ಐಪಿಎಸ್ v/s ಐಪಿಎಸ್: ಬೀದಿಗೆ ಬಂತು ಪೊಲೀಸ್ ಅಧಿಕಾರಿಗಳ ಕೌಟುಂಬಿಕ ಕಲಹ

ಹೆಂಡತಿ ನನ್ನ ಮಕ್ಕಳ ಮುಖ ನೋಡಲು ಬಿಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಮೂಲದ ಐಪಿಎಸ್​ ಅಧಿಕಾರಿ ಅರುಣ್ ರಂಗರಾಜನ್ ಬೆಂಗಳೂರಿನಲ್ಲಿರುವ  ಮಾಜಿ ಪತ್ನಿಯ ಸರ್ಕಾರಿ ನಿವಾಸದ ಮುಂದೆ ಭಾನುವಾರ ಸಂಜೆಯಿಂದ ಧರಣಿ ಕುಳಿತಿದ್ದರು.
ಮಾಜಿ ಪತ್ನಿ ನಿವಾಸದ ಮುಂದೆ ಅಧಿಕಾರಿಯ ಧರಣಿ
ಮಾಜಿ ಪತ್ನಿ ನಿವಾಸದ ಮುಂದೆ ಅಧಿಕಾರಿಯ ಧರಣಿ

ಬೆಂಗಳೂರು: ಹೆಂಡತಿ ನನ್ನ ಮಕ್ಕಳ ಮುಖ ನೋಡಲು ಬಿಡುತ್ತಿಲ್ಲ ಎಂದು ಆರೋಪಿಸಿ ತಮಿಳುನಾಡು ಮೂಲದ ಐಪಿಎಸ್​ ಅಧಿಕಾರಿ ಅರುಣ್ ರಂಗರಾಜನ್ ಬೆಂಗಳೂರಿನಲ್ಲಿರುವ  ಮಾಜಿ ಪತ್ನಿಯ ಸರ್ಕಾರಿ ನಿವಾಸದ ಮುಂದೆ ಭಾನುವಾರ ಸಂಜೆಯಿಂದ ಧರಣಿ ಕುಳಿತಿದ್ದರು.

ತಮಿಳುನಾಡು ಮೂಲದ ಅರುಣ್ ರಂಗರಾಜನ್ ಮತ್ತು ಇಲಕಿಯಾ ಕರುಣಾಕರನ್ ಬೆಂಗಳೂರಿನಲ್ಲಿ ವಿವಿಐಪಿ ಭದ್ರತಾ ಡಿಸಿಪಿ ಅವರನ್ನು ಕೆಲವು ವರ್ಷಗಳ ಹಿಂದೆ ವಾವಹವಾಗಿದ್ದರು.

ಅರುಣ್ ರಂಗರಾಜನ್ ಕಲಬುರ್ಗಿಯ ಐಎಸ್​ಡಿಯಲ್ಲಿ ಎಸ್​ಪಿಯಾಗಿದ್ದಾರೆ. ಪ್ರೀತಿಸಿ ಮದುವೆಯಾಗಿದ್ದ ಇವರಿಗೆ ಮಗುವಾದ ನಂತರ ಭಿನ್ನಾಭಿಪ್ರಾಯಗಳು ಉಂಟಾಗಿತ್ತು. ಇದೇ ಕಾರಣಕ್ಕೆ ವಿಚ್ಛೇದನ ಪಡೆದಿದ್ದ ಅವರು ನಂತರ ಮತ್ತೆ ಒಂದಾಗಿ ಬಾಳಲು ನಿರ್ಧರಿಸಿದ್ದರು. 

ಅದಾದ ನಂತರ ಮತ್ತೊಂದು ಮಗುವಾಗಿತ್ತು. ಆದರೆ,ಕೆಲವು ದಿನಗಳಿಂದ ಹೆಂಡತಿ ತನ್ನ ಮೇಲೆ ದೌರ್ಜನ್ಯ ನಡೆಸುತ್ತಿದ್ದಾಳೆ, ಮಕ್ಕಳ ಮುಖ ನೋಡಲು ಬಿಡುತ್ತಿಲ್ಲ ಎಂದು ಅರುಣ್ ರಂಗರಾಜನ್ ಆರೋಪಿಸಿದ್ದರು.

ನಾನು ಮಕ್ಕಳನ್ನು ನೋಡಲು  ಬಂದೆ, ಆದರೆ ಮಹಿಳಾ ಹೋಮ್ ಗಾರ್ಡ್ಸ್ ಗಳಿಂದ ನನ್ನನ್ನು ಮನೆಯಿಂದ ಹಾಕಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮಕ್ಕಳನ್ನು ನೋಡಲು  ರಜೆ ಹಾಕಿ ಬಂದಿದ್ದೆ, ಆಕೆ ವಸತ್ ನಗರದಲ್ಲಿ ಮಕ್ಕಳ ಜೊತೆ ವಾಸವಿದ್ದಾರೆ,  ನಾನು ನನ್ನ ಮಕ್ಕಳನ್ನು ನೋಡಲು ಬಂದ ವೇಳೆ, ಆಕೆ ಪೊಲೀಸ್ ಕಂಟ್ರೋಲ್ ರೂಂ ಗೆ ಕರೆ ಮಾಡಿ ನನ್ನ ವಿರುದ್ಧ ದೂರು ನೀಡಿದ್ದಾರೆ, ನಾನು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com