ಬೆಂಗಳೂರು: ಸ್ಯಾಮ್‌ ಸಾಂಗ್ ಕಂಪನಿಯ ಲಾಟರಿ ಹೆಸರಿನಲ್ಲಿ ದಂಪತಿಗೆ 1.5 ಕೋಟಿ ರೂ. ವಂಚನೆ

ನಿಮಗೆ ಸ್ಯಾಮ್ ಸಾಂಗ್ ಕಂಪನಿಯ ವಾರ್ಷಿಕ ಲಾಟರಿ ಬಂದಿದೆ ಎಂದು ಹೇಳಿ ದಂಪತಿಯಿಂದ ಒಂದೂವರೆ ಕೋಟಿ ರೂ. ಹಣ ಲಪಟಾಯಿಸಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಿಮಗೆ ಸ್ಯಾಮ್ ಸಾಂಗ್ ಕಂಪನಿಯ ವಾರ್ಷಿಕ ಲಾಟರಿ ಬಂದಿದೆ ಎಂದು ಹೇಳಿ ದಂಪತಿಯಿಂದ ಒಂದೂವರೆ ಕೋಟಿ ರೂ. ಹಣ ಲಪಟಾಯಿಸಿರುವ ಆಘಾತಕಾರಿ ಘಟನೆ ನಗರದಲ್ಲಿ ನಡೆದಿದೆ.

ಜೆಪಿ ನಗರದ ಅಂಬುಲಕ್ಷ್ಮಿ ಮತ್ತು ಶ್ರೀನಿವಾಸ್ ದಂಪತಿ ಹಣ ಕಳೆದಕೊಂಡ ಸಂತ್ರಸ್ತರು.
 
ಕಳೆದ ನವಂಬರ್ 20ರಂದು ಅಂಬುಲಕ್ಷ್ಮೀ ಮೊಬೈಲ್ ನಂಬರ್‌ಗೆ ವ್ಯಕ್ತಿಯೋರ್ವ ಕರೆ ಮಾಡಿ, "ನಾನು ಸ್ಯಾಮ್‌ಸಾಂಗ್ ಕಂಪನಿ ಏಜೆಂಟ್. ಸ್ಯಾಮ್ ಸಾಂಗ್ ಕಂಪನಿ ಪ್ರತಿ ವರ್ಷ ಲಾಟರಿ ನಡೆಸುತ್ತದೆ. ಈ ವರ್ಷದ ಲಾಟರಿಯಲ್ಲಿ ನಿಮ್ಮ ನಂಬರ್ ಆಯ್ಕೆಯಾಗಿದ್ದು, 10 ಲಕ್ಷ ಪೌಂಡ್ ಹಣ ಅಂದರೆ 93 ಕೋಟಿ ಹಣ ನಿಮಗೆ ಬಂದಿದೆ ಎಂದು ಹೇಳಿದ್ದಾನೆ.

ಇದನ್ನು ನಂಬಿದ ದಂಪತಿ ಹಣದ ಆಸೆಗೆ ಬಿದ್ದು, ಅವರು ಕೇಳಿದ ಎಲ್ಲಾ ದಾಖಲೆಗಳನ್ನು ನೀಡಿದ್ದಾರೆ. ನಂತರ 93 ಕೋಟಿ ಹಣಕ್ಕೆ ಮೊದಲು ತೆರಿಗೆ ಕಟ್ಟಬೇಕು. ಹಾಗಾಗಿ ನೀವು 1 ಕೋಟಿ 67 ಲಕ್ಷ ಹಣ ಅಕೌಂಟ್‌ಗೆ ಹಾಕಿ ಎಂದು ಹೇಳಿದ್ದಾರೆ. ಇದನ್ನು ನಂಬಿದ ದಂಪತಿ ಅಪರಿಚಿತರು ಹೇಳಿದ ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ. 

ಹಣ ಹಾಕಿದ ನಂತರ ದಂಪತಿ ಅವರಿಗೆ ಫೋನ್ ಮಾಡಿದಾಗ ನಂಬರ್ ನಾಟ್ ರಿಚಬಲ್ ಬಂದಿದೆ. ಅನುಮಾನದಿಂದ ಸಂಬಂಧಪಟ್ಟ ಕಚೇರಿಗೆ ತೆರಳಿ ವಿಚಾರಿಸಿದಾಗಲೇ ಅವರು ಮೋಸ ಹೋಗಿರುವುದು ಗೊತ್ತಾಗಿದೆ. 

ಈ ಸಂಬಂಧ ದಂಪತಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com