ಮದುವೆ ಸಂಭ್ರಮದಲ್ಲಿದ್ದ ಹೊಸೂರ ಕುಟುಂಬಸ್ಥರು, ನೆಂಟರ ನೆಪದಲ್ಲಿ ಬಂದು ಚಿನ್ನ ಕದ್ದ ಖದೀಮ

ನೆಂಟರ ನೆಪದಲ್ಲಿ ಮದುವೆ ಮಂಟಪಕ್ಕೆ ಬಂದು ಚಿನ್ನ ಕದ್ದ ಘಟನೆ ಬಾಗಲಕೋಟೆಲ್ಲಿ ನಡೆದಿದೆ.

Published: 17th February 2020 12:20 AM  |   Last Updated: 17th February 2020 12:20 AM   |  A+A-


Man dupes as Relative

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : RC Network

ಬಾಗಲಕೋಟೆ: ನೆಂಟರ ನೆಪದಲ್ಲಿ ಮದುವೆ ಮಂಟಪಕ್ಕೆ ಬಂದು ಚಿನ್ನ ಕದ್ದ ಘಟನೆ ಬಾಗಲಕೋಟೆಲ್ಲಿ ನಡೆದಿದೆ.

ಬಾಗಲಕೋಟೆ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹೊಸೂರ ಬಂಧುಗಳ ಮದುವೆ ಸಮಾರಂಭದ ವೇಳೆ  ರಾತ್ರಿ ಮದುವೆಯ ಕುಟುಂಬಸ್ಥರೊಂದಿಗೆ ಡಾನ್ಸ್  ಮಾಡಿದ ಖದೀಮರು ಅಂದಾಜು ೮ ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.

ಕುಟುಂಬಸ್ಥರು ಡ್ಯಾನ್ಸ್ ಸಂಭ್ರಮದಲ್ಲಿದ್ದಾಗ ಕೊಠಡಿಯ ಕೀಲಿ ಮುರಿದು ಬ್ಯಾಗ್ ನಲ್ಲಿದ್ದ ಚಿನ್ನ ಕದ್ದು ಪರಾರಿಯಾಗಿದ್ದಾರೆ. ಬೀಳಗಿ ತಾಲೂಕಿನ ಸೊನ್ನ ಗ್ರಾಮದ ಯುವತಿಯೊಂದಿಗೆ ಕೊಪ್ಪಳ ಮೂಲದ ವರನೊಂದಿಗೆ ನಿನ್ನೆ ಮದುವೆ ನಿಶ್ಚಿತಾರ್ಥ ನಡೆಯುತ್ತಿತ್ತು. ಇಂದು ನಡೆದ ಮದುವೆ ಸಮಾರಂಭವಿತ್ತು.

ಬಾಗಲಕೋಟೆ ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡು ಆರೋಪಿಗೆ ಬಲೆ ಬೀಸಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
facebook twitter whatsapp