ಶಿವಮೊಗ್ಗ: ಬಸ್ಸು-ಬೈಕ್ ಡಿಕ್ಕಿ: ಮೂವರು ಸಾವು

ಮದುವೆ ದಿಬ್ಬಣದ ಬಸ್ಸೊಂದು ಬೈಕ್​ ಮೇಲೆ ಹರಿದ ಪರಿಣಾಮ ಬೈಕ್​ನಲ್ಲಿದ್ದ ದಂಪತಿ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟ ಘಟನೆ ಭದ್ರಾವತಿ ತಾಲೂಕು ಮೂಡಲ ವಿಠಲಾಪುರ ಬಳಿ ಸಂಭವಿಸಿದೆ.

Published: 16th February 2020 10:07 PM  |   Last Updated: 16th February 2020 10:07 PM   |  A+A-


Bus-Bike Accident kills three in Shivamogga

ಸಂಗ್ರಹ ಚಿತ್ರ

Posted By : Srinivasamurthy VN
Source : UNI

ಶಿವಮೊಗ್ಗ: ಮದುವೆ ದಿಬ್ಬಣದ ಬಸ್ಸೊಂದು ಬೈಕ್​ ಮೇಲೆ ಹರಿದ ಪರಿಣಾಮ ಬೈಕ್​ನಲ್ಲಿದ್ದ ದಂಪತಿ ಹಾಗೂ ಮಗ ಸ್ಥಳದಲ್ಲೇ ಮೃತಪಟ್ಟ ಘಟನೆ ಭದ್ರಾವತಿ ತಾಲೂಕು ಮೂಡಲ ವಿಠಲಾಪುರ ಬಳಿ ಸಂಭವಿಸಿದೆ.

ಹನುಂತಪುರದ ವೀರಪ್ಪ(45) ಆಶಾ(34) ಹಾಗೂ ಹೇಮಂತ್ (7) ಮೃತ‌ ದುರ್ದೈವಿಗಳು. ಹನುಮಂತಪುರದಿಂದ ವೀರಪ್ಪ ಗರ್ಭಿಣಿ ಪತ್ನಿಯನ್ನು ವೈದ್ಯರ ಬಳಿ ತಪಾಸಣೆ ಮಾಡಿಸಲು ಮಗನೊಂದಿಗೆ ಹೊಳೆಹೊನ್ನೂರಿನ ಆಸ್ಪತ್ರೆಗೆ ತೆರಳುತ್ತಿದ್ದರು. ಈ ವೇಳೆ ಶಿವಮೊಗ್ಗದಲ್ಲಿ ನಡೆದ ಮದುವೆ ಮುಗಿಸಿಕೊಂಡು ಗುಡುಮಘಟಕ್ಕೆ ಬಸ್​ ಸಂಚರಿಸುತ್ತಿತ್ತು. ವೇಗವಾಗಿ ಬಂದ ಬಸ್ಸು ಹರಿದ ಪರಿಣಾಮ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಅಪಘಾತದ ರಭಸಕ್ಕೆ ಆಶಾ ಹಾಗೂ ಹೇಮಂತ್ ದೇಹಗಳು ಛಿದ್ರ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ.

Stay up to date on all the latest ರಾಜ್ಯ news with The Kannadaprabha App. Download now
Poll
'Nationalism', 'citizenship', 'demonetisation' among chapters dropped from CBSE syllabus

ಹಿರಿಯ ತರಗತಿಗಳ ಪಠ್ಯಕ್ರಮವನ್ನು 30% ರಷ್ಟು ಕಡಿಮೆ ಮಾಡುವ ಸಿಬಿಎಸ್‌ಇ ನಡೆ ಸರಿಯೇ?


Result
ಸರಿ
ತಪ್ಪು
ಗೊತ್ತಿಲ್ಲ
flipboard facebook twitter whatsapp