ಸ್ಥಳೀಯ ಸಂಸ್ಥೆ ಚುನಾವಣೆ: ಹೊಸಕೋಟೆಯಲ್ಲಿ ಎಂಟಿಬಿ ಮ್ಯಾಜಿಕ್; ಹುಣಸೂರು, ಸಿಂಧಗಿಯಲ್ಲಿ ಕೈ ಮೇಲುಗೈ!

ರಾಜ್ಯದ ನಾಲ್ಕು ನಗರಸಭೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯಿತಿಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.ಹೊಸಕೋಟೆ ನಗರಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 31 ವಾರ್ಡ್‌ಗಳ ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರವನ್ನು ಪಡೆದಿದೆ.
ಬಿಜೆಪಿ-ಕಾಂಗ್ರೆಸ್ ಲೋಗೋ
ಬಿಜೆಪಿ-ಕಾಂಗ್ರೆಸ್ ಲೋಗೋ

ಬೆಂಗಳೂರು:  ರಾಜ್ಯದ ನಾಲ್ಕು ನಗರಸಭೆ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆ ಹಾಗೂ ಪಂಚಾಯಿತಿಗಳಿಗೆ ನಡೆದಿದ್ದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.

ಹೊಸಕೋಟೆ ನಗರಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. 31 ವಾರ್ಡ್‌ಗಳ ಹೊಸಕೋಟೆ ನಗರಸಭೆ ಚುನಾವಣೆಯಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರವನ್ನು ಪಡೆದಿದೆ.

ಹುಣಸೂರು, ಚಿಕ್ಕಬಳ್ಳಾಪುರ, ಸಿಂಧಗಿ, ಸಿರಗುಪ್ಪದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾದರೂ ಕಾಂಗ್ರೆಸ್ ಮೇಲುಗೈ ಸಾಧಿಸಿದೆ.

ಮೈಸೂರು ಮಹಾನಗರ ಪಾಲಿಕೆಯ 18ನೇ ವಾರ್ಡ್​ನಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯ ರವೀಂದ್ರ ನಾಯಕ್ 103 ಮತಗಳಿಂದ ಗೆಲುವು ಪಡೆದಿದ್ದಾರೆ. 

ಬಳ್ಳಾರಿಯ ಕರೂರು ತಾ.ಪಂ. ಉಪಚುನಾವಣೆಯಲ್ಲೂ ಬಿಜೆಪಿ ಜಯ ಸಾಧಿಸಿದೆ.

ಹುಣಸೂರು ನಗರಸಭೆ ಫಲಿತಾಂಶ ಪ್ರಕಟವಾಗಿದ್ದು, ಒಟ್ಟು  31 ವಾರ್ಡ್ ಗಳಲ್ಲಿ ಕಾಂಗ್ರೆಸ್- 12, ಬಿಜೆಪಿ- 4 ಹಾಗೂ ಜೆಡಿಎಸ್  7 ಸ್ಥಾನ ಪಡೆದಿದೆ.

ಕೋಲಾರದ ಮಾಲೂರು ತಾಲೂಕಿನ ಲಕ್ಕೂರು ತಾ.ಪಂ. ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೋಡಿಹಳ್ಳಿ ಮಂಜುನಾಥ್​ಗೆ ಗೆಲುವು ಪಡೆದಿದ್ದಾರೆ. 

ಹಾವೇರಿಯ ಹಾನಗಲ್ ತಾಲೂಕಿನ ತಿಳವಳ್ಳಿ ತಾ.ಪಂ. ಉಪಚುನಾವಣೆಯಲ್ಲೂ ಕಾಂಗ್ರೆಸ್ ಜಯಭೇರಿ ಭಾರಿಸಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಕಾಂಗ್ರೆಸ್  ಮತ್ತು ಬಿಜೆಪಿ ಮಧ್ಯೆ ತೀವ್ರ ಪೈಪೋಟಿ ನಡೆದಿದೆ. ಸಿರಗುಪ್ಪ ನಗರಸಭೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದರೆ, ತೆಕ್ಕಲಕೋಟೆ ಪಟ್ಟ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಮುಂದಿದೆ.

ವಿಜಯಪುರದ ಸಿಂಧಗಿ ಪುರಸಭೆಯಲ್ಲಿ ಬಿಜೆಪಿ ಹೀನಾಯ ಸೋಲನುಭವಿಸಿದ್ದುಕಾಂಗ್ರೆಸ್ ಅಗ್ರಸ್ಥಾನ ಪಡೆದರೆ, ಜೆಡಿಎಸ್ ಎರಡನೇ ಸ್ಥಾನಕ್ಕೇರಿದೆ.


ಹುಣಸೂರು ನಗರಸಭೆ ಫಲಿತಾಂಶ:

ಒಟ್ಟು ವಾರ್ಡ್ 31
ಕಾಂಗ್ರೆಸ್: 12
ಬಿಜೆಪಿ: 4
ಜೆಡಿಎಸ್: 7
ಎಸ್​ಡಿಪಿಐ: 2
ಪಕ್ಷೇತರ: 2

ಚಿಕ್ಕಬಳ್ಳಾಪುರ ನಗರಸಭೆ:
ಒಟ್ಟು ವಾರ್ಡ್: 31
ಕಾಂಗ್ರೆಸ್: 6
ಬಿಜೆಪಿ: 6
ಜೆಡಿಎಸ್: 3
ಪಕ್ಷೇತರ: 2

ಹೊಸಕೋಟೆ ನಗರಸಭೆ:
ಒಟ್ಟು ವಾರ್ಡ್ 31
ಬಿಜೆಪಿ 22
ಶರತ್ ಬಚ್ಚೇಗೌಡ ಬೆಂಬಲಿತ ಗುಂಪು 7
ಎಸ್​ಡಿಪಿಐ 1
ಪಕ್ಷೇತರ 1
ಕಾಂಗ್ರೆಸ್ 0

ಬಳ್ಳಾರಿಯ ಸಿರಗುಪ್ಪ ನಗರಸಭೆ:
ಒಟ್ಟು ವಾರ್ಡ್ 31
ಕಾಂಗ್ರೆಸ್ 11
ಬಿಜೆಪಿ 8
ಪಕ್ಷೇತರ 1

ವಿಜಯಪುರದ ಸಿಂಧಗಿ ಪುರಸಭೆ:
ಒಟ್ಟು ವಾರ್ಡ್ 23
ಕಾಂಗ್ರೆಸ್ 11
ಜೆಡಿಎಸ್ 6
ಬಿಜೆಪಿ 3
ಪಕ್ಷೇತರರು 3

ಬಳ್ಳಾರಿಯ ತೆಕ್ಕಲಕೋಟೆ ಪ.ಪಂ.:
ಒಟ್ಟು ವಾರ್ಡ್ 20
ಬಿಜೆಪಿ 9
ಕಾಂಗ್ರೆಸ್ 7

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com