ಜಂಗಮವಾಡಿ ಗುರುಕುಲದ ಶತಮಾನೋತ್ಸವ ನಿಮಿತ್ತ ಕಾಶಿಗೆ ತೆರಳಿದ ಸಿಎಂ ಬಿಎಸ್ ವೈ

ಹಿಂದೂಗಳ ಪವಿತ್ರ ನಗರಿ ವಾರಣಾಸಿಯಲ್ಲಿರುವ ಪೂಜ್ಯ ಜಂಗಮಾವಾಡಿ ಮಠದ ಶ್ರೀ ಜಗದ್ಗುರು ವಿಶ್ವಾರಾದ್ಯ ಗುರುಕುಲ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಶಿಗೆ ತೆರಳಿದ್ದಾರೆ. ಭಾನುಇವಾರ ಗುರುಕುಲದಲ್ಲಿ ಬಸವಣ್ಣನ ಅನುಯಾಯಿಗಳ ಮಹಾಗ್ರಂಥವಾಗಿರುವ “ಸಿದ್ಧಾಂತ ಶಿಖಾಮಣಿ" 19 ಭಾರತೀಯ ಮತ್ತು ವಿದೇಶಿ ಭಾಷೆಗಳ ಅನುವಾದಿತ ಪ್
ಜಂಗಮವಾಡಿ ಗುರುಕುಲದ ಶತಮಾನೋತ್ಸವ ನಿಮಿತ್ತ ಕಾಶಿಗೆ ತೆರಳಿದ ಸಿಎಂ ಬಿಎಸ್ ವೈ
ಜಂಗಮವಾಡಿ ಗುರುಕುಲದ ಶತಮಾನೋತ್ಸವ ನಿಮಿತ್ತ ಕಾಶಿಗೆ ತೆರಳಿದ ಸಿಎಂ ಬಿಎಸ್ ವೈ

ಬೆಂಗಳೂರು: ಹಿಂದೂಗಳ ಪವಿತ್ರ ನಗರಿ ವಾರಣಾಸಿಯಲ್ಲಿರುವ ಪೂಜ್ಯ ಜಂಗಮಾವಾಡಿ ಮಠದ ಶ್ರೀ ಜಗದ್ಗುರು ವಿಶ್ವಾರಾದ್ಯ ಗುರುಕುಲ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಶಿಗೆ ತೆರಳಿದ್ದಾರೆ. ಭಾನುಇವಾರ ಗುರುಕುಲದಲ್ಲಿ ಬಸವಣ್ಣನ ಅನುಯಾಯಿಗಳ ಮಹಾಗ್ರಂಥವಾಗಿರುವ “ಸಿದ್ಧಾಂತ ಶಿಖಾಮಣಿ" 19 ಭಾರತೀಯ ಮತ್ತು ವಿದೇಶಿ ಭಾಷೆಗಳ ಅನುವಾದಿತ ಪ್ರತಿಗಳನ್ನು  ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.

ಕರ್ನಾಟಕದಿಂದ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳನ್ನು ಹೊಂದಿರುವ ಗುರುಕುಲಕ್ಕೆಸಿಎಂ ಯಡಿಯೂರಪ್ಪ ಸಹ ದಾನಿಗಳಾಗಿದ್ದಾರೆ.ಭಾರತದಲ್ಲಿ ಹಿಂದಿನ ಕಾಲದಲ್ಲಿ ಪ್ರಚಲಿತವಿದ್ದ ಗುರುಕುಲ ಮಾದರಿಯನ್ನು ಇಂದಿಗೂ ಅನುಸರಿಸುತಿರುವ ಈ ಸಂಸ್ಥೆಯ ಶತಮಾನೋತ್ಸವ ಸಂಭ್ರಮಾಚರಣೆಯಲ್ಲಿ ಅವರು ಭಾಗವಹಿಸಲಿದ್ದಾರೆ. 

“ಪವಿತ್ರಗ್ರಂಥವನ್ನು  ಕನ್ನಡ, ತೆಲುಗು, ಮಲಯಾಳಂ, ಹಿಂದಿ, ಗುಜರಾತಿ, ಮರಾಠಿ, ಚೈನೀಸ್, ಜಪಾನೀಸ್ ಮತ್ತು ಇತರ 19 ಭಾರತೀಯ ಮತ್ತು ವಿದೇಶಿ ಭಾಷೆಗಳಿಗೆ ಅನುವಾದಿಸಲಾಗಿದೆ. ಪ್ರತಿ ಭಾಷೆಯಲ್ಲಿ ಎರಡು ಸಾವಿರ ಪ್ರತಿಗಳನ್ನು ಪ್ರಕಟಿಸಲಾಗುವುದು ”ಎಂದು ವಾರಣಾಸಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಮತ್ತು ಶ್ರೀ ಕಾಶಿ ವಿಶ್ವನಾಥ ದೇವಾಲಯ ಟ್ರಸ್ಟ್‌ನ ಸಿಇಒ ವಿಶಾಲ್ ಸಿಂಗ್ ಪತ್ರಿಕೆಗೆ ತಿಳಿಸಿದರು.

ವಾರಣಾಸಿಯ ಜಂಗಮಾವಾಡಿ ಮಠ ಮತ್ತು ಗುರುಕುಲ ಕರ್ನಾಟಕ ಮತ್ತು ದಕ್ಷಿಣ ಭಾರತದ ಇತರ ರಾಜ್ಯಗಳಿಂದ ಹೋಗುವ ಯಾತ್ರಾರ್ಥಿಗಳಿಗೆ ಪ್ರಮುಖ ಆಕರ್ಷಣೆಗಳಾಗಿವೆ. ಯಡಿಯೂರಪ್ಪ ಅವರು ಕೇಂದ್ರ ರಾಜ್ಯ ಸಚಿವ ಸುರೇಶ್ ಅಂಗಡಿ ಮತ್ತು ಇತರರೊಂದಿಗೆ ಕಾಶಿಗೆ ಪ್ರಯಾಣ ಬೆಳೆಸಿದ್ದು ಅವರು ಕಾಶಿಯಲ್ಲಿ ನಡೆಯುವ ಪವಿತ್ರ ಗಂಗಾರತಿ ಕಾರ್ಯಕ್ರಮದಲ್ಲಿ ಸಹ ಪಾಲ್ಗೊಳ್ಳುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com