ರಾಜ್ಯದ ಈ ಯುವಕನ ಪಾಲಿಗೆ ದೇವತಾ ಮನುಷ್ಯನಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದ ನಗರದ ಈ ಕೊಳಗೇರಿ ನಿವಾಸಿಯೊಬ್ಬರ ಪಾಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇವತಾ ಮನುಷ್ಯರಾಗಿದ್ದಾರೆ. 
ರಾಜ್ಯದ ಈ ಯುವಕನ ಪಾಲಿಗೆ ದೇವತಾ ಮನುಷ್ಯನಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ರಾಜ್ಯದ ಈ ಯುವಕನ ಪಾಲಿಗೆ ದೇವತಾ ಮನುಷ್ಯನಾದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿಯಲ್ಲಿದ್ದ ನಗರದ ಈ ಕೊಳಗೇರಿ ನಿವಾಸಿಯೊಬ್ಬರ ಪಾಲಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ದೇವತಾ ಮನುಷ್ಯರಾಗಿದ್ದಾರೆ. 

ವಿಶ್ವನಾಥ್ ಅವರು 2010ರಲ್ಲಿ ನಗರದಲ್ಲಿರುವ ಸ್ಲಂನಲ್ಲಿ ಜೀವಿನ ನಡೆಸುತ್ತಿದ್ದರು. ಒಮ್ಮೆ ವಿಶ್ವನಾಥ್ ಅವರನ್ನು ನೋಡಿದ ಯಡಿಯೂರಪ್ಪ ಅವರು, ಅವರ ಕಷ್ಟಕ್ಕೆ ಸ್ಪಂದನೆ ನೀಡಿ ವಿದ್ಯಾಭ್ಯಾಸದ ಸಂಪೂರ್ಣ ವೆಚ್ಚವನ್ನು ಭರಿಸಿದ್ದರು. ಇದಾದ 10 ವರ್ಷಗಳ ಬಳಿಕ ಮತ್ತೆ ವಿಶ್ವನಾಥ್ ಅವರ ಕಷ್ಟಕ್ಕೆ ನೆರವಾಗಿ, ವಿಶ್ವನಾಥ್ ಅವರ ಪಾಲಿಗೆ ದೇವತಾ ಮನುಷ್ಯರಾಗಿದ್ದಾರೆ. 

ನಿರುದ್ಯೋಗದಿಂದ ಬಳಲುತ್ತಿದ್ದ ವಿಶ್ವನಾಥ್ ಅವರು, ಉದ್ಯೋಗ ಅರಿಸಿ ಯಡಿಯೂರಪ್ಪ ಅವರ ಬಳಿ ಹೋಗಿದ್ದು, ಇದೀಗ ವಿಶ್ವನಾಥ್ ಅವರಿಗೆ ಸರ್ಕಾರಿ ಉದ್ಯೋಗವನ್ನೂ ಒದಗಿಸಿದ್ದಾರೆ. 

ಕಚೇರಿ ಬಳಿ ತೆರಳಿದಾಗ ಮುಖ್ಯಮಂತ್ರಿಗಳು ಅಲ್ಲಿರಲಿಲ್ಲ. ಬಳಿಕ ಸಿಬ್ಬಂದಿಗಳು ಕಾಯುವಂತೆ ತಿಳಿಸಿದ್ದರು. ಕಾ.ಪು.ಸಿದ್ದಲಿಂಗಾ ಸ್ವಾಮಿಯವರು ಸದಾಕಾಲ ಯಡಿಯೂರಪ್ಪ ಅವರೊಂದಿಗಿರುತ್ತಿದ್ದರು. ಕಚೇರಿ ಬಳಿಯಿದ್ದ ಅವರು ನನ್ನನ್ನು ಗುರ್ತಿಸಿದ್ದರು. ಮುಖ್ಯಮಂತ್ರಿಗಳ ಹಿಂದೆ ನೀಡಿದ್ದ ಆದೇಶದ ಮೇರೆಗೆ ನನ್ನನ್ನು ಪಾಲನೆ ಮಾಡಿದ್ದರು. ಸ್ವಾಮಿಯವರನ್ನು ಭೇಟಿಯಾದ ವೇಳೆ ನಿರುದ್ಯೋಗದಿಂದ ನಾನು ಅನುಭವಿಸುತ್ತಿದ್ದ ಸಂಕಷ್ಟವನ್ನು ಹೇಳಿಕೊಂಡಿದ್ದೆ. ಇದೀಗ ನನಗೆ ಮುಖ್ಯಮಂತ್ರಿಗಳು ಸರ್ಕಾರಿ ಉದ್ಯೋಗವನ್ನು ನೀಡಿದ್ದಾರೆ. ಇದಕ್ಕೆ ಮುಖ್ಯಮಂತ್ರಿಗಳಿಗೆ ನಾನು ಆಭಾರಿಯಾಗಿದ್ದೇನೆಂದು ವಿಶ್ವನಾಥ್ ಅವರು ಹೇಳಿದ್ದಾರೆ. 

ಮುಖ್ಯಮಂತ್ರಿಗಳ ಸೂಚನೆಯಂತೆ ನಾನು ಶಿಫಾರಸು ಪತ್ರವನ್ನು ನೀಡಿದ್ದೆ. ಕೆಆರ್'ಇಡಿಎಲ್ ನಲ್ಲಿ ಗುತ್ತಿಗೆ ಆಧಾರದ ಮೇಲೆ ವಿಶ್ವನಾಥ್'ಗೆ ಉದ್ಯೋಗ ದೊರಕಿದೆ. ವಿಶ್ವನಾಥ್ ಮತ್ತೆ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ಇಚ್ಛಿಸಿದ್ದೇ ಆದಲ್ಲಿ, ಅದರ ಅದನ್ನೂ ನಾವು ನೋಡಿಕೊಳ್ಳುತ್ತೇವೆ. ವಿಶ್ವನಾಥ್ ಇದೀಗ ಎಸ್ಎಸ್ಎಲ್'ಸಿ ತೇರ್ಗಡೆಗೊಂಡಿದ್ದು, ಪದವಿ ಪೂರ್ಣಗೊಳಿಸಿದ್ದೇ ಆಗಿದ್ದರೆ, ಉತ್ತಮ ಉದ್ಯೋಗ ದೊರಕುತ್ತಿತ್ತು ಎಂದು ಸಿದ್ದಲಿಂಗ ಸ್ವಾಮಿ ಹೇಳಿದ್ದಾರೆ. 

ಕೆಆರ್'ಇಡಿಎಲ್ ಯಲ್ಲಿ ವಿಶ್ವನಾಥ್ ಆಫೀಸ್ ಅಟೆಂಡರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ವಿದ್ಯಾರ್ಹತೆಗೆ ಅನುಗುಣವಾಗಿ ವಿಶ್ವನಾಥ್ ಅವರಿಗೆ ಇಎಸ್ಐ, ಪಿಎಫ್ ಸೇರಿ ತಿಂಗಳಿಗೆ ರೂ.14,800 ನೀಡುತ್ತಿದ್ದೇವೆಂದು ಅಧಿಕಾರಿಘಳು ಮಾಹಿತಿ ನೀಡಿದ್ದಾರೆ. 

2019ರ ಜುಲೈ ತಿಂಗಳಿನಲ್ಲಿ ವಿಶ್ವನಾಥ್ ಅವರ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಲೇಖನವೊಂದು ಪ್ರಕರಣಗೊಂಡಿತ್ತು. ಇದನ್ನು ಓದಿದ್ದ ಯಡಿಯೂರಪ್ಪ ಅವರು ಸ್ಲಂ ಗಳಿಗೆ ತೆರಳಿ 180 ಕುಟುಂಬಗಳ ಜೀವನವನ್ನೇ ಬದಲಾಯಿಸಿದ್ದರು. 

2010ರಲ್ಲಿ 10 ವರ್ಷದ ಬಾಲಕರಾಗಿದ್ದ ವಿಶ್ವನಾಥ್ ಅವರು ಮೈಸೂರು ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದ ಬಳಿ ಹೂವಿನ ಮಾರಾಟ ಮಡುತ್ತಿದ್ದರು. ಮುಖ್ಯಮಂತ್ರಿಗಳು ದೇಗುಲದ ಬಳಿ ಬಂದಾಗ ಸಿಎಂರನ್ನು ಕಾತುರದಿಂದ ನೋಡುತ್ತಿದ್ದರು. ಈ ವೇಳೆ ಪೊಲೀಸರು ಬಾಲಕನಿಗೆ ಅವಕಾಶ ನೀಡಿಲ್ಲ. ಮುಖ್ಯಮಂತ್ರಿಗಳನ್ನ ನೋಡಲು ಸಾಕಷ್ಟು ಸಂಕಷ್ಟ ಪಡುತ್ತಿದ್ದ ಬಾಲಕನನ್ನು ಯಡಿಯೂರಪ್ಪ ಅವರು ಗಮನಿಸಿದ್ದರು. ಬಳಿಕ ಯಡಿಯೂರಪ್ಪ ಅವರೊಂದಿಗೆ ಮಾತನಾಡಿರುವ ಅವಕಾಶ ನನಗೆ ಸಿಕ್ಕಿತ್ತು. ಈ ವೇಳೆ ನಾವು ನೆಲೆಯೂರಿರುವ ಕೊಳಗೇರಿ ಪ್ರದೇಶಕ್ಕೆ ಬಂದು ನಮ್ಮ ಸಂಕಷ್ಟವನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡಿದ್ದೆ. ಈ ವೇಳೆ ಶೀಘ್ರದಲ್ಲಿಯೇ ಭೇಟಿ ನೀಡುವ ಭರವಸೆಯನ್ನು ನೀಡಿದ್ದರು. ಬಳಿಕ ನನ್ನ ವಿದ್ಯಾಭ್ಯಾಸದ ಖರ್ಚುವೆಚ್ಚಗಳನ್ನು ನೋಡಿಕೊಂಡಿದ್ದರು. ನೀಡಿದ್ದ ಭರವಸೆಯಂತೆಯೇ ಕೊಳಗೇರಿ ಪ್ರದೇಶಕ್ಕೆ ಬಂದು ಸಮಸ್ಯೆಗಳನ್ನು ಪರಿಹರಿಸಿದ್ದರು ಎಂದು ವಿಶ್ವನಾಥ್ ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com