ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಲು ಎರಡು, ಮೂರನೇ ಹಂತದ ನಗರಗಳತ್ತ ಗಮನ: ಜಗದೀಶ್ ಶೆಟ್ಟರ್

 ರೋಮ್ ದಾವೋಸ್ ಹೈದರಾಬಾದ್‌ ಬಳಿಕ ಈಗ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ಇದೀಗ ಗುವಾಹಟಿಗೆ ತೆರಳಿದ್ದಾರೆ. ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗಾಗಿ ಹೂಡಿಕೆದಾರರನ್ನು ಆಕರ್ಷಿಸಲು ಅವರು ಊರಿಂದ ಊರಿಗೆ ಬೇರೆ ಬೇರೆ ನಗರಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಆದಾಗ್ಯೂ, ಹಿಂದಿನ ಸರ್ಕಾರಗಳ ಕ್ರಮಗಳಿಗಿಂತ ಈ ರಾಜ್ಯ ಸರ್ಕಾರ  ಬೆಂಗಳೂರಿಗೆ ಉತ್ತೇಜನ ನೀಡುವುದಲ್ಲ ಹಂತ - II ಮತ್ತು
ಜಗದೀಶ್ ಶೆಟ್ಟರ್
ಜಗದೀಶ್ ಶೆಟ್ಟರ್

ಬೆಂಗಳೂರು: ರೋಮ್ ದಾವೋಸ್ ಹೈದರಾಬಾದ್‌ ಬಳಿಕ ಈಗ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ಇದೀಗ ಗುವಾಹಟಿಗೆ ತೆರಳಿದ್ದಾರೆ. ರಾಜ್ಯದಲ್ಲಿ ಕೈಗಾರಿಕಾಭಿವೃದ್ಧಿಗಾಗಿ ಹೂಡಿಕೆದಾರರನ್ನು ಆಕರ್ಷಿಸಲು ಅವರು ಊರಿಂದ ಊರಿಗೆ ಬೇರೆ ಬೇರೆ ನಗರಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಆದಾಗ್ಯೂ, ಹಿಂದಿನ ಸರ್ಕಾರಗಳ ಕ್ರಮಗಳಿಗಿಂತ ಈ ರಾಜ್ಯ ಸರ್ಕಾರ  ಬೆಂಗಳೂರಿಗೆ ಉತ್ತೇಜನ ನೀಡುವುದಲ್ಲ ಹಂತ - II ಮತ್ತು ಹಂತ IIIರ ನಗರಗಳಲ್ಲಿ ಕೂಡ ಹೂಡಿಕೆದಾರರು ಹೂಡಿಕೆ ಮಾಡುವಂತೆ ಹೆಚ್ಚಿನ ಒತ್ತು ನೀಡುತ್ತಿದೆ. ಇದು ರಾಜ್ಯದ ಇತರ ಭಾಗಗಳಅಭಿವೃದ್ಧಿಗೆ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಅತಿ ಹೆಚ್ಚು ವಾಹನದಟ್ಟಣೆ, ಜನದಟ್ಟಣೆಗಳಿಂದ ಸಮಸ್ಯೆಗೀಡಾಗಿರುವ ಬೆಂಗಳೂರಿನ ಮೇಲಿರುವ ಒತ್ತಡವನ್ನು ಕೆಲಮಟ್ಟಿಗೆ ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗಿದೆ.

 "ನಾವು ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ರಾಜ್ಯದ ಬೇರೆ ನಗರಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜಿಸುತ್ತೇವೆ.ಶೆಟ್ಟರ್ ಪತ್ರಿಕೆಗೆ ತಿಳಿಸಿದ್ದಾರೆ.ಇತ್ತೀಚೆಗೆ ಸ್ವಿಟ್ಜರ್‌ಲ್ಯಾಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ನೇತೃತ್ವದ ಕರ್ನಾಟಕ ನಿಯೋಗದಲ್ಲಿ ಶೆಟ್ಟರ್ ಭಾಗವಾಗಿದ್ದರು

ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಜತೆಗೆ ದಿ ನ್ಯೂ ಸಂಡೇ ಎಕ್ಸ್‌ಪ್ರೆಸ್ ನಡೆಸಿದ ಸಂದರ್ಶನದ ಆಯ್ದ ಭಾಗವಿಲ್ಲಿದೆ-

ದಾವೋಸ್ ಸಭೆಗಳಲ್ಲಿ ಕೈಗಾರಿಕೋದ್ಯಮಿಗಳು ತೋರಿಸಿದ ಆಸಕ್ತಿಯನ್ನು ಹೂಡಿಕೆಯಾಗಿ ಪರಿವರ್ತಿಸಲು ಯಾವ ರೀತಿಯ ಪ್ರಯತ್ನ ನಡೆಸಿದ್ದೀರಿ?

ನಾವು ವಿಶ್ವ ಆರ್ಥಿಕ ವೇದಿಕೆಯಲ್ಲಿ ವಿಶ್ವದಾದ್ಯಂತದ ಅನೇಕ ಉನ್ನತ ಕೈಗಾರಿಕೋದ್ಯಮಿಗಳೊಂದಿಗೆ ಸಂವಹನ ನಡೆಸಿದ್ದೇವೆ. ಅವರಲ್ಲಿ 40 ಕ್ಕೂ ಹೆಚ್ಚು ಜನರು ಕರ್ನಾಟಕದಲ್ಲಿ ಹೂಡಿಕೆ ಮಾಡಲು ತೀವ್ರ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಇಲಾಖೆಯಲ್ಲಿನ ನಮ್ಮ ಅಧಿಕಾರಿಗಳು ಮತ್ತು ನಾನು ವೈಯಕ್ತಿಕವಾಗಿ ಆ ಸಭೆಗಳನ್ನು ನಡೆಸಿದ್ದು  ಈ ವರ್ಷದ ನವೆಂಬರ್‌ನಲ್ಲಿ ರಾಜ್ಯದಲ್ಲಿ ನಡೆಯುವ ಹೂಡಿಕೆದಾರರ ಶೃಂಗಸಭೆಯಲ್ಲಿ ನಾವು ಫಲಿತಾಂಶಗಳನ್ನು ಕಾಣಲಿದ್ದೇವೆ.

ನೀವು ಇತ್ತೀಚೆಗೆ ಗುವಾಹಟಿಯಲ್ಲಿ ಹೂಡಿಕೆದಾರರನ್ನು ಭೇಟಿ ಮಾಡಿದ್ದೀರಿ. ಪ್ರತಿಕ್ರಿಯೆ ಹೇಗಿತ್ತು?

ಗುವಾಹಟಿಯಲ್ಲಿ ಗ್ರಾಹಕ ಸರಕುಗಳ ಉತ್ಪಾದನಾ ಕೈಗಾರಿಕೆಗಳನ್ನು ಕರ್ನಾಟಕದಲ್ಲಿ ಹೆಚ್ಚಿಸಲು ಅಂತಹವುಗಳಲ್ಲಿ ಹೂಡಿಕೆ ಂಆಡಲು ನಾವು ಪ್ರಯತ್ನಿಸುತ್ತಿದ್ದೇವೆ. ಅವರಿಗೆ (ಆ ರಾಜ್ಯದಲ್ಲಿ) ನೀಡಲಾದ ಶೂನ್ಯ ತೆರಿಗೆ ರಿಯಾಯಿತಿ ಕೊನೆಗೊಳ್ಳುತ್ತಿದೆ ಮತ್ತು ನಾವು ಅವರನ್ನು ಇಲ್ಲಿ ಹೂಡಿಕೆ ಮಾಡಲುಉತ್ತೇಜಿಸುತ್ತೇವೆ.  ಬಹಳಷ್ಟು ಜನರು ಆಸಕ್ತಿ ತೋರಿಸಿದ್ದಾರೆ ಮತ್ತು ಫೆ .14ರ ಹುಬ್ಬಳ್ಳಿಯ  ಹೂಡಿಕೆದಾರರ ಸಭೆಯಲ್ಲಿ ಭಾಗವಹಿಸಲು ನಾವು ಅವರನ್ನು ಆಹ್ವಾನಿಸಿದ್ದೇವೆ

ಹಂತ II ಹಾಗೂ ಹಂತ III ಗರಗಳತ್ತ ಹೆಚ್ಚು ಗಮನ ಹರಿಸಲಾಗಿದೆಯೇ?

ಹೌದು, ಬೆಂಗಳೂರಿನ ಮೇಲೆ ಹೆಚ್ಚಿನ ಒತ್ತಡವಿದೆ ಮತ್ತು ಹಂತ II ಹಾಗೂ ಹಂತ III ನಗರಗಳಲ್ಲೂ ಕೈಗಾರಿಕೆಗಳು ಬರಬೇಕೆಂದು ನಾವು ಬಯಸುತ್ತೇವೆ. ಪ್ರಯತ್ನಗಳು ನಡೆಯುತ್ತಿವೆಹುಬ್ಬಳ್ಳಿಯಲ್ಲಿ ಹೂಡಿಕೆದಾರರ ಸಭೆ ಆ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಲಿದೆ. ಮಹಾರಾಷ್ಟ್ರದಲ್ಲಿ, ಪುಣೆ, ನಾಗ್ಪುರ ಮತ್ತು ಇತರ ನಗರಗಳನ್ನು ಅಭಿವೃದ್ಧಿಪಡಿಸಲಾಗಿದೆ. ತಮಿಳುನಾಡಿನಲ್ಲಿ, ಚೆನ್ನೈ ಹೊರತುಪಡಿಸಿ ಕೊಯಮತ್ತೂರು ಮತ್ತು ಇತರ ನಗರಗಳಲ್ಲಿಯೂ ಅನೇಕ ಕೈಗಾರಿಕೆಗಳು ಇವೆ. ನಾವೂ ನಮ್ಮ ರಾಜ್ಯದ ಎರಡನೇ ಮೂರನೇ ಹಂತದ  ನಗರಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡುತ್ತಿದ್ದೇವೆ. ಇದು ಬೆಂಗಳೂರಿನ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಕೈಗಾರಿಕೆಗಳಿಗೆ ಭೂಸ್ವಾಧೀನವು ಒಂದು ಪ್ರಮುಖ ಕಾಳಜಿಯೇ?

ಭೂಸ್ವಾಧೀನ ಪ್ರಕ್ರಿಯೆಯನ್ನು ಸರಳೀಕರಿಸಲು ನಾವು ಬಯಸುತ್ತೇವೆ. ಅದಕ್ಕಾಗಿ, ನಾವು ಕಾಯಿದೆಯನ್ನು ತಿದ್ದುಪಡಿ ಮಾಡಬೇಕಾಗಿಲ್ಲ, ಆದರೆ ನಿಯಮಗಳಲ್ಲಿ ಕೆಲವು ಬದಲಾವಣೆಗಳೊಂದಿಗೆ ಇದನ್ನು ಮಾಡಬಹುದು. ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ಕೈಗಾರಿಕೆಗಳು ನೇರವಾಗಿ ಕೃಷಿ ಭೂಮಿಯನ್ನು ಖರೀದಿಸಬಹುದು. ನಮ್ಮ ರಾಜ್ಯದಲ್ಲಿ, ಕಾರ್ಯವಿಧಾನಗಳು ಸ್ವಲ್ಪ ಸಮಯ ತೆಗೆದುಕೊಳ್ಳುತ್ತವೆ ಮತ್ತು ನಾವು ವ್ಯವಸ್ಥೆಯನ್ನು ಸರಳೀಕರಿಸಲು ಪ್ರಯತ್ನಿಸುತ್ತಿದ್ದೇವೆ.

ಕೈಗಾರಿಕೆಗಳನ್ನು ಸ್ಥಾಪಿಸಲು ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಬಳಸುವುದಿಲ್ಲ ಎಂದು ಕೆಲವರು ಆರೋಪಿಸಿದ್ದಾರೆ. ಅಂತಹ ಭೂಮಿಯನ್ನು ಸರ್ಕಾರ ವಾಪಸ್ ತೆಗೆದುಕೊಳ್ಳುತ್ತದೆಯೇ?

ಕೈಗಾರಿಕೆಗಳಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಗುರುತಿಸಲು ಸಮೀಕ್ಷೆ ನಡೆಸಲಾಗುತ್ತಿದೆ, ಆದರೆ ಹಲವು ವರ್ಷಗಳಿಂದ ಖಾಲಿ ಇರುವ ಕುರಿತು  ಸಮೀಕ್ಷೆ ಪೂರ್ಣಗೊಂಡ ನಂತರ, ನಾವು ಅದನ್ನು ಹಿಂತಿರುಗಿಸುವ ಪ್ರಯತ್ನ ಮಾಡುತ್ತೇವೆ. ಅಂತಹ ಭೂಪ್ರದೇಶಗಳ ವ್ಯಾಪ್ತಿಯು ಸಮೀಕ್ಷೆಯ ನಂತರವೇ ಅದರ ಫಲ್;ಇತಾಂಶ ಹೊರಬೀಳಬೇಕಿದೆ.  ಕೆಲವು ಸಂದರ್ಭಗಳಲ್ಲಿ, ಪರವಾನಗಿ ಪಡೆಯುವಲ್ಲಿ ವಿಳಂಬ ಅಥವಾ ಭೂಮಿಯನ್ನು ಬಳಸದಿರಲು ಇತರ ಕಾರ್ಯವಿಧಾನಗಳಂತಹ ಕೆಲವು ಉತ್ತಮ ಕಾರಣಗಳು ಇರಬಹುದು. ಉದ್ದೇಶಪೂರ್ವಕವಾಗಿ ಭೂಮಿಯನ್ನು ಖಾಲಿ ಇಡಲಾಗಿದೆಯೇ ಎಂದು ನಾವು ಕಂಡುಹಿಡಿಯಬೇಕಾಗಿದೆ.

ಬಿಜೆಪಿಯ ಹಿರಿಯ ನಾಯಕರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯವಿದೆ, ಸಿಎಂ ಎಲ್ಲರನ್ನ ಸಮಆಧಾನಗೊಳಿಸುವುದು ಕಠಿಣವೆನ್ನಲಾಗಿದೆ?

ಅದು ನಿಜವಲ್ಲ. ಪ್ರತಿಯೊಬ್ಬರೂ ತಮ್ಮ ಕ್ಷೇತ್ರಗಳ ಮತ್ತು ರಾಜ್ಯದ ಅಭಿವೃದ್ಧಿಯನ್ನು ಬಯಸುವುದರಿಂದ ಯಾವುದೇ ಸಮಸ್ಯೆಗಳಿಲ್ಲ.. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com