ಕೊರೋನಾ ಭೀತಿ: ಹಡಗಿನಲ್ಲಿ ಸಿಲುಕಿರುವ ಕಾರವಾರ ಯುವಕ, ಮನೆಗೆ ಮರಳಲು ಬೇಕಿದೆ ಸಹಾಯ ಹಸ್ತ

 ಜಪಾನ್‌ನ ಕರಾವಳಿಯಲ್ಲಿ ಸಿಲುಕಿರುವ  ಕ್ರೂಸ್ ಲೈನರ್ ಡೈಮಂಡ್ ಪ್ರಿನ್ಸೆಸ್‌ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಕಾರವಾರದ ಯುವಕನೊಬ್ಬ ಭಾರತಕ್ಕೆ ಮರಳಲು ಕಾತುರನಾಗಿದ್ದು ಇದಕ್ಕಾಗಿ ಭಾರತ ಸರ್ಕಾರದ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾನೆ. ಈ ಕ್ರೂಸರ್ ಸಿಂಗಾಪುರಕ್ಕೆ ತೆರಳಬೇಕಿದ್ದದ್ದು ಚಿನಾಗೆ ಹಿಂತಿರುಗಲು ತಯಾರಾಗಿದೆ.
ಹಡಗಿನಲ್ಲಿ ಸಿಲುಕಿರುವ ಅಭಿಷೇಕ್ ಹಾಗೂ ಆತನ ಅಸಹಾಯಕ ತಂದೆ
ಹಡಗಿನಲ್ಲಿ ಸಿಲುಕಿರುವ ಅಭಿಷೇಕ್ ಹಾಗೂ ಆತನ ಅಸಹಾಯಕ ತಂದೆ

ಕಾರವಾರ: ಜಪಾನ್‌ನ ಕರಾವಳಿಯಲ್ಲಿ ಸಿಲುಕಿರುವ  ಕ್ರೂಸ್ ಲೈನರ್ ಡೈಮಂಡ್ ಪ್ರಿನ್ಸೆಸ್‌ನಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ಕಾರವಾರದ ಯುವಕನೊಬ್ಬ ಭಾರತಕ್ಕೆ ಮರಳಲು ಕಾತುರನಾಗಿದ್ದು ಇದಕ್ಕಾಗಿ ಭಾರತ ಸರ್ಕಾರದ ಸಹಾಯಹಸ್ತದ ನಿರೀಕ್ಷೆಯಲ್ಲಿದ್ದಾನೆ. ಈ ಕ್ರೂಸರ್ ಸಿಂಗಾಪುರಕ್ಕೆ ತೆರಳಬೇಕಿದ್ದದ್ದು ಚಿನಾಗೆ ಹಿಂತಿರುಗಲು ತಯಾರಾಗಿದೆ.

ಕಾರವಾರದ  ಪದ್ಮನಾಭನಗರದ ಅಭಿಷೇಕ್ ಕಳೆದ ಆರು ವರ್ಷಗಳಿಂದ ಕ್ರೂಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. 3,700 ಪ್ರಯಾಣಿಕರು ಮತ್ತು ಸಿಬ್ಬಂದಿ ಸದಸ್ಯರನ್ನು ಹೊಂದಿರುವ ಈ ಹಡಗು ಟೋಕಿಯೊದ ಯೊಕೊಹಾಮಾ ಬಳಿಯ ಬಂದರಿನಿಂದ  ಬೇರ್ಪಟ್ಟಿದ್ದು ಅದರ 50 ಕ್ಕೂ ಹೆಚ್ಚು ಪ್ರಯಾಣಿಕರು ಕೊರೋನಾವೈರಸ್‌ನಿಂದ ಪೀಡಿತರಾಗಿದ್ದಾರೆಂದು ತಿಳಿದುಬಂದಿದೆ.

ಅಭಿಷೇಕ್ ಸೋಂಕಿಗೆ ಒಳಗಾಗದಿದ್ದರೂ, ಸಹ ಆತ ಹಾಗೂ ಇತರೆ ಪ್ರಯಾಣಿಕರು ಕ್ರೂಸರ್ ನಿಂದ ಇಳಿಯುವುದನ್ನು ತಡೆಯಲಾಗಿದೆ.ಇದರಿಂದ ಭಯಗೊಂಡಿರುವ ಅಭಿಷೇಕ್ ಸಹಾಯಕ್ಕಾಗಿ ತಮ್ಮ ಹೆತ್ತವರ ನೆರವು ಹಾಗೂ ಸರ್ಕಾರದ ನೆರವನ್ನು ಕೋರಿದ್ದಾನೆ. ಇತ್ತ ಮಗನ ಸ್ಥಿತಿಕಂಡು ಆತಂಕಿತರಾಗಿರುವ ಬಾಲಕೃಷ್ಣ ಮೊಗೇರ ಹಾಗೂ ರೂಪಾಲಿ ಮಗನ ಸುರಕ್ಷಿತ ಮರಳುವಿಕೆಯನ್ನು ಖಚಿತಪಡಿಸಿಕೊಳ್ಳಲು ಜಿಲ್ಲಾಡಳಿತದ ಸಹಾಯವನ್ನು ಕೋರಿದ್ದಾರೆ ಮತ್ತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜ್ಞಾಪಕ ಪತ್ರವನ್ನು ಸಲ್ಲಿಸಿದ್ದಾರೆ.

“ಅಭಿಷೇಕ್ ನನ್ನು ಸುರಕ್ಷಿತವಾಗಿ ಮರಳುವಂತೆ ಮಾಡಲು ಮನವಿ ಮಾಡಿ ದೂರವಾಣಿಯಲ್ಲಿ ನಮ್ಮನ್ನು ಸಂಪರ್ಕಿಸಿದ್ದರು. ಅವರು ಅಲ್ಲಿ ಸಾಯಲು ಬಯಸುವುದಿಲ್ಲ, ” ಎಂದು ಅಭಿಷೇಕ್ ಪೋಷಕರು ಹೇಳಿದ್ದಾರೆ.ಏತನ್ಮಧ್ಯೆ, ಜಪಾನ್‌ನ ಭಾರತೀಯ ರಾಯಭಾರ ಕಚೇರಿ ಶನಿವಾರ ಹೇಳಿಕೆ ನೀಡಿ, “ಡ್ರೀಮ್ ಪ್ರಿನ್ಸೆಸ್ ಕ್ರೂಸ್‌ನಲ್ಲಿರುವ ಭಾರತೀಯರು ಸುರಕ್ಷಿತರಾಗಿದ್ದಾರೆ ಮತ್ತು ಉತ್ತಮ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿದೆ ”. ಎಂದು ತಿಳಿಸಿದೆ.

ಅಧಿಕಾರಿಗಳಿಂದ ಮಾಹಿತಿ ಇಲ್ಲ: ಅಭಿಷೇಕ್ ತಂದೆ

"ಭಾರತ ಸರ್ಕಾರವು ಅವರಿಗೆ ಸಹಾಯ ಮಾಡಲು ತನ್ನ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ ಮತ್ತು ಜಪಾನ್ ಸರ್ಕಾರದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಪ್ರಯಾಣದಲ್ಲಿರುವವರಿಗೆ ಸಾಕಷ್ಟು ವೈದ್ಯಕೀಯ ನೆರವು, ಆಹಾರ, ಉಪಹಾರ ಮತ್ತು ನೀರನ್ನು ಖಾತ್ರಿಪಡಿಸಲಾಗಿದೆ ”ಎಂದು ದೂತಾವಾಸದ ಹೇಳಿಕೆ ವಿವರಿಸಿದೆ. 

. ಭಾರತೀಯ ರಾಯಭಾರ ಕಚೇರಿಯ ಅಧಿಕಾರಿ ಅನಿಲ್ ಕೆ ಕೈರಾಹೇಳಿದಂತೆ , “ಕೆಲವು ಪ್ರಕರಣಗಳು ಕೊರೋನಾವೈರಸ್ ಪಾಸಿಟಿವ್ ಆಗಿ ಬಂದಿದ್ದು ಫೆಬ್ರವರಿ 5 ರಿಂದ ಹಡಗನ್ನು ಪ್ರತ್ಯೇಕ ನಿಗಾದಲ್ಲಿಡಲಾಗಿದೆ.  ಫೆಬ್ರವರಿ 20 ರವರೆಗೆ ಈ ಕ್ರ್ಮ ಮುಂದುವರಿಯಲಿದೆ. . ಜಪಾನಿನ ಆರೋಗ್ಯ ಸಚಿವಾಲಯವು ಜಾರಿಗೆ ತಂದ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳನ್ನು ಅನುಸರಿಸಿ ಈ ಉಪಕ್ರ್ಮ ತೆಗೆದುಕೊಳ್ಲಲಾಗಿದೆ.

ಆದಾಗ್ಯೂ, ಅಭಿಷೇಕ್ ಅವರ ಪೋಷಕರು ಮಾಡಿದ ಮನವಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಾಲಕೃಷ್ಣ ಅವರನ್ನು ಸಂಪರ್ಕಿಸಿದಾಗ, "ಭಯಭೀತರಾಗಬೇಡಿ ಎಂದು ಹೇಳಿರುವ ಉತ್ತರ ಕನ್ನಡ ಡಿಸಿ ಹೊರತುಪಡಿಸಿ, ಜಪಾನ್‌ನ ಯಾವುದೇ ಅಧಿಕಾರಿ ಅಥವಾ ಭಾರತೀಯ ರಾಯಭಾರ ಕಚೇರಿಯಿಂದ ಯಾವುದೇ ಸಂವಹನ ನಡೆದಿಲ್ಲ" ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com