ಸರ್ಕಾರಿ ಬಂಗಲೆ ಕೊರತೆ: ಬಾಡಿಗೆ ಮನೆ ಹುಡುಕಾಟಕ್ಕಿಳಿದ ನೂತನ ಸಚಿವರು

ಅಧಿಕಾರ ಹಂಚಿಕೆ, ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ, ವಾಹನ ಹಂಚಿಕೆಗಳ ಬಳಿಕ ಇದೀಗ ರಾಜ್ಯ ಸರ್ಕಾರಕ್ಕೆ ನೂತನ ಸಚಿವರಿಗೆ ಬಂಗಲೆಗಳ ಹಂಚಿಕೆ ಕುರಿತು ತಲೆನೋವು ಶುರುವಾಗಿದೆ. 
ಸರ್ಕಾರಿ ಬಂಗಲೆ ಕೊರತೆ: ಬಾಡಿಗೆ ಮನೆ ಹುಡುಕಾಟಕ್ಕಿಳಿದ ನೂತನ ಸಚಿವರು
ಸರ್ಕಾರಿ ಬಂಗಲೆ ಕೊರತೆ: ಬಾಡಿಗೆ ಮನೆ ಹುಡುಕಾಟಕ್ಕಿಳಿದ ನೂತನ ಸಚಿವರು

ಬೆಂಗಳೂರು: ಅಧಿಕಾರ ಹಂಚಿಕೆ, ವಿಧಾನಸೌಧದಲ್ಲಿ ಕೊಠಡಿ ಹಂಚಿಕೆ, ವಾಹನ ಹಂಚಿಕೆಗಳ ಬಳಿಕ ಇದೀಗ ರಾಜ್ಯ ಸರ್ಕಾರಕ್ಕೆ ನೂತನ ಸಚಿವರಿಗೆ ಬಂಗಲೆಗಳ ಹಂಚಿಕೆ ಕುರಿತು ತಲೆನೋವು ಶುರುವಾಗಿದೆ. 

ನಗರದಲ್ಲಿ ಒಟ್ಟು 23 ಸರ್ಕಾರಿ ಬಂಗಲೆಗಳಿದ್ದು, ಇವುಗಳನ್ನು ಈಗಾಗಲೇ ಸಚಿವರಿಗೆ ಹಂಚಿಕೆ ಮಾಡಲಾಗಿದೆ. ನೂತನ ಸಚಿವರು ಪ್ರಮಾಣವಚನ ಸ್ವೀಕಾರ ಮಾಡುವವರೆಗೂ ಯಡಿಯೂರಪ್ಪ ಅವರ ಸಂಪುಟದಲ್ಲಿ ಒಟ್ಟು 18 ಮಂದಿ ಸಚಿವರಿದ್ದರು. ಅವರಲ್ಲಿ ಬಹುತೇಕ ಸಚವರಿಗೆ ಬೆಂಗಳೂರಿನಲ್ಲಿರುವ ಸರ್ಕಾರಿ ಮನೆಗಳನ್ನೇ ಮಂಜೂರು ಮಾಡಲಾಗಿದೆ. ಉಪಮುಖ್ಯಮಂತ್ರಿ ಡಾ.ಸಿಎನ್ ಅಶ್ವತ್ಥ್ ನಾರಾಯಣ, ಸುರೇಶ್ ಕುಮಾರ್, ಆರ್. ಅಶೋಕ್ ಮತ್ತು ವಿ.ಸೋಮಣ್ಣ ಮತ್ತು 10 ಹೊಸ ಸಚಿವರಲ್ಲಿ ಮೂವರು ಬೆಂಗಳೂರಿನವರೇ ಆಗಿದ್ದಾರೆ. 

ನಗರದಲ್ಲಿದ್ದ 23 ಸರ್ಕಾರಿ ಬಂಗಲೆಗಳನ್ನು ಸಚಿವರು, ನ್ಯಾಯಾಧೀಶರು ಹಾಗೂ ಸರ್ಕಾರಿ ಅಧಿಕಾರಿಗಳಿಗೆ ಈಗಾಗಲೇ ಹಂಚಿಕೆ ಮಾಡಲಾಗಿದೆ ಎಂದು ಡಿಪಿಎಆರ್ ಮೂಲಗಳು ಮಾಹಿತಿ ನೀಡಿದೆ. 

ರೇಸ್ ಕೋರ್ಸ್ ರಸ್ತೆ, ಕುಮಾರ ಕೃಪಾ ರಸ್ತೆ, ಜಯಮಹಲ್ ಎಕ್ಸ್ ಟೆನ್ಷನ್ ಹಾಗೂ ಇತರೆ ಪ್ರದೇಶಗಳಲ್ಲಿ ಸರ್ಕಾರಿ ಬಂಗಲೆಗಳಿವೆ. ಆದರೆ, ಇದೀಗ ಸಂಪುಟ ವಿಸ್ತರಣೆಯಾಗಿರುವುದರಿಂದ 28 ಮಂದಿ ಸಚಿವರಿದ್ದಾರೆ. ಇದೀಗ ಬಂಗಲೆಗಳ ಕೊರತೆ ಎದುರಾಗಿದ್ದಾರೆ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಸೇರಿ ಕೆಲ ನೂತನ ಸಚಿವರಿಗೆ ಈಗಾಗಲೇ ವಸತಿ ಕಲ್ಪಿಸಲಾಗಿದೆ ಎಂದು ತಿಳಿಸಿದೆ. 

ಹಲವು ಬಂಗಲೆಗಳ ಆಯ್ಕೆಯನ್ನು ನೀಡಲಾಗಿತ್ತು. ನಾನು ಜಯಮಹಲ್ ಬಳಿಯಿರುವ ಬಂಗಲೆಯನ್ನು ಆಯ್ದುಕೊಂಡಿದ್ದೆ ಎಂದು ಶಿವರಾಮ್ ಅವರು ಹೇಳಿದ್ದಾರೆ. 

ವಿಕಾಸಸೌಧದಲ್ಲಿ ತಮಗೆ ನೀಡಿರುವ ಕಚೇರಿಗೆ ಈಗಾಗಲೇ ಬೇಸರಗೊಂಡಿರುವ ಬಿಸಿ ಪಾಟೀಲ್ ಅವರು ಇದೀಗ ಸರ್ಕಾರಿ ಬಂಗಲೆ ದೊರಕದಿರುವುದು ಮತ್ತಷ್ಟು ಬೇಸರವನ್ನುಂಟು ಮಾಡಿದೆ ಎಂದು ಹೇಳಲಾಗುತ್ತಿದೆ. 

ಕಮ್ಮನಹಳ್ಳಿಯಲ್ಲಿ ಸ್ವಂತ ಮನೆಯಿದೆ. ಅದು ವಿಧಾನಸೌಧದಿಂದ 10 ಕಿಮೀ ದೂರದಲ್ಲಿದೆ. ಸಚಿವನಾಗಿ ನಾನು ವಿಧಾನಸೌಧದಲ್ಲಿ ನಡೆಯುವ ಸಭೆಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ. ಅಲ್ಲದೆ, ರಾಜ್ಯದ ಇತರೆ ಪ್ರದೇಶಗಳಿಂದ ರೈತರು ನನ್ನನ್ನು ಭೇಟಿ ಮಾಡಲು ಬರುತ್ತಾರೆ. ಅಂತಹವರಿಗೆ ಕಮ್ಮನಹಳ್ಳಿಗೆ ಬಂದು ಭೇಟಿಯಾಗುವಂತೆ ತಿಳಿಸಲು ಸಾಧ್ಯವಾಗುವುದಿಲ್ಲ. ನನ್ನ ಕಾರ್ಯವೈಖರಿಗೆ ಸುಲಭವಾಗುವ ಸಲುವಾಗಿ ವಿಧಾನಸೌಧದ ಸುತ್ತಮುತ್ತಲಿರುವ ಬಾಡಿಗೆ ಮನೆಗಾಗಿ ಹುಡುಕಾಟ ನಡೆಸುತ್ತಿದ್ದೇನೆಂದು ಪಾಟೀಲ್ ತಿಳಿಸಿದ್ದಾರೆ. 

ಹೆಸರನ್ನು ಬಹಿರಂಗಪಡಿಸಿದ ಸಚಿವರೊಬ್ಬರು ಹೇಳಿಕೆ ನೀಡಿ, ಸಚಿವರುಗಳು ಪ್ರತೀ ತಿಂಗಳಿಗೆ ರೂ.1.5 ಲಕ್ಷದಷ್ಟು ಬಾಡಿಗೆ ಪಡೆದುಕೊಳ್ಳಲು ಅರ್ಹರಾಗಿದ್ದಾರೆಂದು ಹೇಳಿದ್ದಾರೆ. 

ನಗರದಲ್ಲಿ ಒಟ್ಟು 23 ಬಂಗಲೆಗಳಿದ್ದು, ಈಗಾಗಲೇ ಸಾಕಷ್ಟು ಬಂಗಲೆಗಳನ್ನು ಅರ್ಹ ವ್ಯಕ್ತಿಗಳಲ್ಲದವರಿಗೆ ನೀಡಲಾಗಿದೆ. ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೂ ವಸಂತನಗರದ ಕ್ವಾಟ್ರರ್ಸ್ ನಲ್ಲಿ ವಸತಿ ನೀಡಲಾಗಿದೆ. ಅವರಿಗೇಕೆ ಬಂಗಲೆ ನೀಡಬೇಕಿತ್ತು? ರೇಣುಕಾಚಾರ್ಯ ಬದಲಿಗೆ ಬೇರೆ ಸಚಿವರಿಗೆ ಬಂಗಲೆ ನೀಡಬಹುದಿತ್ತು. ಅನರ್ಹ ವ್ಯಕ್ತಿಗಳಿಗೆ ಪ್ರೋತ್ಸಾಹ ನೀಡವುದಷ್ಟೇ ಅಲ್ಲ, ಅಂತಹವರಿಗೆ ಸುಖಾಸುಮ್ಮನೆ ಖರ್ಚು ಮಾಡುತ್ತಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com