ಹೊಸಪೇಟೆ: ದೇವರ ಹುಂಡಿಯಲ್ಲಿ ಪ್ರೇಮ ನಿವೇದನ ಪತ್ರ!

ಇತ್ತೀಚೆಗೆ ನಡೆದಿದ್ದ ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ಇಡಲಾಗಿದ್ದ ತಾತ್ಕಾಲಿಕ ಹುಂಡಿಯಲ್ಲಿ ಪ್ರೇಮ ಪತ್ರ ಪತ್ತೆಯಾಗಿದೆ.

Published: 14th February 2020 01:04 PM  |   Last Updated: 14th February 2020 01:04 PM   |  A+A-


love letter found in temple hundi in Hospet

ಹುಂಡಿಯಲ್ಲಿ ದೊರೆತ ಪ್ರೇಮನಿವೇದನಾ ಪತ್ರ

Posted By : Srinivasamurthy VN
Source : RC Network

ಹೊಸಪೇಟೆ: ಇತ್ತೀಚೆಗೆ ನಡೆದಿದ್ದ ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ಇಡಲಾಗಿದ್ದ ತಾತ್ಕಾಲಿಕ ಹುಂಡಿಯಲ್ಲಿ ಪ್ರೇಮ ಪತ್ರ ಪತ್ತೆಯಾಗಿದೆ.

ನಿನ್ನೆ ನಡೆದ ಹುಂಡಿ ಎಣಿಕ ಕಾರ್ಯದಲ್ಲಿ ಹಣದ ಜೊತೆ ಪ್ರೇಮಪತ್ರ ಪತ್ರೆಯಾಗಿದ್ದು, ನವೀನ್ ಎಂಬ ಯುವಕ ಕಾವೇರಿ ಎನ್ನುವ ಯುವತಿಯನ್ನ ಪ್ರೀತಿಸುತಿದ್ದು ಆಕೆಯೇ ತನ್ನ ಬಾಳ ಸಂಗಾತಿಯಾಗಿ ಬರಲಿ‌ ಎಂದು ದೇವರಲ್ಲಿ ಅರಿಕೆಮಾಡಿಕೊಂಡಿದ್ದಾನೆ.

ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರಲಿಂಗೇಶ್ವರ ಜಾತ್ರೆಯ ಪ್ರಯುಕ್ತ ಅಳವಡಿಸಲಾಗಿದ್ದ ತಾತ್ಕಾಲಿಕ ಹುಂಡಿಯಲ್ಲಿ 36 ಲಕ್ಷಕ್ಕೂ ಅಧಿಕ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ.

ಸದ್ಯಕ್ಕೆ ಈ ಭಾಗದಲ್ಲಿ ಹಣಕ್ಕಿಂತ ಪ್ರೇಮಪತ್ರದ ವಿಚಾರವೇ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp