ಕೊರೋನಾ ಶಂಕೆ: ಉಡುಪಿಯಲ್ಲಿ ಪರೀಕ್ಷೆಗೊಳಪಟ್ಟ ಮೂವರಲ್ಲೂ ಪತ್ತೆಯಾಗಿಲ್ಲ ವೈರಸ್

ಕೆಲ ದಿನಗಳ ಹಿಂದಷ್ಟೇ ಚೀನಾದಿಂದ ಉಡುಪಿಗೆ ವಾಪಸ್ಸಾಗಿದ್ದ ಮೂವರು ವ್ಯಕ್ತಿಗಳಲ್ಲಿ ಶಂಕಿಸಲಾಗಿದ್ದ ಕೊರೋನಾ ವೈರಸ್, ಪರೀಕ್ಷೆ ಬಳಿಕ ಇದೀಗ ಮೂವಲರಲ್ಲೂ ವೈರಸ್ ಪತ್ತೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಉಡುಪಿ: ಕೆಲ ದಿನಗಳ ಹಿಂದಷ್ಟೇ ಚೀನಾದಿಂದ ಉಡುಪಿಗೆ ವಾಪಸ್ಸಾಗಿದ್ದ ಮೂವರು ವ್ಯಕ್ತಿಗಳಲ್ಲಿ ಶಂಕಿಸಲಾಗಿದ್ದ ಕೊರೋನಾ ವೈರಸ್, ಪರೀಕ್ಷೆ ಬಳಿಕ ಇದೀಗ ಮೂವರಲ್ಲೂ ವೈರಸ್ ಪತ್ತೆಯಾಗಿಲ್ಲ ಎಂದು ವರದಿಗಳು ತಿಳಿಸಿವೆ. 

ಕೊರೋನಾ ವೈರಸ್ ಕತುರಿತು ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಮೂವರನ್ನು ಉಡುಪಿಯ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಮೂವರಲ್ಲೂ ವೈರಸ್ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ. 

ಕೌಪ್ ತಾಲೂಕಿನ 30 ವರ್ಷದ ವ್ಯಕ್ತಿಯೊಬ್ಬರು ವೈಯಕ್ತಿಕ ಕೆಲಸ ನಿಮಿತ್ತ ಚೀನಾಗೆ ತೆರಳಿದ್ದರು. 15 ದಿನಗಳ ಹಿಂದಷ್ಟೇ ಉಡುಪಿಗೆ ವಾಪಸ್ಸಾಗಿದ್ದರು. ಈ ವೇಳೆ ವ್ಯಕ್ತಿಯಲ್ಲಿ ಜ್ವರ, ಗಂಟಲು ನೋವು, ಶೀತವಿರುವುದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗುವಂತೆ ಅಧಿಕಾರಿಗಳು ಸೂಚಿಸಿದ್ದರು. 

ವ್ಯಕ್ತಿಯನ್ನು ವಿಶೇಷ ಕೊಠಡಿಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ವರದಿಗಳು ಬಂದಿದ್ದು, ವ್ಯಕ್ತಿಯಲ್ಲಿ ಕೊರೋನಾ ವೈರಸ್ ಇಲ್ಲ ಎಂದು ತಿಳಿದುಬಂದಿದೆ. 

ಇದರಂದೆ ಮಂಡಾರ್ತಿಯ ನಿವಾಸಿಯಾಗಿದ್ದ ವ್ಯಕ್ತಿ ಹಾಗೂ ಆತನ ಪತ್ನಿ ಚೀನಾದಿಂದ ಉಡುಪಿಗೆ ವಾಪಸ್ಸಾಗಿದ್ದರು. ಇವರನ್ನೂ ಉಡುಪಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. 

ಈ ಬಗ್ಗೆ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಅವರು ಸ್ಪಷ್ಟನೆ ನೀಡಿದ್ದು, ಶಂಕಿತ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ರೋಗಿಗಳ ಕುರಿತು ಅಧಿಕೃತ ವರದಿ ಲಭಿಸಿದ್ದು, ಕೊರೋನಾ ವೈರಸ್ ರೋಗ ಲಕ್ಷಣ ನೆಗೆಟಿವ್ ಎಂದು ಬಂದಿದೆ. ಹೀಗಾಗಿ ಸಾರ್ಜವನಿಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

ರೋಗಿಗಳ ರಕ್ತ ಮತ್ತು ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ರವಾನಿಸಲಾಗಿತ್ತು. ಇದೀಗ ಯಾರೊಬ್ಬರಲ್ಲೂ ರೋಗ ಲಕ್ಷಣಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.    

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com