ಬಳ್ಳಾರಿ ಬಳಿ ಕಾರು ಅಪಘಾತಕ್ಕೆ ಇಬ್ಬರು ಬಲಿ: ಕಾರಿನಲ್ಲಿದ್ದದ್ದು ಆರ್. ಅಶೋಕ್ ಪುತ್ರ?

ಬಳ್ಳಾರಿಯ ಹೊಸಪೇಟೆ ಬಳಿ ಮೂರು ದಿನಗಳ ಹಿಂದೆ ಕಾರೊಂದು ಗುದ್ದಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಈ ಕಾರನ್ನು ಬೆಂಗಳೂರಿನ ಪ್ರಭಾವಿ ಸಚಿವ ಆರ್. ಅಶೋಕ್ ಮಗ ಶರತ್ ಚಲಾಯಿಸುತ್ತಿದ್ದ ಎನ್ನುವ ಗಂಭೀರ ಆರೋಪವೊಂದು ಕೇಳಿ ಬಂದಿದೆ.

Published: 13th February 2020 01:19 PM  |   Last Updated: 13th February 2020 01:34 PM   |  A+A-


Car Accident in ballari

ಅಪಘಾತವಾದ ಕಾರು

Posted By : Shilpa D
Source : Online Desk

ಬೆಂಗಳೂರು: ಬಳ್ಳಾರಿಯ ಹೊಸಪೇಟೆ ಬಳಿ ಮೂರು ದಿನಗಳ ಹಿಂದೆ ಕಾರೊಂದು ಗುದ್ದಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, ಈ ಕಾರನ್ನು ಬೆಂಗಳೂರಿನ ಪ್ರಭಾವಿ ಸಚಿವ ಆರ್. ಅಶೋಕ್ ಮಗ ಶರತ್ ಚಲಾಯಿಸುತ್ತಿದ್ದ ಎನ್ನುವ ಗಂಭೀರ ಆರೋಪವೊಂದು ಕೇಳಿ ಬಂದಿದೆ.

KA-05 MW-0357 ಕಾರಿನ ನಂಬರ್ ಮರ್ಸಿಡಿಸ್ ಬೆಂಜ್ ಕಾರ್ ಇದಾಗಿದೆ. ಹಂಪಿ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿ ಮೋಜು ಮಸ್ತಿ ಮಾಡಿಕೊಂಡು ಸೋಮವಾರ ಬೆಂಗಳೂರಿನ ಕಡೆಗೆ ಐದು ಜನರಿದ್ದ ಬೆಂಜ್ ಕಾರು ಹೊಸಪೇಟೆಯ ಹೊರವಲಯದಲ್ಲಿ ಇರುವ ಮರಿಯಮ್ಮನಹಳ್ಳಿ ಮಾರ್ಗವಾಗಿ ಪಯಣಿಸುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ.

ತಲೆಗೆ ಪೆಟ್ಟು ಬಿದ್ದಿದ್ದ ಅಶೋಕ್ ಅವರ ಪುತ್ರನನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿ ತಿಳಿದುಬಂದಿದೆ. ಎಫ್ ಐ ಆರ್ ನಲ್ಲಿ ಕಾರು ಚಾಲಕನ ಹೆಸರನ್ನು ರಾಹುಲ್ ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ. 

ಅಪಘಾತವಾದ ಕಾರು ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನ ಹೆಸರಿನಲ್ಲಿದೆ. ಇದು ಆರ್ ಅಶೋಕ್ ಅವರಿಗೆ ಸೇರಿದ್ದ ಕಾರು ಎನ್ನಲಾಗಿದೆ. ಈ ಸಂಬಂಧ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Stay up to date on all the latest ರಾಜ್ಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp