ಸೋಲಾರ್ ದೀಪಗಳಿಂದ ಹಿಡಿದು ಸಿಸಿಟಿವಿ ಕ್ಯಾಮೆರಾದವರೆಗೆ: ನಗರಕ್ಕಿಂತಲೂ ಹೆಚ್ಚು ಅಭಿವೃದ್ಧಿಗೊಳ್ಳುತ್ತಿರುವ ರಾಜ್ಯದ ಗ್ರಾಮಗಳಿವು...

ಗ್ರಾಮಗಳು ಎಂದಾಕ್ಷಣ ಎಲ್ಲರ ಮೊದಲ ಚಿಂತನೆ ಬರುವುದು, ಮೂಲಭೂತ ಸೌಕರ್ಯ ಇಲ್ಲದಿರುವುದು, ಸೂಕ್ತ ರಸ್ತೆಗಳು, ಬೀದಿದೀಪಗಳಿಲ್ಲದಿರುವುದು ಹಾಗೂ ಇತರೆ ಅವ್ಯವಸ್ಥೆಗಳ ಬಗೆಗಿನ ವಿಚಾರಗಳೇ ಬರುತ್ತವೆ. ಆದರೆ, ರಾಜ್ಯ ಈ ಗ್ರಾಮಗಳು ಇದಕ್ಕೆ ತದ್ವಿರುದ್ಧವಾಗಿವೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಗ್ರಾಮಗಳು ಎಂದಾಕ್ಷಣ ಎಲ್ಲರ ಮೊದಲ ಚಿಂತನೆ ಬರುವುದು, ಮೂಲಭೂತ ಸೌಕರ್ಯ ಇಲ್ಲದಿರುವುದು, ಸೂಕ್ತ ರಸ್ತೆಗಳು, ಬೀದಿದೀಪಗಳಿಲ್ಲದಿರುವುದು ಹಾಗೂ ಇತರೆ ಅವ್ಯವಸ್ಥೆಗಳ ಬಗೆಗಿನ ವಿಚಾರಗಳೇ ಬರುತ್ತವೆ. ಆದರೆ, ರಾಜ್ಯ ಈ ಗ್ರಾಮಗಳು ಇದಕ್ಕೆ ತದ್ವಿರುದ್ಧವಾಗಿವೆ. ನಗರಕ್ಕಿಂತಲೂ ಹೆಚ್ಚು ರಾಜ್ಯದ ಈ ಗ್ರಾಮಗಳು ಹೆಚ್ಚಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಇದೀಗ ರಾಷ್ಟ್ರದಾದ್ಯಂತ ಮೆಚ್ಚುಗೆಗೆ ಪಾತ್ರವಾಗುತ್ತಿವೆ. 

ದೊಡ್ಡಜಾಲಾ ಪಂಚಾಯತ್ ಅಡಿಯಲ್ಲಿ ಬರುವ 8 ಗ್ರಾಮಗಳು ನಗರಕ್ಕಿಂತಲೂ ಹೆಚ್ಚೆಚ್ಚು ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದುವ ಮೂಲಕ ದೇಶದ ಗುರ್ತಿಕೆಗೆ ಪಾತ್ರವಾಗಿದೆ. 

ದೊಡ್ಡಜಾಲಾ ಪಂಚಾಯತ್'ನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಂಗಾರಾಮ್ ಅವರು ಗ್ರಾಮಗಳಿಗೆ ಸೋಲಾರ್ ಬೀದಿದೀಪಗಳು, ಸಿಸಿಟಿವಿ ಗಳನ್ನು ಅಳವಡಿಸಿದ್ದು, ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತಿದ್ದಾರೆ. 

ಕೇವಲ ಅತ್ಯಾಧುನಿಕ ಬೀದಿದೀಪ, ಸಿಸಿಟಿವಿ ಅಷ್ಟೇ ಅಲ್ಲದೆ, 2 ಗ್ರಾಮದಲ್ಲಿ ಉಚಿತ ವೈಫೈ ಸೌಲಭ್ಯವಿದ್ದು, ಉಳಿದ ಗ್ರಾಮಗಳಿಗೂ ಶೀಘ್ರದಲ್ಲಿಯೇ ಈ ವ್ಯವಸ್ಥೆ ಕಲ್ಪಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಗ್ರಾಮಗಳನ್ನು ಈ ಮಟ್ಟಕ್ಕೆ ಅಭಿವೃದ್ಧಿಪಡಿಸಿರುವ ಹಿನ್ನೆಲಯಲ್ಲಿ ಗಂಗಾರಾಮ್ ಮತ್ತು ಇತರೆ ಇಬ್ಬರು ಪಿಡಿಒಗಳಿಗೆ ಕೃಷಿ ಮತ್ತು ಸ್ಮಾರ್ಟ್ ವಿಲೇಜ್ ಫಾರ್ ಸಸ್ಟೈನಬಲ್ ಡಿವಿಷನ್ ಕುರಿತು ಇನ್ಸ್ಟಿಟ್ಯೂಷನ್ ಆಫ್ ಇಂಜಿನಿಯರ್ಸ್ ರಾಷ್ಟ್ರೀಯ ಸಮ್ಮೇಳನದಲ್ಲಿ ಗೌರವಿಸಿದ್ದಾರೆ. 

ಗೌರವ ಸ್ವೀಕರಿಸಿದ ಇಬ್ಬರು ಪಿಡಿಒಗಳನ್ನು ರಾಜಕುಂಟೆಯ ರಾಜೇಶ್ ಹೆಚ್.ಆರ್. ಹಾಗೂ ಬಶೇಹಟ್ಟಿ ಗ್ರಾಮ ಪಂಚಾಯತಿಯ ಕುಮಾರ್ ಎಂದು ಹೇಳಲಾಗುತ್ತಿದೆ. 

ಆರಂಭದಲ್ಲಿ ಬೆಂಗಳೂರಿನಲ್ಲಿ ಭವಿಷ್ಯ ಆರಂಭಿಸಿದ್ದ ಈ ಮೂವರು ಅಧಿಕಾರಿಗಳು ನಂತರ ಪಿಡಿಒ ಆಗಿ ಗ್ರಾಮಗಳಿಗೆ ವರ್ಗಾವಣೆಗೊಂಡಿದ್ದರು. ಇದೀಗ ಒಬ್ಬೊಬ್ಬರಲ್ಲಿಯೂ ಆರೋಗ್ಯಕರ ಸ್ಪರ್ಧೆಗಳು ಏರ್ಪಟ್ಟಿದ್ದು, ಇದರ ಪರಿಣಾಮ ಗ್ರಾಮಗಳು ಉನ್ನತ ಮಟ್ಟಕ್ಕೇರಿವೆ. 

ಗ್ರಾಮ ಪಂಚಾಯತಿ ಹಾಗೂ ಗ್ರಾಮಸ್ಥರಿಂದ ಸಾಕಷ್ಟು ಸಹಕಾರಗಳು ದೊರಕಿವೆ. ಇದೀಗ ಗ್ರಾಮಗಳು ರಾಷ್ಟ್ರೀಯ ಮಟ್ಟದಲ್ಲಿ ಗುರ್ತಿಕೆ ಪಡೆಯುತ್ತಿವೆ. ನಗರದಲ್ಲಿರುವ ನಿವಾಸಿಗಳಿಂತಲೂ ಗ್ರಾಮದ ನಿವಾಸಿಗಳು ಹೆಚ್ಚು ಜ್ಞಾನವುಳ್ಳವರಾಗಿದ್ದಾರೆ. ನೈಸರ್ಗಿಕ ಸಂಪನ್ಮೂಲಗದ ಬಗ್ಗೆ ಹಾಗೂ ಅವುಗಳ ಬಳಕೆ ಬಗ್ಗೆ ಗ್ರಾಮಸ್ಥರಿಗೆ ಹೆಚ್ಚು ತಿಳಿವಳಿಕೆಗಳಿವೆ ಎಂದು ಗಂಗಾರಾಮ್ ಅವರು ಹೇಳಿದ್ದಾರೆ. 

ನಿಧಿ ಸಂಗ್ರಹಣೆ ಮಾಡುವುದು ಅತ್ಯಂತ ಕಠಿಣ ಎಂಬ ತಿಳಿವಳಿಕೆ ತಪ್ಪು. ಸಹಾಯದ ರೂಪದಲ್ಲಿ ನಿಧಿ ಬರಲಿದ್ದು, ಅದನ್ನು ನಾವು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕಿದೆ. ಹಣದ ಪ್ರಾಮುಖ್ಯತೆ ಗ್ರಾಮಸ್ಥರಿಗೆ ತಿಳಿದಿದ್ದು, ಅವುಗಳನ್ನು ಹೇಗೆ ಬಳಕೆ ಮಾಡಬೇಕೆಂಬುದೂ ಅವರಿಗೆ ತಿಳಿದಿದೆ ಎಂದು ರಾಜೇಶ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com