ಮಹದಾಯಿ ವಿವಾದ: ಕರ್ನಾಟಕ್ಕೆ ಕೈಕೊಟ್ಟ ಕೇಂದ್ರ, ಗೆಜೆಟ್ ಅಧಿಸೂಚನೆ ಪ್ರಕಟಿಸಲ್ಲ ಎಂದ ಮೋದಿ ಸರ್ಕಾರ

ಮಹಾದಾಯಿ ಜಲಯಮಂಡಳಿ (ಎಂಡಬ್ಲ್ಯುಡಿಟಿ) ಆದೇಶದ ಗೆಜೆಟ್ ಅಧಿಸೂಚನೆಯ ನಂತರ, ಕಳಸಾ ಬಂಡೂರಿ ಯೋಜನೆಯ (ಮಹದಾಯಿ  ಯೋಜನೆಯ ಭಾಗ) ಕೆಲಸಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದ ಎರಡು ತಿಂಗಳೊಳಗೆ, ಕೇಂದ್ರ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದಿದೆ ನ್ಯಾಯಮಂಡಳಿಗೆ ಮಹದಾಯಿಯ ಮೂವರು ಪಾಲುದಾರರು ರು ಸಲ್ಲಿಸಿದ ಪರಿಶೀಲನಾ ಅರ್ಜಿಗಳನ್ನು ತೆರವುಗೊಳಿಸುವವರೆಗ
ಮಹದಾಯಿ
ಮಹದಾಯಿ

ಬೆಳಗಾವಿ: ಮಹಾದಾಯಿ ಜಲಯಮಂಡಳಿ (ಎಂಡಬ್ಲ್ಯುಡಿಟಿ) ಆದೇಶದ ಗೆಜೆಟ್ ಅಧಿಸೂಚನೆಯ ನಂತರ, ಕಳಸಾ ಬಂಡೂರಿ ಯೋಜನೆಯ (ಮಹದಾಯಿ  ಯೋಜನೆಯ ಭಾಗ) ಕೆಲಸಗಳನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರಕ್ಕೆ ಪತ್ರ ಬರೆದ ಎರಡು ತಿಂಗಳೊಳಗೆ, ಕೇಂದ್ರ ಸರ್ಕಾರ ತನ್ನ ನಿಲುವಿನಿಂದ ಹಿಂದೆ ಸರಿದಿದೆ ನ್ಯಾಯಮಂಡಳಿಗೆ ಮಹದಾಯಿಯ ಮೂವರು ಪಾಲುದಾರರು ರು ಸಲ್ಲಿಸಿದ ಪರಿಶೀಲನಾ ಅರ್ಜಿಗಳನ್ನು ತೆರವುಗೊಳಿಸುವವರೆಗೆ ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸದಿರಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ.

ಸೋಮವಾರ ರಾಜ್ಯಸಭೆಯಲ್ಲಿ ಬಿ ಕೆ ಹರಿಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸರ್ಕಾರ ನ್ಯಾಯಮಂಡಳಿಯ ಮುಂದೆ ಬಾಕಿ ಇರುವ ಅರ್ಜಿಗಳನ್ನು ತೆರವುಗೊಳಿಸುವವರೆಗೆ, ನ್ಯಾಯಮಂಡಳಿಯ ಆದೇಶದ ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸ್ಪಷ್ಟಪಡಿಸಿದೆ

ಕೇಂದ್ರದ ನಿಲುವಿನಲ್ಲಿನ ಹಠಾತ್ ಬದಲಾವಣೆಯು ರಾಜ್ಯದ ಅನೇಕ ಕಾನೂನು ತಜ್ಞರು ಮತ್ತು ನಾಯಕರನ್ನು ಬೆಚ್ಚಿಬೀಳಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿ ಮಹದಾಯಿ ಪ್ರಕರಣದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಖ್ಯಾತ ಕಾನೂನು ತಜ್ಞ ಮತ್ತು ವಕೀಲರ ತಂಡದ ಮಾಜಿ ಸದಸ್ಯ ಎಂ.ಬಿ. ಜಿರ್ಲಿ, “ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕ (ಮೂರು ಪಾಲುದಾರರು) ನ್ಯಾಯಮಂಡಳಿಗೆ ಸ್ಪಷ್ಟೀಕರಣ ಅರ್ಜಿಗಳನ್ನು ಸಲ್ಲಿಸಿದ್ದಾರೆ.ನ್ಯಾಯಮಂಡಳಿ ಅಂತಿಮ ತೀರ್ಪಿನಲ್ಲಿ ಕೆಲವು ಪ್ಯಾರಾಗಳ ಸ್ಪಷ್ಟೀಕರಣ ಸ್ಪಷ್ಟವಾಗಿಲ್ಲದಿರಬಹುದು. ಆದರೆ, ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸಲು ಕೇಂದ್ರಕ್ಕೆ ಯಾವುದೇ ಕಾನೂನು ನಿರ್ಬಂಧವಿಲ್ಲ. ಆದರೆ ಕೆಲವು ತಾಂತ್ರಿಕ ಸಮಸ್ಯೆಗಳಿಂದಾಗಿ ಅಧಿಸೂಚನೆಯನ್ನು ಪ್ರಕಟಿಸುವುದರಿಂದ ಕೇಂದ್ರ ಹಿಂದೆ ಸರಿದಿರಬಹುದು"

ಇದಕ್ಕೆ ಮುನ್ನ ಮಹಾದಾಯಿ ಜಲ ವಿವಾದದ ಗೆಜೆಟ್ ಅಧಿಸೂಚನೆಯ ನಂತರ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಡಿಸೆಂಬರ್ 24, 2019 ರಂದು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಪ್ರಕಾಶ್ ಜಾವಡೇಕರ್ ಅವರು ಕಳಸಾ ಬಂಡೂರಿ ನಲಾ ಯೋಜನೆಯೊಂದಿಗೆ ಮುಂದುವರಿಯಲು ರಾಜ್ಯಕ್ಕೆ ಅನುಮತಿ ನೀಡಿದ್ದರು.ಕರ್ನಾಟಕಕ್ಕೆ ಜಾವಡೇಕರ್ ಬರೆದ ಪತ್ರದ ನಂತರ, ಗೋವಾ ಸಿಎಂ ಪ್ರಮೋದ್ ಸಾವಂತ್ ಅವರು ಕರ್ನಾಟಕವನ್ನು ಯೋಜನೆ ಜಾರಿಗೊಳಿಸದಂತೆ ತಡೆಯಲು ಕೇಂದ್ರಕ್ಕೆ ನಿಯೋಗವನ್ನು ಕರೆದೊಯ್ದರು. ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ತಮ್ಮ ರಾಜ್ಯದ ಹಿತಾಸಕ್ತಿಗಳನ್ನು ಕಾಪಾಡುವಂತೆ ಜಾವಡೇಕರ್ ಅವರ ಮೇಲೆ ಒತ್ತಡ ಹೇರಿದರು ಮತ್ತು ಸ್ಥಳೀಯ ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದ್ದು, ಗೋವಾಗೆ ಮೋಸವಾಗಿದೆ ಮತ್ತು ಮಹದಾಯಿ ವಿಷಯದಲ್ಲಿ ಅನ್ಯಾಯವಾಗಿದೆ. ಮಹದಾಯಿ ಯೋಜನೆಯಡಿ ನೀರಾವರಿ ಉದ್ದೇಶಗಳಿಗಾಗಿ ಮಾಂಡೋವಿ ನದಿಯಿಂದ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಅವರು ಆಕ್ಷೇಪವೆತ್ತಿದ್ದರು.

ಗೋವಾದ ಒತ್ತಡಕ್ಕೆ ಮಣಿದು ಕೇಂದ್ರವು ತನ್ನ ನಿಲುವನ್ನು ಬದಲಾಯಿಸಲು ತೀರ್ಮಾನಿಸಿದೆ. ಅಂತಿಮವಾಗಿ ಸೋಮವಾರ ರಾಜ್ಯಸಭೆಯಲ್ಲಿ ಗೆಜೆಟ್ ಅಧಿಸೂಚನೆಯನ್ನು ಪ್ರಕಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿತು.ನ್ಯಾಯಮಂಡಳಿತನ್ನ ಅಂತಿಮ ಆದೇಶದಲ್ಲಿ 2018 ರ ಆಗಸ್ಟ್ 14 ರಂದು ಮಹದಾಯಿ ಯೋಜನೆಯಡಿ 13.42 ಟಿಎಂಸಿಎಫ್ ನೀರನ್ನು ಕರ್ನಾಟಕಕ್ಕೆ ನೀಡಿತು. ನ್ಯಾಯಮಂಡಳಿ ಕರ್ನಾಟಕಕ್ಕೆ ಮಹದಾಯಿ ದಿಯಿಂದ 5.5 ಟಿಎಂಸಿ ಅಡಿ ನೀರನ್ನು ಕುಡಿಯಲು ಮತ್ತು ಇನ್ನೂ 8.02 ರಷ್ಟು ನೀರನ್ನು ಜಲ ವಿದ್ಯುತ್ಗಾಗಿ ಹಂಚಿಕೊಳ್ಳಲು ಅನುಮತಿ ನೀಡಿತು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com