ಪುಲ್ವಾಮ ದಾಳಿಗೆ ಒಂದು ವರ್ಷ: ಕೆ.ಎಂ.ದೊಡ್ಡಿ ಬಳಿಯ ಗುಡಿಗೆರೆ ಯೋಧ ಎಚ್.ಗುರುಗೆ ಶ್ರದ್ದಾಂಜಲಿ

ಭಾರತೀಯ ಸೇನೆಯ ಮೇಲೆ ಪಾಕ್ ಪ್ರಚೋದಿತ ಉಗ್ರರು ನಡೆಸಿದ ಪುಲ್ವಾಮ ದಾಳಿ ಘಟನೆಯ ಸ್ಮರಣಾರ್ಥ ಉಗ್ರರ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮದ್ದೂರು ತಾಲ್ಲೂಕಿನ (ಕೆ.ಎಂ.ದೊಡ್ಡಿ) ಗುಡಿಗೆರೆ ಕಾಲೋನಿಯ ಎಚ್.ಗುರು ಕುಟುಂಬ ಇಂದು ಗುರು ಅವರ ಸಮಾಧಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿತು. 
ಪುಲ್ವಾಮ ದಾಳಿಗೆ ಒಂದು ವರ್ಷ; ಕೆ.ಎಂ.ದೊಡ್ಡಿ ಬಳಿಯ ಗುಡಿಗೆರೆ ಯೋಧ ಎಚ್.ಗುರುಗೆ ಶ್ರದ್ದಾಂಜಲಿ
ಪುಲ್ವಾಮ ದಾಳಿಗೆ ಒಂದು ವರ್ಷ; ಕೆ.ಎಂ.ದೊಡ್ಡಿ ಬಳಿಯ ಗುಡಿಗೆರೆ ಯೋಧ ಎಚ್.ಗುರುಗೆ ಶ್ರದ್ದಾಂಜಲಿ

ಮಂಡ್ಯ: ಭಾರತೀಯ ಸೇನೆಯ ಮೇಲೆ ಪಾಕ್ ಪ್ರಚೋದಿತ ಉಗ್ರರು ನಡೆಸಿದ ಪುಲ್ವಾಮ ದಾಳಿಗೆ ಒಂದು ವರ್ಷ ಕಳೆದಿದೆ. ಈ ಘಟನೆಯ ಸ್ಮರಣಾರ್ಥ ಉಗ್ರರ ದಾಳಿಯಲ್ಲಿ ವೀರ ಮರಣವನ್ನಪ್ಪಿದ ಮದ್ದೂರು ತಾಲ್ಲೂಕಿನ (ಕೆ.ಎಂ.ದೊಡ್ಡಿ) ಗುಡಿಗೆರೆ ಕಾಲೋನಿಯ ಎಚ್.ಗುರು ಕುಟುಂಬ ಇಂದು ಗುರು ಅವರ ಸಮಾಧಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿತು. 

ಮಳವಳ್ಳಿ-ಮದ್ದೂರು ರಸ್ತೆಯ ಮೆಳ್ಳಹಳ್ಳಿಯ ಹೊರವಲಯದ ಬಳಿ ನಡೆಸಲಾಗಿರುವ ಅಂತ್ಯಸಂಸ್ಕಾರದ ಸ್ಥಳದಲ್ಲಿಂದು ಗುರು ತಾಯಿ ಚಿಕ್ಕತಾಯಮ್ಮ ತಂದೆ, ಸಹೋದರನ್ನೊಳಗೊಂಡ ಕುಟುಂಬದವರು ಹಾಗೂ ಸೇನೆಯಿಂದ ನಿವೃತ್ತರಾಗಿ ಬಂದಿರುವ ಹವಾಲ್ದಾರ್ ಸುರೇಶ್ ಜಿ.ಕೆ.ಎಂ ದೊಡ್ಡಿಯ ವಿವಿಧ ಶಾಲಾಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡು ವೀರ ಯೋಧನಿಗೆ ಭಾವಪೂರ್ಣ ನಮನ ಸಲ್ಲಿಸಿದರು.

2019 ರ ಫೆ. 14 ರಂದು ಉಗ್ರರ ಹೆಡೆ ಮುರಿಕಟ್ಟಲು ಹೊರಟ್ಟಿದ್ದ ಸೈನಿಕರ ಮೇಲೆ ಪಾಕಿಸ್ತಾನಿ ಕೃಪಾಪೋಷಿತ ಉಗ್ರರು ಪುಲ್ವಾಮಾ ಬಳಿ ನಡೆಸಿದ ಬಾಂಬ್ ದಾಳಿಯಲ್ಲಿ 41 ಭಾರತೀಯ ಸೈನಿಕರು ಸಾವಿಗೀಡಾಗಿ ಹಲವಾರು ಸೈನಿಕರಿಗೆ ತೀವ್ರ ಪ್ರಮಾಣದ ಗಾಯಗಳಾಗಿದ್ದವು ಈ ದಾಳಿಯಲ್ಲಿ ಹುತಾತ್ಮರಾದ 41 ಸೈನಿಕರ ಪೈಕಿ ಮದ್ದೂರು ತಾಲ್ಲೂಕಿನ  ಕೆ.ಎಂ.ದೊಡ್ಡಿ ಬಳಿಯ ಗುಡಿಗೆರೆ ಕಾಲೋನಿಯ ಎಚ್.ಗುರು ಕೂಡ ಒಬ್ಬರು.

ಹುತಾತ್ಮರಾದ ಗುರು ಪಾರ್ಥಿವ ಶರೀರವನ್ನು ಫೆ.16 ರಂದು ಭಾರತೀಯ ಸೇನಾ ಗೌರವದೊಂದಿಗೆ ಮಳವಳ್ಳಿ-ಮದ್ದೂರು ರಸ್ತೆಯ ಮೆಳ್ಳಹಳ್ಳಿಯ ಹೊರವಲಯದ ಜಾಗದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಗಿದೆ.

ವರ್ಷ ಕಳೆದರೂ ಸ್ಮಾರಕವಿಲ್ಲ:
ಯೋಧ ಎಚ್.ಗುರು ಹುತಾತ್ಮರಾಗಿ ಒಂದು ವರ್ಷ ಕಳೆದರೂ ಸ್ಮಾರಕ ನಿರ್ಮಾಣವಾಗಿಲ್ಲ, ಜಿಲ್ಲಾಡಳಿತವಾಗಲಿ, ಸ್ಥಳಿಯ ಜನಪ್ರತಿನಿಧಿಗಳಾಗಲಿ ಯೋಧ ಗುರು ಸ್ಮಾರಕ ನಿರ್ಮಾಣ ಮಾಡಲು ಮನಸ್ಸು ಮಾಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
 
ಯೋಧ ಹೆಚ್.ಗುರು ಹುತಾತ್ಮರಾದ ಸಂದರ್ಭದಲ್ಲಿ ಸಚಿವರಾಗಿದ್ದ ಹಾಲಿ ಶಾಸಕ ಡಿ.ಸಿ. ತಮ್ಮಣ್ಣ ಗುರು ಅಂತ್ಯಕ್ರಿಯೆ ನೆರವೇರಿಸಿದ ಸ್ಥಳದಲ್ಲಿ ಸ್ಮಾರಕ ಮಾಡುವುದಾಗಿ ಭರವಸೆಯನ್ನು ನೀಡಿದ್ದರು ಆದರೆ ಒಂದು ವರ್ಷ ಕಳೆದರೂ ಅದು ಈಡೇರಿಲ್ಲ. ಯೋಧ ಗುರು ಅವರ ಸಮಾಧಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ. ಹವಾಲ್ದಾರ್ ಸುರೇಶ್ ಜೀ, ಭಾರತದ ಜನತೆ ಎಂದೂ ಮರೆಯಲಾಗದ ದಿನ ಇಂದು ಕಳೆದ ಫೆಬ್ರವರಿ 14 ರಂದು ನಡೆದ ಪುಲ್ವಾಮಾ ದಾಳಿಯಲ್ಲಿ ನನ್ನ ಸಹೋದರರು 41 ಜನ ವೀರ ಮರಣವನ್ನಪ್ಪಿದ್ದರು ಅವರ ಸ್ಮರಣಾರ್ಥ ಇಂದು ದೇಶಾದ್ಯಂತ ಪುಲ್ವಾಮಾ ಹುತ್ಮಾರರ ದಿನವನ್ನಾಗಿ ಆಚರಿಸಲಾಗುತ್ತಿದೆ ಮತ್ತು ಇಂದು ದೇಶಾದ್ಯಂತ ಪ್ರೇಮಿಗಳ ದಿನ ಕೂಡ ಹೌದು ಆದರೆ ಇನ್ನು ಮುಂದೆ ರಾಷ್ಟ್ರ ಪ್ರೇಮಿಗಳ ದಿನಾಚರಣೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ವರದಿ: ನಾಗಯ್ಯ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com