ಕಾಡೊಳಗಿನ ಶಾಲೆಯಲ್ಲಿ ಶಿಕ್ಷಣ ಸಚಿವರ ಮೂರನೇ ಶಾಲಾ ವಾಸ್ತವ್ಯ
ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಫೆ.10 ರಂದು ಹನೂರು ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಪಚ್ಚೆ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮೂರನೇಯ ಶಾಲಾ ವಾಸ್ತವ್ಯವನ್ನು ಹೂಡಲಿದ್ದಾರೆ.
Published: 09th February 2020 09:23 AM | Last Updated: 09th February 2020 09:23 AM | A+A A-

ಸಚಿವ ಸುರೇಶ್ ಕುಮಾರ್ (ಚಿತ್ರಕೃಪೆ: ಸುರೇಶ್ ಕುಮಾರ್ ಫೇಸ್ ಬುಕ್ ಖಾತೆ))
ಚಾಮರಾಜನಗರ: ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಫೆ.10 ರಂದು ಹನೂರು ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಪಚ್ಚೆ ದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ತಮ್ಮ ಮೂರನೇಯ ಶಾಲಾ ವಾಸ್ತವ್ಯವನ್ನು ಹೂಡಲಿದ್ದಾರೆ.
ಪಚ್ಚೆದೊಡ್ಡಿ ಗ್ರಾಮವು ಹನೂರು ಪಟ್ಟಣದಿಂದ ಸುಮಾರು 15 ಕಿ.ಮೀ ದೂರದಲ್ಲಿದ್ದು ಕಚ್ಚಾ ರಸ್ತೆಯ ಮೂಲಕ ಮಾತ್ರ ತಲುಪಬಹುದಾಗಿದೆ. ಇದು ಕಾಡಂಚಿನ ಗ್ರಾಮವಾಗಿದ್ದು, ಸುಮಾರು 60 ಮನೆಗಳಿಂದ 200 ರಷ್ಟು ಜನಸಂಖ್ಯೆ ಹೊಂದಿದೆ. ಫೆ.10 ರಂದು ಸಂಜೆ 6.30ಕ್ಕೆ ಪಚ್ಚೆದೊಡ್ಡಿ ಗ್ರಾಮಕ್ಕೆ ಭೇಟಿ ನೀಡುವ ಸಚಿವರು ಪಚ್ಚೆದೊಡ್ಡಿ, ಕಾಂಚಳ್ಳಿ, ಅಜ್ಜಿಪುರ ಹಾಗೂ ಇತರ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರೊಂದಿಗೆ ಆ ಭಾಗದ ಶೈಕ್ಷಣಿಕ ಹಾಗೂ ಇತರ ಸಮಸ್ಯೆಗಳ ಕುರಿತು ಸಂವಾದ ನಡೆಸಲಿದ್ದಾರೆ.
ಬಳಿಕ ಪಚ್ಚೆದೊಡ್ಡಿ ಗ್ರಾಮದ ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ತುಮಕೂರು ಜಿಲ್ಲೆಯ ಅಚ್ಚಮ್ಮನಹಳ್ಳಿ, ಚಾಮರಾಜನಗರ ಜಿಲ್ಲೆಯ ಗೋಪೀನಾಥಂನಲ್ಲಿ ಎರಡನೇಯ ಶಾಲಾ ವಾಸ್ತವ್ಯ ನಡೆಸಿದ್ದರು.
ವರದಿ :- ಗುಳಿಪುರ ನಂದೀಶ ಎಂ