ಮನೆಯಿಲ್ಲದೆ ಫುಟ್‌ಪಾತ್‌ನಲ್ಲಿ ಮಲಗುವವರಿಗೆ ಕಂಬಳಿ ವಿತರಿಸಿ ಮಾದರಿಯಾದ ಬೆಂಗಳೂರು ಯುವಕರು

ಗರದಲ್ಲಿ ನಿರ್ಗತಿಕರು, ಅನಾಥರು ಫೂಟ್ ಪಾತ್ ಮೇಲೆ ಮಲಗುವುದು ಸಾಮಾನ್ಯ ದೃಶ್ಯ. ಚಳಿಯೇ ಇರಲಿ, ಮಳೆ ಬರಲಿ ಅವರಿಗೆ ಬೇರೆ ವ್ಯವಸ್ಥೆಗಳು ಇಲ್ಲದಿರುವಾಗ ಫುಟ್ ಪಾತೆ ನೆಲವೇ ಗತಿ ಎನ್ನುವುದು ಖಚಿತ. ಇಂತಹಾ ನಿರ್ಗತಿಕರನ್ನು ಕಂಡೂ ಕಾಣದಂತೆ ಓಡಾಡುವ ಸಾವಿರಾರು ಜನರ ನಡುವೆ ಇಂತಹವರಿಗೆ ಸಹಾಯ ಮಾಡಬೇಕೆಂದು ಮುಂದೆ ಬಂದಿರುವ ಹತ್ತು ಮಂದಿಯ ತಂಡದ ಕುರಿತು ಇಲ್ಲಿ ನಾವು ನಿಮಗೆ ಹ
ಮನೆಯಿಲ್ಲದೆ ಫುಟ್‌ಪಾತ್‌ನಲ್ಲಿ ಮಲಗುವವರಿಗ ಕಂಬಳಿ ವಿತರಿಸಿ ಮಾದರಿಯಾದ ಬೆಂಗಳೂರು ಯುವಕರು
ಮನೆಯಿಲ್ಲದೆ ಫುಟ್‌ಪಾತ್‌ನಲ್ಲಿ ಮಲಗುವವರಿಗ ಕಂಬಳಿ ವಿತರಿಸಿ ಮಾದರಿಯಾದ ಬೆಂಗಳೂರು ಯುವಕರು

ಬೆಂಗಳೂರು: ನಗರದಲ್ಲಿ ನಿರ್ಗತಿಕರು, ಅನಾಥರು ಫೂಟ್ ಪಾತ್ ಮೇಲೆ ಮಲಗುವುದು ಸಾಮಾನ್ಯ ದೃಶ್ಯ. ಚಳಿಯೇ ಇರಲಿ, ಮಳೆ ಬರಲಿ ಅವರಿಗೆ ಬೇರೆ ವ್ಯವಸ್ಥೆಗಳು ಇಲ್ಲದಿರುವಾಗ ಫುಟ್ ಪಾತೆ ನೆಲವೇ ಗತಿ ಎನ್ನುವುದು ಖಚಿತ. ಇಂತಹಾ ನಿರ್ಗತಿಕರನ್ನು ಕಂಡೂ ಕಾಣದಂತೆ ಓಡಾಡುವ ಸಾವಿರಾರು ಜನರ ನಡುವೆ ಇಂತಹವರಿಗೆ ಸಹಾಯ ಮಾಡಬೇಕೆಂದು ಮುಂದೆ ಬಂದಿರುವ ಹತ್ತು ಮಂದಿಯ ತಂಡದ ಕುರಿತು ಇಲ್ಲಿ ನಾವು ನಿಮಗೆ ಹೇಳಲಿದ್ದಾರೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿರುವ 10 ಯುವಕರ ಗುಂಪೊಂದು ಇಂತಹಾ ಅನಾಥರಿಗೆ ಕಂಬಳಿ ನೀಡುವ ಯೋಜನೆ "ಕವಚ"ದೊಡನೆ ಆಗಮಿಸಿದೆ.

ವಿಶ್ವಲಾ ಸಿ ಪಟೇಲ್ ಮತ್ತು ವಿಕಾಸ್ ರೆಡ್ಡಿ ನೇತೃತ್ವದ ಈ ತಂಡ ಕಾಲೇಜು ಮುಗಿಸಿ ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ರೆಡ್ಡಿ, ಕೆಲಸಕ್ಕೆ ಹೋಗುವಾಗ ಹಲವಾರು ಜನರು ಕೊರೆಯುವ ಶೀತದ ಚಳಿಯಲ್ಲಿ ಫುಟ್‌ಪಾತ್‌ಗಳ ಮೇಲೆ ಮಲಗುವುದನ್ನು ಕಂಡಿದ್ದಾರೆ. ಮತ್ತು ಈ ಬಗ್ಗೆ ಮರುಕಗೊಂಡ ರೆಡ್ಡಿ ತಮ್ಮ ಸಹ ಉದ್ಯೋಗಿ ವಿಶ್ವಲಾ ಅವರ ಬಳಿ ಇದನ್ನು ಚರ್ಚಿಸಿದ್ದಾರೆ.ಕಡೆಗೆ ತಾವೇನಾದರೂ ಪರಿಹಾರ ಯೋಜಿಸಲು ತೀರ್ಮಾನಿಸಿದ್ದಾರೆ.

"ನಾವು ಇತರ ಎಂಟು ಸಮಾನ ಮನಸ್ಕ ಯುವಕರೊಡನೆ  ಚರ್ಚಿಸಿದ್ದೇವೆ ಮತ್ತು ಅವರು ನಮ್ಮೊಂದಿಗೆ ಸೇರಲು ಒಪ್ಪಿದ್ದಾರೆ.ನಾವು ನಮ್ಮ ಸ್ನೇಹಿತರು, ಸಹೋದ್ಯೋಗಿಗಳು ಮತ್ತು ಸಂಬಂಧಿಕರಿಂದ ಹಣವನ್ನು ಸಂಗ್ರಹಿಸಿ ಕಂಬಳಿ ಖರೀದಿಸಿದ್ದೇವೆ. ಡಿಸೆಂಬರ್ 29 ರ ರಾತ್ರಿ ನಮ್ಮ ತಂಡ ಅವೆನ್ಯೂ ರಸ್ತೆಗೆ ಹೋಗಿ ಫುಟ್‌ಪಾತ್‌ಗಳಲ್ಲಿ ಮಲಗಿದ್ದವರಿಗೆ ಕಂಬಳಿ ವಿತರಿಸಿದೆ ”ಎಂದು ವಿಶ್ವಲಾ ಹೇಳಿದ್ದಾರೆ. 

ವಾರಪೂರ್ತಿ ದುಡಿಯುವ ಈ ಯುವಕರು ವಾರಾಂತ್ಯದ ಮುರು ದಿನ ರಾತ್ರಿಗಳಲ್ಲಿ ಹೊರಟು ನಿರ್ಗತಿಕರಿಗೆ ಕಂಬಳಿ ವಿತರಿಸಿದರು.“ನಮ್ಮ ಮೊದಲ ವಿಹಾರದಲ್ಲಿಯೇ, ಅವೆನ್ಯೂ ರಸ್ತೆಯಲ್ಲಿರುವ ಗಸ್ತು ತಿರುಗುತ್ತಿದ್ದ ಪೊಲೀಸರು ನಮ್ಮನ್ನು ಗಮನಿಸಿ ನಮ್ಮ ಕೆಲಸಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದರು.ಮತ್ತು ನಮ್ಮ ಗುಂಪಲ್ಲಿ ಮಹಿಳಾ ಸದಸ್ಯರೂ ಇದ್ದ ಕಾರಣ ಕೆಲ ಸ್ಥಳಗಳಿಗೆ ಪೋಲೀಸರು ಸಹ ನಮ್ಮೊಡನೆ ಆಗಮಿಸಿದ್ದರು."

ಈ ಗುಂಪು ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್, ಬನಶಂಕರಿ, ಯಶವಂತಪುರ,  ಚಿಕ್ಕಪೇಟೆ, ಅವೆನ್ಯೂ ರಸ್ತೆ, ನಾಯಂಡನಹಳ್ಳಿ,  ಮಲ್ಲೇಶ್ವರಂ, ರಾಜಾಜಿನಗರ, ಕಲಾಸಿಪಾಳ್ಯ, ಕುರುಬರಹಳ್ಳಿ ಮತ್ತು ಲಾಲ್‌ಬಾಗ್ ಪ್ರದೇಶಗಳಲ್ಲಿ ಸುಮಾರು 100 ಜನರಿಗೆ ಕಂಬಳಿ ವಿತರಿಸಿದೆ. ಅಲ್ಲದೆ, ತಂಡವು ಅನಾಥಾಶ್ರಮಗಳಿಗೆ ಭೇಟಿ ನೀಡುವ ಮೂಲಕಮಕ್ಕಳ ಅಧ್ಯಯನ ಮತ್ತು ಇಂಗ್ಲಿಷ್ ಸಂವಹನ ಕೌಶಲ್ಯಗಳಿಗೆ ಸಹಾಯ ಮಾಡುವ ಕೆಲಸದಲ್ಲಿ ತೊಡಗಿದೆ.  ಇನ್ನು ಈಗ ಬೇಸಿಗೆ ಸಮೀಪಿಸುತ್ತಿರುವುದರಿಂದ, ನೀರಿನ ಕೊರತೆಯಿಂದ ಬಳಲುತ್ತಿರುವವರಿಗೆ ಸಹಾಯ ಮಾಡಲು ಗುಂಪು ಯೋಜಿಸಿದೆ."ಬೇಸಿಗೆಯಲ್ಲಿ ನಗರದ ನಾಗರಿಕರು ವ್ರ ನೀರಿನ ಕೊರತೆಯನ್ನು ಎದುರಿಸುತ್ತಿರುವ ಕೆಲವು ಪ್ರದೇಶಗಳಿವೆ. ಆದ್ದರಿಂದ, ಈ ನಿಟ್ಟಿನಲ್ಲಿ ಅವರಿಗೆ ಸಹಾಯ ಮಾಡಲು ನಾವು ಯೋಜಿಸುತ್ತಿದ್ದೇವೆ ”ಎಂದು ವಿಶ್ವಲಾ ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com