ಉಗ್ರರು, ದೇಶವಿರೋಧಿಗಳಂತಹ ರಾಕ್ಷಸರ ಮಟ್ಟಹಾಕಲು ಸಜ್ಜಾಗಿದ್ದೇವೆ: ಎಬಿವಿಪಿ ನಾಯಕ

ಉಗ್ರರು, ದೇಶ ವಿರೋಧಿಗಳು ಹಾಗೂ ನಗರ ನಕ್ಸಲರನ್ನು ಮಟ್ಟಹಾಕಲು ಸಂಪೂರ್ಣ ಸಜ್ಜಾಗಿದ್ದೇವೆಂದು ಎಬಿವಿಪಿ ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮಂಗಳೂರು: ಉಗ್ರರು, ದೇಶ ವಿರೋಧಿಗಳು ಹಾಗೂ ನಗರ ನಕ್ಸಲರನ್ನು ಮಟ್ಟಹಾಕಲು ಸಂಪೂರ್ಣ ಸಜ್ಜಾಗಿದ್ದೇವೆಂದು ಎಬಿವಿಪಿ ಹೇಳಿದೆ. 

ಮಂಗಳೂರಿನಲ್ಲಿ ಆಯೋಜನೆಗಳೊಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿರುವ ಎಬಿಪಿವಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸುನಿಲ್ ಅಂಬೇಕರ್ ಅವರು, ದೇಶವನ್ನು ಇಬ್ಭಾಗ ಮಾಡಲು ನಿಂತಿರುವ ಉಗ್ರರು, ದೇಶ ವಿರೋಧಿಗಳು ಹಾಗೂ ನಗರ ನಕ್ಸಲ ವಿರುದ್ಧ ಹೋರಾಡಲು ನವ ಭಾರತ ಸಜ್ಜಾಗಿದೆ ಎಂದು ಹೇಳಿದ್ದಾರೆ. 

ದೇಶಪ್ರೇಮದ ಪರವಾಗಿ ನಿಂತಿರುವವರು ಯಾರು ಹಾಗೂ ಉಗ್ರರ ಪರವಾಗಿ ಯಾರಿದ್ದಾರೆಂಬುದರ ಬಗ್ಗೆ ಈಗಾಗಲೇ ಎಬಿವಿಬಿ ಚರ್ಚೆ ಆರಂಭಿಸಿದೆ. 2016ರಲ್ಲಿ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಾವು ನಡೆಸಿದ್ದ ಚರ್ಚೆಯನ್ನು ಇಂದಿಗೂ ಇಡೀ ವಿಶ್ವವೇ ನೋಡಬಹುದಾಗಿದೆ. ಜೆಎನ್'ಯುನಲ್ಲಿ ಸಮಾಜ ವಿರೋಧಿ ಚಟುವಟಿಕೆಗಳನ್ನು ನಾವು ಈಗಾಗಲೇ ಬಹಿರಂಗಪಡಿಸಿದ್ದೇವೆಯ ಧರ್ಮದ ಆಧಾರದ ದೇಶವನ್ನು ವಿಭಜಿಸುವ ಪ್ರಯತ್ನಗಳನ್ನು ಎಬಿವಿಪಿ ಬಲವಾಗಿ ವಿರೋಧಿಸಿದೆ ಎಂದು ತಿಳಿಸಿದ್ದಾರೆ. 

ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿರುವುದನ್ನು ಇದೇ ವೇಳೆ ತೀವ್ರವಾಗಿ ಕಿಡಿಕಾರಿರುವ ಅವರು, ದೇಶದಲ್ಲಿ 900ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಆದರೆ, ಕೇವಲ ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಮಾತ್ರ ಇಂತಹ ಘಟನೆಗಳು ನಡೆಯುತ್ತಿವೆ. ಈ ವಿಶ್ವವಿದ್ಯಾಲಯಗಳು ಭಾರತದ ಇಡೀ ವಿದ್ಯಾರ್ಥಿ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ. ಕೇಂದ್ರದಲ್ಲಿ ಎಬಿವಿಬಿಯಲ್ಲಿ ಸಾಕಷ್ಟು ವಿದ್ಯಾರ್ಥಿಗಳಿದ್ದಾರೆ. ದೇಶದಲ್ಲಿರುವ ರಾಷ್ಟ್ರದ್ರೋಹಿಗಳನ್ನು ಮಟ್ಟಹಾಕಲು ನಾವು ಸಜ್ಜಾಗಿದ್ದೇವೆಂದಿದ್ದಾರೆ. 

ಭಾರತೀಯ ಸಂವಿಧಾನದಲ್ಲಿ ಜಾತ್ಯಾತೀತ ಎಂಬ ಪದವನ್ನು ಅಲ್ಪಸಂಖ್ಯಾತರ ಸಮಾಧಾನಕ್ಕಾಗಿ ಈಗ ಬಹಳ ಸಮಯದಿಂದ ಬಳಸಲಾಗುತ್ತಿದೆ ಮತ್ತು ನ್ಯಾಯಾಲಯಗಳಲ್ಲಿಯೂ ಸಹ ತಪ್ಪಾಗಿ ಅರ್ಥೈಸಲಾಗಿದೆ. ಕಳೆದ 70 ವರ್ಷಗಳಿಂದ ದೇಶದಲ್ಲಿ ಕಸವನ್ನು ಹಾಕಲಾಗಿದ್ದು, ಅದನ್ನು ಇದೀಗ ನಾವು ಸ್ವಚ್ಛಗೊಳಿಸಬೇಕಿದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com