ಮಂಡ್ಯ: ೩೬ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಕ್ಕು ಪತ್ರ ವಿತರಣೆ ಕಾರ್ಯಕ್ಕೆ ಸಂಸದೆ ಸುಮಲತಾ ಚಾಲನೆ

ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಜೆಡಿಎಸ್ ನಾಯಕರು ಮತ್ತು ಸುಮಲತಾ ಅಂಬರೀಶ್ ನಡುವೆ ಈಗ ರಾಜಕೀಯ ಶುರುವಾಗಿದ್ದು,ಶ್ರೀಸಾಮಾನ್ಯರ ಅಭಿವೃದ್ದಿ ಕಾರ್ಯಕ್ರಮಗಳ ಮೇಲೂ ಪರಿಣಾಮ ಬೀರಿದೆ.
ಮಂಡ್ಯ: ೩೬ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಕ್ಕು ಪತ್ರ ವಿತರಣೆ ಕಾರ್ಯಕ್ಕೆ ಸಂಸದೆ ಸುಮಲತಾ ಚಾಲನೆ
ಮಂಡ್ಯ: ೩೬ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಕ್ಕು ಪತ್ರ ವಿತರಣೆ ಕಾರ್ಯಕ್ಕೆ ಸಂಸದೆ ಸುಮಲತಾ ಚಾಲನೆ

ಮಂಡ್ಯ: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಜೆಡಿಎಸ್ ನಾಯಕರು ಮತ್ತು ಸುಮಲತಾ ಅಂಬರೀಶ್ ನಡುವೆ ಈಗ ರಾಜಕೀಯ ಶುರುವಾಗಿದ್ದು,ಶ್ರೀಸಾಮಾನ್ಯರ ಅಭಿವೃದ್ದಿ ಕಾರ್ಯಕ್ರಮಗಳ ಮೇಲೂ ಪರಿಣಾಮ ಬೀರಿದೆ.

ಸುಮಲತಾ ಅಂಬರೀಶ್ ಇದೀಗ ತನ್ನ ಕೆಲಸಗಳ ಮೂಲಕವೇ ಉತ್ತರ ನೀಡೋ ಮೂಲಕ ಜೆಡಿಎಸ್ ಗೆ ಟಾಂಗ್ ನೀಡಲು ಮುಂದಾಗಿದ್ದಾರೆ.

ಹನಕೆರೆಯಲ್ಲಿ ಸರ್ಕಾರ ಬಡವರಿಗಾಗಿ ನಿವೇಶನ ನೀಡೋದಕ್ಕಾಗಿ ೧೯೮೪ರಲ್ಲಿ ಭೂಸ್ವಾಧೀನ ಮಾಡಿಕೊಂಡಿತ್ತು, ನಿವೇಶನ ಹಂಚಿಕೆಯಾಗಿತ್ತಾದರೂ ಹಕ್ಕುಪತ್ರವನ್ನು ಈವರೆಗೂ ನೀಡಿರಲಿಲ್ಲ,ಶಾಸಕ ಎಂ.ಶ್ರೀನಿವಾಸ್ ತಮ್ಮ ಬೆಂಬಲಿಗರ ಹಿತರಕ್ಷಣೆಗಾಗಿ ಬಡವರಿಗೆ ಹಂಚಿಕೆಯಾಗಿದ್ದ ನಿವೇಶನದ ಹಕ್ಕು ಪತ್ರವನ್ನು ವಿತರಿಸದೆ ಕೈ ಬಿಟ್ಟಿದ್ದರು. ಬೆಂಬಲಿಗನ ಸ್ವಾರ್ಥಕ್ಕೆ ಶಾಸಕ ಎಂ ಶ್ರೀನಿವಾಸ್ ಬಡವರ ವಿರೋಧ ಕಟ್ಟಿಕೊಂಡಿದ್ದರು,ಇದೀಗ ಸದರಿ ಬಡವರಿಗೆ  ನಿವೇಶನ ಹಕ್ಕುಪತ್ರ ವಿತರಣೆಗೆ ಚಾಲನೆ ನೀಡುವ ಮೂಲಕ ಜೆಡಿಎಸ್ ಶಾಸಕನ ಊರಲ್ಲಿಯೇ ಸಂಸದೆ ಸುಮಲತಾ ಅಂಬರೀಶ್ ಮೇಲುಗೈ ಸಾಧಿಸಿದ್ದಾರೆ.

 ೩೬ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಯೋಜನೆಗೆ ಸಂಸದೆ ಸುಮಲತಾ ಅಂಬರೀಶ್ ಈಗ ಚಾಲನೆ ನೀಡಲು ಕೈಗೆತ್ತಿಕೊಂಡಿದ್ದಾರೆ.ಇದರೊಂದಿಗೆ ಜೆಡಿಎಸ್ ಶಾಸಕ ಎಂ.ಶ್ರೀನಿವಾಸ್ ಅವರ ರಾಜಕಾರಣಕ್ಕೆ ಸೆಡ್ಡುಹೊಡೆದಿದ್ದಾರೆ.

ಸಂಸದೆ ಸುಮಲತಾ ಅಂಬರೀಷ್ ಅವರು ಪೂರ್ವ ನಿಗದಿತ ಕಾರ್ಯಕ್ರಮದಂತೆ ಹನಕೆರೆ ಗ್ರಾಮಕ್ಕೆ ಇಂದು ಭೇಟಿ ನೀಡಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದರು. ಗ್ರಾಮದಲ್ಲಿ ೩೬ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ಇಂದು ನಡೆಯಬೇಕಾಗಿತ್ತು. ಆದರೆ ನಿಗದಿಯಾಗಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮವನ್ನು ಶಾಸಕ ಎಂ.ಶ್ರೀನಿವಾಸ್ ಶಿಷ್ಟಾಚಾರ ಕಾರಣವನ್ನ ಮುಂದಿಟ್ಟು ಕಾರ್ಯಕ್ರಮವನ್ನು ಮುಂದೂಡುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದರು. 

ಇದರಂತೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮವನ್ನು ಜಿಲ್ಲಾಡಳಿತ ಮುಂದೂಡಿತ್ತು, ಕಾರ್ಯಕ್ರಮ ಮುಂದೂಡಿದ ವಿಚಾರವಾಗಿ ಸಂಸದೆ ಸುಮಲತಾ ಅವರು ಅಧಿಕಾರಿಗಳ ಬಳಿ ವಿಚಾರಿಸಿದ್ದಲ್ಲದೆ, ತಹಸೀಲ್ದಾರ್ ಮತ್ತು ತಾಲೂಕು ಪಂಚಾಯಿತಿ ಇಒ ಅವರನ್ನು ತರಾಟೆಗೆ ತೆಗೆದುಕೊಂಡರು. ಫಲಾನುಭವಿಗಳಿಗೆ ಸಾಂತ್ವನ ಹೇಳಿ ಅಲ್ಲಿಂದ ತೆರಳಿದರು.ಶಾಸಕ ಎಂ.ಶ್ರೀನಿವಾಸ್ ಕುತಂತ್ರದ ವಿರುದ್ದ ಅಲ್ಲಿದ್ದ ಫಲಾನುಭವಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು. 

ಈ ವೇಳೆ ಅಂಬರೀಶ್ ಅಭಿಮಾನಿಗಳ ಸಂಘದ ರಾಜ್ಯಾಧ್ಯಕ್ಷ ಬೇಲೂರು ಸೋಮಶೇಖರ್ ಮತ್ತಿತರರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com