ಯಂತ್ರವನ್ನು ಅಳವಡಿಸಲಾಗಿದ್ದು, ಮಹಿಳೆಯರು 5 ರೂ. ನಾಣ್ಯ ಹಾಕಿ ಸ್ಯಾನಿಟರಿ ಪ್ಯಾಡ್ ಪಡೆಯಬಹುದು. ಈ ವೆಂಡಿಂಗ್ ಯಂತ್ರಗಳಲ್ಲಿ ಸುಮಾರು 100 ನ್ಯಾಪ್ ಕಿನ್ ಗಳನ್ನು ಇರಿಸಬಹುದಾಗಿದೆ. 

ಈಗಾಗಲೇ ಬೆಂಗಳೂರಿನ ಎರಡು ನಿಲ್ದಾಣಗಳಲ್ಲಿ ಯಂತ್ರಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಮತ್ತು ಎರಡನೇ ಹಂತದಲ್ಲಿ ಮಂಗಳೂರು ಸೇರಿದಂತೆ ಹತ್ತು ಕೆಎಸ್ ಆರ್ ಟಿಸಿ ನಿಲ್ದಾಣಗಳಲ್ಲಿ  ಇದನ್ನು ವಿಸ್ತರಿಸಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಎಸ್. ಕಳಸದ ಮಾಹಿತಿ ನೀಡಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com