ಕಿಡ್ನಿ ಮಾರಾಟದ ಹೆಸರಿನಲ್ಲಿ ಮಹಾ ಮೋಸ: ಬಲೆಗೆ ಬಿದ್ದ ವಿದೇಶಿ ವಂಚಕರು

ಪ್ರತಿಷ್ಠಿತ ಆಸ್ಪತ್ರೆಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ಕಿಡ್ನಿ ವ್ಯಾಪಾರದ ಹೆಸರಿನಲ್ಲಿ ಅಮಾಯಕರಿಗೆ ಮೋಸ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರು ಪೊಲೀಸರು ಕೊನೆಗೂ ಭೇದಿಸಿದ್ದಾರೆ.
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು

ಬೆಂಗಳೂರು: ಪ್ರತಿಷ್ಠಿತ ಆಸ್ಪತ್ರೆಗಳ ಹೆಸರನ್ನು ದುರುಪಯೋಗಪಡಿಸಿಕೊಂಡು ಕಿಡ್ನಿ ವ್ಯಾಪಾರದ ಹೆಸರಿನಲ್ಲಿ ಅಮಾಯಕರಿಗೆ ಮೋಸ ಮಾಡುತ್ತಿದ್ದ ಜಾಲವೊಂದನ್ನು ಬೆಂಗಳೂರು ಪೊಲೀಸರು ಕೊನೆಗೂ ಭೇದಿಸಿದ್ದಾರೆ.

ಮೂವರು ವಿದೇಶಿಗರು ಹಾಗೂ ಮೂವರು ಹೊರರಾಜ್ಯದವರನ್ನು ಒಳಗೊಂಡಿರುವ ಈ ಖದೀಮರ ತಂಡ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಸುಮಾರು 200 ಅಮಾಯಕರಿಗೆ ವಂಚನೆ ಮಾಡಿದೆ.

ವೆಬ್‌ಸೈಟ್‌ ಮೂಲಕ ಕಿಡ್ನಿ ಮಾರಾಟಕ್ಕಿದೆ ಹಾಗೂ ಖರೀದಿಸುತ್ತೇವೆ ಎಂದು ಜಾಹಿರಾತನ್ನು ನೀಡುವ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದರು. ಇವರನ್ನು ನಂಬಿಕೊಂಡು ಅಮಾಯಕರು ಸಂಪರ್ಕಿಸಿ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡಿದ್ದಾರೆ.

ವಂಚನೆಗೊಳಗಾದವರು ಬೆಂಗಳೂರಿನ ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದರು. ಖದೀಮರಿಗೆ ಬಲೆ ಬೀಸಿದ ಪೊಲೀಸರು ತ್ರಿಪುರದ ಮೂವರು ಹಾಗೂ ನೈಜೀರಿಯ ಪ್ರಜೆ ಸೇರಿದಂತೆ ಮೂವರು ವಿದೇಶಿಗರನ್ನು ಬಂಧಿಸಿದ್ದಾರೆ.

ಸುಡಾನ್‌ನ ಮೊಹಮ್ಮದ್ ಅಹ್ಮದ್ ಇಸ್ಮಾಯಿಲ್ (24), ಮಾರ್ವನ್ ಫೈಸಲ್ (27), ನೈಜೀರಿಯಾದ ಈಸೆನೆ ಲವ್ಲಿ (29), ತ್ರಿಪುರಾ ರಾಜ್ಯದ ಹರೇಂದ್ರ (25), ಕಮಿ ರಾಜನ್ (25) ಹಾಗೂ ಜಟಿನ್‌ಕುಮಾರ್ (25) ಬಂಧಿತರು.

ಬಂಧಿತರ ವಿಚಾರಣೆ ನಡೆಯುತ್ತಿದ್ದು ಕರ್ನಾಟಕ ಅಲ್ಲದೆ ಬೇರೆ ರಾಜ್ಯಗಳಲ್ಲಿ ಇವರ ಜಾಲದ ಕಾರ್ಯಾಚರಣೆಯ ಕುರಿತಾಗಿ ಪೊಲೀಸರು ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ. ಬಂಧಿತರಿಂದ ಎಟಿಎಂ ಮತ್ತು ಸಿಮ್ ಕಾರ್ಡ್ ಹಾಗೂ ಮೊಬೈಲ್ ಫೋನ್ ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com