ಸಿಎಂ ಯಡಿಯೂರಪ್ಪ ಸಾಮಾನ್ಯ ತಿಳುವಳಿಕೆ ಕಳೆದುಕೊಂಡಿದ್ದಾರೆ: ಸಿದ್ದರಾಮಯ್ಯ

ಬೀದರ್ ನ ಶಾಹೀನ್ ಶಾಲೆಯ ಮಕ್ಕಳು ಆಡಿದ ನಾಟಕ ದೇಶದ್ರೋಹ ಎಂದು ಕೇಸು ದಾಖಲಿಸಿರುವುದು ಅಸಂವಿಧಾನಿಕ ಕ್ರಮ, ಇದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಬೀದರ್ ನ ಶಾಹೀನ್ ಶಾಲೆಯ ಮಕ್ಕಳು ಆಡಿದ ನಾಟಕ ದೇಶದ್ರೋಹ ಎಂದು ಕೇಸು ದಾಖಲಿಸಿರುವುದು ಅಸಂವಿಧಾನಿಕ ಕ್ರಮ, ಇದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.


ಮಕ್ಕಳು ಆಡಿದ ನಾಟಕದ ವಿಷಯ ಕೇಂದ್ರದ ನರೇಂದ್ರ ಮೋದಿಯವರಿಗೆ ಮತ್ತು ಅವರ ಯೋಜನೆಗಳಿಗೆ ವಿರುದ್ಧವಾಗಿರುವುದರಿಂದ ದೇಶದ್ರೋಹದ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಬೀದರ್ ಶಾಲೆಯ ಮಕ್ಕಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಆಡಿರುವ ನಾಟಕ ದೇಶದ್ರೋಹವಾದರೆ ಕಲ್ಲಡ್ಕ ಪ್ರಭಾಕರ ಭಟ್ ರ ಶಾಲೆಯಲ್ಲಿ ಮಕ್ಕಳು ಅಂದು ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತು ಮಾಡಿದ ನಾಟಕ ದೇಶದ್ರೋಹವಲ್ಲವೇ ಎಂದು ಸಿದ್ದರಾಮಯ್ಯ ಕೇಳಿದ್ದಾರೆ. 


ಈ ಕೇಸಿನಲ್ಲಿ ಮಗುವಿನ ತಾಯಿಯನ್ನು ಬಂಧಿಸುವ ಮೂಲಕ ತಾಯಿ-ಮಗಳನ್ನು ಬೇರೆ ಮಾಡಲಾಗಿದೆ. ಇಂತಹ ಅಮಾನವೀಯ ಕೃತ್ಯವನ್ನು ಎಸಗಿದವರನ್ನು ಈ ತಾಯ್ನಾಡು ಮನ್ನಿಸುವುದಿಲ್ಲ. ಪೊಲೀಸರು ಸಿಎಂ ಯಡಿಯೂರಪ್ಪ ಅವರ ಆದೇಶದ ಪ್ರಕಾರ ನಡೆದುಕೊಂಡಿದ್ದಾರೆ. ಯಡಿಯೂರಪ್ಪನವರು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಬಲೆಗೆ ಬಿದ್ದು ತಮ್ಮ ಸಾಮಾನ್ಯ ತಿಳುವಳಿಕೆ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದರು.


ಹಳೆಯ ಭಾರತೀಯ ದಂಡ ಸಂಹಿತೆ ಮತ್ತು ಪುರಾತನ ಕಾನೂನುಗಳನ್ನು ಪರಿಶೀಲಿಸಬೇಕಾದ ಅಗತ್ಯವಿದೆ ಎಂದು ಸಹ ಸಿದ್ದರಾಮಯ್ಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com