ಗಣೇಶ್ ಆಚಾರಿ ಸೇರಿ ಐವರಿಗೆ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಶಿಲ್ಪಕಲಾ ಅಕಾಡೆಮಿ 2019ನೇ ಸಾಲಿನ ವಿವಿಧ ವಿಭಾಗಗಳ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಉತ್ತರ ಕನ್ನಡದ ಗಣೇಶ್ ಆಚಾರಿ ಸೇರಿ ಹಲವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕ ಶಿಲ್ಪಕಲಾ ಅಕಾಡೆಮಿ 2019ನೇ ಸಾಲಿನ ವಿವಿಧ ವಿಭಾಗಗಳ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಉತ್ತರ ಕನ್ನಡದ ಗಣೇಶ್ ಆಚಾರಿ ಸೇರಿ ಹಲವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 

ಕಳೆದ 2019 ನೇ ಸಾಲಿನ ಗೌರವ ಪ್ರಶಸ್ತಿಗೆ 5 ಮಂದಿ ಶಿಲ್ಪಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಪ್ರಶಸ್ತಿ ಮೊತ್ತ ತಲಾ 50 ಸಾವಿರ ರೂ ನಗದು, ನೆನಪಿನ ಕಾಣಿಕೆ ಮತ್ತು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದು ಅಕಾಡೆಮಿ ತಿಳಿಸಿದೆ.

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯು 2019 ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ವಾರ್ಷಿಕ ಶಿಲ್ಪಕಲಾ ಪ್ರದರ್ಶನ-2019 ರ ಬಹುಮಾನ ವಿತರಣಾ ಸಮಾರಂಭ ಹಾಗೂ ಶಿಲ್ಪಕಲಾ ಪ್ರದರ್ಶನವನ್ನು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಮಾರ್ಚ್ 9 ರಂದು ಏರ್ಪಡಿಸಲಾಗಿದೆ ಎಂದು ತಿಳಿಸಿದೆ. 

2019 ನೇ ಸಾಲಿನ ಪ್ರಶಸ್ತಿ ಪುರಸ್ಕೃತರು: ಗಣೇಶ ಅಚಾರಿ(ಸಂಪ್ರದಾಯ ಶಿಲ್ಪ)  - ಉತ್ತರ ಕನ್ನಡ ಜಿಲ್ಲೆ, ಎಸ್.ಎನ್. ಸೋಮಾಚಾರ್ ಸಂಪ್ರದಾಯ ಶಿಲ್ಪ-ಮೈಸೂರು ಜಿಲ್ಲೆ, ಚನ್ನವೀರಸ್ವಾಮಿ ಗ. ಹಿಡ್ಮಿಮಠ, ಸಂಪ್ರದಾಯ ಶಿಲ್ಲ – ಧಾರವಾಡ ಜಿಲ್ಲೆ, ಎಸ್. ಜಿ. ನಾಗರಾಜ್ ಕಾಷ್ಠಶಿಲ್ಪ - ಬೆಂಗಳೂರು, ವಿಜಯರಾವ್ ಸಮಕಾಲೀನ ಶಿಲ್ಪ – ಮೈಸೂರು ಇವರನ್ನು ಆಯ್ಕೆ ಮಾಡಲಾಗಿದೆ. 

ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ವಾರ್ಷಿಕ ಶಿಲ್ಪಕಲಾ ಪ್ರದರ್ಶನ – 2019ಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಬಂದ ಸಾಂಪ್ರದಾಯಿಕ ಮತ್ತು ಸಮಕಾಲೀನ, ಜಾನಪದ ಶೈಲಿಯ ಕಲಾಕೃತಿಗಳಲ್ಲಿ ಆಯ್ಕೆ ಮತ್ತು ನಿರ್ಣಾಯಕ ಸಮಿತಿ 6 ಶಿಲ್ಪಿಗಳ ಕಲಾಕೃತಿಗಳನ್ನು ಅಕಾಡೆಮಿ ಬಹುಮಾನಕ್ಕೆ ಆಯ್ಕೆ ಮಾಡಲಾಗಿದ್ದು, ಮೈಸೂರಿನ ರಾಮ್‍ಸನ್ಸ್ ಕಲಾ ಪ್ರತಿಷ್ಠಾನ, ದಿ. ಕೆ.ಎಸ್.ಆರ್.ಪಿ. ಗಂಗಾಧರ್ ಎಂ. ಬಡಿಗೇರ, ವಿಜಯಪುರ, ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ, ಸ್ಮಾರಕ ಬಹುಮಾನ, ಅಜ್ಜಿಹಳ್ಲಿ, ಇವರು ಶಿಲ್ಪಕಲಾಕೃತಿಗಳಲ್ಲಿ ತಲಾ ಒಂದೊಂದು ಶಿಲ್ಪಕಲಾಕೃತಿಗೆ ಬಹುಮಾನ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುತ್ತಿದೆ. 

ಹದಿನೈದನೇ ವಾರ್ಷಿಕ ಶಿಲ್ಪಕಲಾ ಪ್ರದರ್ಶನ -2019 ಬಹುಮಾನ ವಿಜೇತರ ವಿವರ: ಅಮೀತ್ ಎಂ. ನಾಯಕ (ಬೆಂಗಳೂರು)  #FACE       (ಸಮಕಾಲೀನ) ಮಾಧ್ಯಮ – ಕಲ್ಲು, ಲಕ್ಷ್ಷ್ಮಣ್ ರಾವ್ ಜಾಧವ್ (ಮೈsಸೂರು)  Childwood Memory  (ಸಮಕಾಲೀನ) ಮಾಧ್ಯಮ – ಟೆರ್ರಾಕೋಟಾ, ಮಧುಸೂಧನ ಎಸ್ (ಚಾಮರಾಜನಗರ ಜಿಲ್ಲೆ) ಮೌಢ್ಯ (ಸಮಕಾಲಿನ) ಮಾಧ್ಯಮ – ಮಿಶ್ರಮಾಧ್ಯಮ) ಸುನಿಲ್ ಮಿಶ್ರಾ (ಬೆಂಗಳೂರು)  Human Monuments for Sale         (ಸಮಕಾಲೀನ) ಮಾಧ್ಯಮ – ಕಂಚು.
ಸಂತೋಷಕುಮಾರ್ ಚಿತ್ರಗಾರಿ(ಕೊಪ್ಪಳ ಜಿಲ್ಲೆ ಪ್ರೇಮ  (ಜಾನಪದ) ಮಾಧ್ಯಮ-ಮರ. ರಾಜೇಂದ್ರ ಪ್ರಸಾದ್ ಬಿ.ಎಸ್. (ಮೈಸೂರು) ಸತ್ಯನಾರಾಯಣ (ಸಂಪ್ರದಾಯ) ಮಾಧ್ಯಮ - ಬೆಳ್ಳಿ, ರಾಮಸನ್ಸ್ ಕಲಾ ಪ್ರತಿಷ್ಠಾನ ಮೈಸೂರು ಆಯ್ಕೆಯಾಗಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com