ಡಿಕೆ ಶಿವಕುಮಾರ್ ತಾಯಿ ಗೌರಮ್ಮನ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು!

ಇಡಿ ಅಧಿಕಾರಿಗಳು ಸುಮಾರು 8 ಗಂಟೆಗಳ ಕಾಲ ಡಿಕೆ ಶಿವಕುಮಾರ್ ತಾಯಿ ಗೌರಮ್ಮರ ವಿಚಾರಣೆಯನ್ನು ನಡೆಸಿದ್ದು ಸದ್ಯ ವಿಚಾರಣೆ ಅಂತ್ಯವಾಗಿದೆ. ಇನ್ನೂ ವಿಚಾರಣೆಗೆ ಬೇಕಾದರೆ ಸಹಕರಿಸುತ್ತೇವೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಡಿಕೆ ಸುರೇಶ್
ಡಿಕೆ ಸುರೇಶ್

ರಾಮನಗರ: ಇಡಿ ಅಧಿಕಾರಿಗಳು ಸುಮಾರು 8 ಗಂಟೆಗಳ ಕಾಲ ಡಿಕೆ ಶಿವಕುಮಾರ್ ತಾಯಿ ಗೌರಮ್ಮರ ವಿಚಾರಣೆಯನ್ನು ನಡೆಸಿದ್ದು ಸದ್ಯ ವಿಚಾರಣೆ ಅಂತ್ಯವಾಗಿದೆ. ಇನ್ನೂ ವಿಚಾರಣೆಗೆ ಬೇಕಾದರೆ ಸಹಕರಿಸುತ್ತೇವೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.

ಕನಕಪುರ ತಾಲೂಕಿನ ಕೋಡಿಹಳ್ಳಿಯ ನಿವಾಸದಲ್ಲಿ ಗೌರಮ್ಮರ ವಿಚಾರಣೆ ನಡೆಸಲಾಯಿತು. ವಿಚಾರಣೆ ಬಳಿಕ ಮಾತನಾಡಿದ ಡಿಕೆ ಸುರೇಶ್ ಮುಂದೆ ವಿಚಾರಣೆ ಅವಶ್ಯವಿದ್ದರೆ 85 ವರ್ಷವಾದರೂ ನಮ್ಮ ತಾಯಿ ಕೂಡ ಸ್ಪಂದಿಸುವುದಾಗಿ ಹೇಳಿದ್ದಾರೆ. ನಮ್ಮ ತಾಯಿಗೆ ಜ್ವರ ಇತ್ತು. ಆದರೂ ತನಿಖೆಗೆ ಸಹಕರಿಸಿದ್ದಾರೆ ಎಂದರು. 

ಇಡಿ ವಿಚಾರಣೆ ವೇಳೆ ಗಲಾಟೆ ನಡೆಯಬಹುದು ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಬಂದೋಬಸ್ತ್ ನೀಡಲಾಗಿತ್ತು. ಸದ್ಯ ಕೂಲಂಕುಷವಾಗಿ ವಿಚಾರಣೆ ನಡೆಸಿ ಹೋಗಿದ್ದಾರೆ. ಮತ್ತೆ ವಿಚಾರಣೆ ಬೇಕಾದರೆ ಎದುರಿಸಲು ಸಿದ್ಧರಿದ್ದು ಅಧಿಕಾರಿಗಳು ಬರುವುದಾದರೆ ನಾವು ಸ್ವಾಗತಿಸುತ್ತೇವೆ. ಕಾನೂನಿನ ಮುಂದೆ ಎಲ್ಲರೂ ಕೂಡಾ ತಲೆಬಾಗಲೇಬೇಕು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com