ದೆಹಲಿ ಗೆಲುವು ಬಳಿಕ ಬೆಂಗಳೂರಿನಲ್ಲಿ ಚುರುಕುಗೊಳ್ಳುತ್ತಿರುವ ಆಮ್ ಆದ್ಮಿ ಪಕ್ಷ

ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಆಪ್ ಪಕ್ಷದ ಮನೋಸ್ಥೈರ್ಯ ಹೆಚ್ಚಾಗಿದ್ದು, ಐಟಿ ಸಿಟಿ ಬೆಂಗಳೂರಿನಲ್ಲಿಯೂ ತನ್ನ ಕಾರ್ಯವನ್ನು ಚುರುಕುಗೊಳಿಸಲು ಮುಂದಾಗಿದೆ. 

Published: 12th February 2020 08:44 AM  |   Last Updated: 12th February 2020 08:44 AM   |  A+A-


After Delhi poll result, it’s Mission Bengaluru for AAP

ದೆಹಲಿ ಗೆಲುವು ಬಳಿಕ ಬೆಂಗಳೂರಿನಲ್ಲಿ ಚುರುಕುಗೊಳ್ಳುತ್ತಿರುವ ಆಮ್ ಆದ್ಮಿ ಪಕ್ಷ

Posted By : Manjula VN
Source : The New Indian Express

ಬೆಂಗಳೂರು: ರಾಷ್ಟ್ರ ರಾಜಧಾನಿ ದೆಹಲಿಯ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಆಪ್ ಪಕ್ಷದ ಮನೋಸ್ಥೈರ್ಯ ಹೆಚ್ಚಾಗಿದ್ದು, ಐಟಿ ಸಿಟಿ ಬೆಂಗಳೂರಿನಲ್ಲಿಯೂ ತನ್ನ ಕಾರ್ಯವನ್ನು ಚುರುಕುಗೊಳಿಸಲು ಮುಂದಾಗಿದೆ. 

ದೆಹಲಿ ಚುನಾವಣಾ ಫಲಿತಾಂಶ ದೇಶದಾದ್ಯಂತ ಇರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರಿಗೆ ಹೊಸ ಭರವಸೆ, ಆತ್ಮವಿಶ್ವಾಸವನ್ನು ತುಂಬಿದೆ. ಉತ್ತಮ ಕಾರ್ಯಗಳಿಂದ ಚುನಾವಣೆ ಗೆಲ್ಲಬಹುದು ಎಂಬ ಹೊಸ ಸಂದೇಶವನ್ನು ಈ ಚುನಾವಣೆ ರವಾನಿಸಿದೆ. ಇದೀಗ ನಮ್ಮ ಚಿತ್ತ ಈ ವರ್ಷದ ಬಿಬಿಎಂಪಿ ಚುನಾವಣೆಯತ್ತ ಹೊರಳಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಹ ಸಂಚಾಲಕಿ ಹಾಗೂ ಬಿಬಿಎಂಪಿ ಚುನಾವಣಾ ಉಸ್ತುವಾರಿಯಾಗಿರುವ ಶಾಂತಲಾ ದಾಮ್ಲೆಯವರು ಹೇಳಿದ್ದಾರೆ. 

ದೆಹಲಿ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ರಾಜ್ಯದಲ್ಲಿರುವ ಆಪ್ ಕಾರ್ಯಕರ್ತರು ಬೆಂಗಳೂರಿನಲ್ಲಿ ಭರ್ಜರಿ ಸಂಭ್ರಮವನ್ನಾಚರಿಸಿದರು. ಬೀದಿಗಿಳಿದ ಕಾರ್ಯಕರ್ತರು ಜನರಿಗೆ ಸಿಹಿ ಹಂಚಿ ಸಂಭ್ರಮ ಆಚರಿಸಿದರು. 

ದೆಹಲಿಯಲ್ಲಿ ಗೆಲವು ದಾಖಲಿಸಿದ ಬಳಿಕ ಆ್ ಪಕ್ಷ 2014ರ ಲೋಕಸಭಾ ಚುನಾವಣೆಗೂ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿತು. ಆದರೆ, ರಾಜ್ಯದಲ್ಲಿ ಯಾವೊಬ್ಬ ಅಭ್ಯರ್ಥಿಯೂ ಗೆಲುವು ಸಾಧಿಸಲಿಲ್ಲ. ಇದರ ಪರಿಣಾಮ ಪಕ್ಷ ಸಂಘಟನೆ ಬಲಗೊಳ್ಳುವುದು ಕಷ್ಟಕರಗೊಂಡಿತು. ಇದೀಗ ಪಕ್ಷದ ಕಾರ್ಯಕರ್ತರು ಬಿಬಿಎಂಪಿ ಚುನಾವಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ವಾರ್ಡ್ ಗಳಲ್ಲಿ ಕಚೇರಿಗಳನ್ನು ತೆರಿದ್ದು, ವಾರ್ಡ್ ಗಳಿಗೆ ಅಧ್ಯಕ್ಷರನ್ನು ನೇಮಕ ಮಾಡಲು ಸಿದ್ಧತೆ ನಡೆಸಿದ್ದಾರೆ. ಅಲ್ಲದೆ, ಪಾದಯಾತ್ರೆ ನಡೆಸಲು ಮುಂದಾಗಿದ್ದು, ನಗರಾಭಿವೃದ್ಧಿಗೆ ಅಭ್ಯರ್ಥಿಗಳ ಶಿಫಾರಸು ಹಾಗೂ ಸಲಹೆಗಳನ್ನು ನೀಡುವಂತೆ ಜನರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ. 

ದೆಹಲಿಯಲ್ಲಿ ಗೆಲುವು ಸಾಧಿಸಿದ್ದೇವೆ. ಪಂಜಾಬ್ ನಲ್ಲು ಉತ್ತಮವಾಗಿ ಪ್ರಗತಿ ಸಾಧಿಸಿದ್ದೇವೆ. ಇದೀಗ ನಾವು ಕರ್ನಾಟಕ ರಾಜ್ಯದ ಮೇಲೂ ಗಮನ ಹರಿಸಿದ್ದೇವೆ. ಇದರಂತೆ ಬಿಬಿಎಂಪಿ ಚುನಾವಣೆ ಹತ್ತಿರಬರುತ್ತಿದ್ದು, ಚುರುಕಾಗಿ ಕಾರ್ಯನಿರ್ವಹಿಸುತ್ತಿದ್ದೇವೆ. ಮುಂದಿನ 6 ತಿಂಗಳುಗಳಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿರುವ ನಮ್ಮ ಕಾರ್ಯಕರ್ತರು ಬೆಂಗಳೂರುವ ನಗರದ ಮೇಲೆ ಗಮನ ಹರಿಸಲಿದ್ದಾರೆ. ದೆಹಲಿ ಚುನಾವಣಾ ತಂತ್ರ ನಮಗೆ ಸಹಾಯ ಮಾಡಲಿದೆ. ರಾಜಕೀಯಕ್ಕೆ ಬರಲು ಇಚ್ಛಿಸುವ ಜನರನ್ನು ನಾವು ಪ್ರೋತ್ಸಾಹಿಸುತ್ತಿದ್ದೇವೆ. ಹೀಗಾಗಿಯೇ ನಾವು ಅಭ್ಯರ್ಥಿಗಳ ಆಯ್ಕೆಗೆ ಜನರ ಅಭಿಪ್ರಾಯ ಕೇಳುತ್ತಿದ್ದೇವೆ. ಈ ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಶಾಂತಲಾ ಅವರು ಹೇಳಿದ್ದಾರೆ. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp